ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿ 7 ಜನರ ಜಾಮೀನು ರದ್ದಾಗಿದೆ. ದರ್ಶನ್ ತಮಿಳುನಾಡಿನಲ್ಲಿದ್ದು, ಬಳ್ಳಾರಿ ಜೈಲಿಗೆ ಹೋಗಲಿದ್ದಾರೆ. ಪವಿತ್ರಾ ಗೌಡರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿ 7 ಜನ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಇದರ ಬೆನ್ನಲ್ಲೇ ದರ್ಶನ್ ತಮಿಳುನಾಡಿನಲ್ಲಿರುವ ವಿಚಾರ ಬೆಳಕಿಗೆ ಬಂದಿದೆ. ದರ್ಶನ್ ಬಳ್ಳಾರಿ ಜೈಲಿಗೆ ಹೋಗಲಿದ್ದು ಪವಿತ್ರಾ ಗೌಡ ಬೆಂಗಳೂರಿನಲ್ಲೇ ಇದ್ದು, ಪರಪ್ಪನ ಅಗ್ರಹಾರಕ್ಕೆ ತೆರಳಲಿದ್ದಾರೆ.
ಇನ್ನು ರಾಜರಾಜೇಶ್ವರಿ ದೇಗುಲದಲ್ಲಿದ್ದಾಗಲೇ ಪವಿತ್ರಾ ಗೌಡಗೆ ಬೇಲ್ ರದ್ದಾದ ಸುದ್ದಿ ತಿಳಿದುಬಂದಿತ್ತು. ವಕೀಲರಿಂದ ಫೋನ್‌ನಲ್ಲಿ ವಿಷ್ಯ ತಿಳಿದುಕೊಂಡರು. ಅಲ್ಲಿಂದ ಟೆನ್ಷನ್‌ನಲ್ಲಿ ನಿವಾಸಕ್ಕೆ ತೆರಳಿದ ಪವಿತ್ರಾ ಗೌಡ ಹೊರಗಡೆ ಹೊರಡಲು ಸಿದ್ದರಾಗಿದ್ದರು. ಈ ವೇಳೆ ಪೊಲೀಸರು ಮಫ್ತಿಯಲ್ಲಿ ತಕ್ಷಣ ಮನೆ ಬಳಿಗೆ ಬಂದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನಲೆಯಲ್ಲಿ, ಆರೋಪಿ ಪವಿತ್ರಾ ಗೌಡ ಇದೀಗ ತೀವ್ರ ನಿಗಾದಲ್ಲಿದ್ದಾರೆ. ಮನೆಯಿಂದ ಹೊರಡಲು ಕಾರನ್ನು ಸಿದ್ಧಪಡಿಸುತ್ತಿದ್ದ ವೇಳೆ, ಆರ್.ಆರ್.ನಗರ ಪೊಲೀಸರು ಮನೆ ಹೊರಭಾಗದಲ್ಲೇ ಮಪ್ತಿಯಲ್ಲಿ ನಿಂತಿದ್ದರು.
ಪವಿತ್ರಾ ಗೌಡ ಹೊರಗೆ ಹೋಗಲು ಯತ್ನಿಸಿದಾಗ, ಪೊಲೀಸರು ತಕ್ಷಣ ತಡೆದು, ಮನೆಯಿಂದ ಹೊರಬರಬಾರದೆಂದು ಎಚ್ಚರಿಕೆ ನೀಡಿದರು. ಮನೆಯಲ್ಲಿ ಇರುವಂತೆ ಸ್ಪಷ್ಟ ಸೂಚನೆ ನೀಡಿರುವ ಪೊಲೀಸರು, ಪವಿತ್ರಾ ಗೌಡ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.
