ಯೂಟ್ಯೂಬ್ ಸಂದರ್ಶನದಲ್ಲಿ ಅನನ್ಯಾ ಭಟ್ ಮಗಳೇ ಇಲ್ಲ. ಇದು ಕಾಲ್ಪನಿಕ ಕತೆ ಎಂದಿದ್ದ ಸುಜಾತಾ ಭಟ್ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಯೂಟ್ಯೂಬ್‌ನಲ್ಲಿ ಬಲವಂತವಾಗಿ ನನ್ನ ಮೂಲಕ ಹೇಳಿಕೆ ನೀಡಿಸಿದ್ದಾರೆ. ನನಗೆ ಮಗಳಿರುವುದು ನಿಜ ಎಂದು ಸುಜಾತಾ ಭಟ್ ಹೇಳಿದ್ದಾರೆ.

ಬೆಂಗಳೂರು (ಆ.22) ಧರ್ಮಸ್ಥಳ ಪ್ರಕರಣ ಸಂಬಂಧ ಕೋಲಾಹಲ ಎಬ್ಬಿಸಿದ ಸುಜಾತಾ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಯೂಟ್ಯೂಬ್ ಸಂದರ್ಶನಕ್ಕೆ ನೀಡಿದ ಹೇಳಿಕೆಯಲ್ಲಿ ಅನನ್ಯಾ ಭಟ್ ಕಾಲ್ಪನೆ ಕತೆ, ನಾನು ಸುಳ್ಳು ಹೇಳಿದ್ದೇನೆ. ಕ್ಷಮಿಸಿ ಎಂದಿದ್ದ ಸುಜಾತಾ ಭಟ್ ಇದೀಗ ಉಲ್ಟಾ ಹೊಡೆದಿದ್ದಾರೆ. ಮಗಳು ಅನನ್ಯಾ ಭಟ್ ಸತ್ಯ. ಬಲವಂತವಾಗಿ ಯೂಟ್ಯೂಬ್ ಚಾನೆಲ್ ನನ್ನ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಅನನ್ಯಾ ಭಟ್ ಕಾಲ್ಪನಿಕ ಕತೆಯಲ್ಲ, ಅದು ಸತ್ಯ ಎಂದು ಸುಜಾತಾ ಭಟ್ ಹೇಳಿದ್ದಾರೆ.

ಇನ್‌ಸೈಟ್‌ರಶ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಜಾತಾ ಭಟ್ ಇಡೀ ಕತೆಯೇ ಸೃಷ್ಟಿ. ನನಗೆ ಆಸ್ತಿ ಸಿಗಲಿಲ್ಲ ಅನ್ನೋ ಕಾರಣದಿಂದ ಧರ್ಮಸ್ಥಳ ವಿರುದ್ಧ ಹೋರಾಟಕ್ಕಿಳಿದೆ. ಈ ವೇಳೆ ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಕಾಲ್ಪನಿಕ ಕತೆ ಸೃಷ್ಟಿ ಮಾಡಿದರು. ಅದರಂತೆ ನಾನು ಹೇಳಿದೆ ಎಂದು ಯೂಟ್ಯೂಬ್‌ಗೆ ಚಾನೆಲ್ ನೀಡಿದ ಸಂದರ್ಶನದಲ್ಲಿ ಹೇಳಿದ್ದ ಸುಜಾತಾ ಭಟ್, ಇದೀಗ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ. ಇದು ಒತ್ತಾಯಪೂರ್ವಕವಾಗಿ ಹೇಳಿಸಿದ ಹೇಳಿಕೆ ಎಂದು ಸುಜಾತಾ ಭಟ್ ಹೇಳಿದ್ದಾರೆ.

ಅನನ್ಯಾ ಭಟ್ ಹುಟ್ಟಿದ್ದು ನಿಜ

ಅನನ್ಯಾ ಭಟ್ ಹುಟ್ಟಿದ್ದು ನಿಜ. ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು ನಿಜ. ನನ್ನ ಪ್ರಕರಣ ಸುಳ್ಳಲ್ಲ. ಫೋಟೋ ಕೂಡ ಅನನ್ಯಾ ಭಟ್ ಅವರದ್ದೇ, ಅದು ವಾಸಂತಿ ಫೋಟೋ ಅಲ್ಲ. ಅದು ಅನನ್ಯಾ ಭಟ್ ಫೋಟೋ. ನನ್ನ ಮಗಳಿಗೆ ನ್ಯಾಯ ಬೇಕು ಎಂದು ಸುಜಾತಾ ಭಟ್ ಹೇಳಿದ್ದರೆ.

ನನ್ನ ಮೂಲಕ ಸುಳ್ಳು ಹೇಳಿಸುತ್ತಿದೆ ಯೂಟ್ಯೂಬ್

ನನ್ನ ಮೂಲಕ ಯೂಟ್ಯೂಬ್‌ನವರು ಸುಳ್ಳು ಹೇಳಿಸುತ್ತಿದ್ದಾರೆ. ನಾನು ಯೂಟ್ಯೂಬ್‌ನಲ್ಲಿ ಹೇಳಿದ್ದೆಲ್ಲವೂ ಸುಳ್ಳು. ಬಲವಂತವಾಗಿ ಹೇಲಿಕೆ ಕೊಡಿಸಿದ್ದಾರೆ. ಯೂಟ್ಯೂಬ್‌ನವರು ಕಾರಿನಲ್ಲಿ ಕೂರಿಸಿ, ಕೆಲವರ ಹೆಸರು ಹೇಳುವಂತೆ ಬಲವಂತ ಮಾಡಿದ್ದಾರೆ. ಹೀಗಾಗಿ ಹೇಳಿದ್ದೇನೆ. ಯೂಟ್ಯೂಬ್‌ನಲ್ಲಿನ ಮಾತುಗಳೆಲ್ಲವೂ ಸುಳ್ಳು ಎಂದು ಸುಜಾತಾ ಭಟ್ ಹೇಳಿದ್ದಾರೆ.

ಎಸ್‌ಐಟಿಗೆ ಹೋಗಿ ಬಂದ ಬಳಿಕ ಹಾಕಿ ಎಂದಿದ್ದೆ

ನನ್ನ ಸಂದರ್ಶನ ವಿಡಿಯೋವನ್ನು ಎಸ್‌ಐಟಿಗೆ ಹೋಗಿ ಬಂದ ಬಳಿಕ ಹಾಕಿ ಎಂದು ಹೇಳಿದ್ದೆ. ಆದರೆ ಅದಕ್ಕೂ ಮೊದಲೇ ವಿಡಿಯೋ ಹಾಕಿದ್ದೀರಿ. ನಾನು ಬೇಡ ಎಂದರೂ ವಿಡಿಯೋ ಪೋಸ್ಟ್ ಮಾಡಿದ್ದೇಕೆ? ನಾನು ಹೇಳಿರುವುದು ಒಂದು, ನೀವು ಮಾಡುತ್ತಿರುವುದು ಒಂದು. ನನ್ನನ್ನು ಬಲವಂತವಾಗಿ ಕೂರಿಸಿ ಸಂದರ್ಶನ ಕೊಡಿಸಿದ್ದಾರೆ ಎಂದು ಸುಜಾತಾ ಭಟ್ ಹೇಳಿದ್ದಾರೆ.

ಎಸ್ಐಟಿ ಹೋಗುತ್ತಿದ್ದೇನೆ, ಅಲ್ಲಿ ಸತ್ಯಾಂಶ ಬಯಲಾಗಲಿದೆ

ನಾನು ಎಸ್‌ಐಟಿಗೆ ಹೋಗುತ್ತಿದ್ದೇನೆ. ಎಸ್ಐಟಿ ವಿಚಾರಣೆ ಬಳಿಕ ಸತ್ಯಾಂಶ ಬಯಲಾಗಲಿದೆ. ಅನನ್ಯಾ ಭಟ್ ಕುರಿತು ಎಲ್ಲಾ ದಾಖಲೆಗಳು ಇವೆ. ಅದನ್ನು ಎಸ್‌ಐಟಿ ತನಿಖೆಗೆ ಮುಂದೇ ಹೇಳುತ್ತೇನೆ. ಅಲ್ಲಿ ಸತ್ಯಾಂಶ ಬಯಲಾಗಲಿದೆ. ಮಗಳಿಗೆ ನ್ಯಾಯ ಸಿಗಬೇಕಿದೆ ಎಂದು ಸುಜಾತಾ ಭಟ್ ಹೇಳಿದ್ದಾರೆ.