ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹಾಸನ (ಆ.13) ಹಿಂದೂ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಿದ್ದ ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ಸಂಕಷ್ಟ ಎದುರಾಗಿದೆ. ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೋಮುಸೌಹಾರ್ಧತೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದ್ದಾರೆ. ಎಸ್‌ಪಿ ಮಾಡಿದ್ದ ಮನವಿ ಪುರಸ್ಕರಿಸಿದ್ದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದಿಕ್ಸೂಚಿ ಭಾಷಣಕಾರರಾಗಿದ್ದ ಪುನೀತ್

ಅಖಂಡ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿ ದಿಕ್ಸೂಚಿ ಭಾಷಣಕಾರರಾಗಿ ಆಹ್ವಾನ ನೀಡಲಾಗಿತ್ತು. ಆದರೆ ಪುನೀತ್ ಕೆರೆಹಳ್ಳಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ಸಕಲೇಶಪುರ ಪ್ರವೇಶ ಕ್ಕೆ ನಿರ್ಬಂಧ ಹೇರುವಂತೆ ಎಸ್‌ಪಿ (ಪೊಲೀಸ್ ) ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಪುನೀತ್ ಕೆರೆಹಳ್ಳಿ ಪ್ರಚೋದನಕಾರಿ ಭಾಷಣ ಮಾಡಿ ಜನರ ಭಾವನೆಗಳಿಗೆ ಪುನೀತ್ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದರು. ಈ ಮನವಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪುನೀತ್ ಕೆರಹಳ್ಳಿ ಸಕಲೇಶಪುರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆ ಇದೆ ಎಂದು ಡಿಸಿಗೆ ವರದಿ ನೀಡಲಾಗಿತ್ತು. ಹೀಗಾಗಿ ಡಿಸಿ ಈ ತಕ್ಷಣದಿಂದ ನಾಳೆ (ಆ.14) ಬೆಳಗ್ಗೆ 6 ಗಂಟೆ ವರೆಗೆ ಸಕಲೇಶಪುರ ಪ್ರವೇಶ ನಿರ್ಬಂಧ ಹೇರಿ ಡಿಸಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 13 ರಿಂದ ಆಗಸ್ಟ್ 14ರ ಬೆಳಗ್ಗೆ 6 ಗಂಟೆ ವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಎನ್ ಎಸ್ ಎಸ್ 2023 ರ ಸೆಕ್ಷನ್ 163 ರಡಿ ಪ್ರವೇಶ ನಿರ್ಬಂಧ ಹೇರಿ ಡಿಸಿ ಆದೇಶ ಹೊರಡಿಸಲಾಗಿದೆ.

ಇಂದು ಸಂಜೆ ಆಯೋಜನೆಗೊಂಡಿದ್ದ ಕಾರ್ಯಕ್ರಮ

ಸಕಲೇಶಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಅಖಂಡ ಭಾರತ ಸಂಕಲ್ಪ ಯಾತ್ರೆ ಪಂಜಿನ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸಿದೆ. ಸಂಜೆ 6.30 ರಿಂದ ರಾತ್ರಿ 8.30ರ ವರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪುನೀತ್ ಕೆರೆಹಳ್ಳಿ ಇವರು ಬಲಪಂಥಿಯ ವಿಚಾರ ಧಾರೆಯಿಂದ ಪ್ರಭಾವಿತರಾಗಿ ಪ್ರಚೋದನಕಾರಿಯಾಗಿ ಭಾಷಣವನ್ನು ಮಾಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಹಾಗೂ ಹಿಂದೂ ಧರ್ಮದ ಪ್ರಬಲ ಪ್ರತಿವಾದಕರಾಗಿದ್ದು, ಪ್ರಚೋದನಾಕಾರಿಯಾಗಿ ಕೋಮುವೈಷಮ್ಯ ಸೃಷ್ಟಿಸುವ ಭಾಷಣ ಕೂಡ ಮಾಡುವವರಾಗಿರುತ್ತಾರೆ. ಸದರಿಯವರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಹಲೆವೆಡೆ ಪ್ರಕರಣ ದಾಖಲಾಗಿದೆ. ಇದೀಗ ಸಕಲೇಶಪುರದಲ್ಲಿ ಇದೇ ರೀತಿ ಭಾಷಣ ಮಾಡಿ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದರು.

ಸಕಲೇಶಪುರ ನಗರವು ಹಾಸನ ಜಿಲ್ಲೆಯಲ್ಲಿ ಮಂಗಳೂರು-ಹಾಸನದ ಗಡಿಭಾಗದ ನಗರವಾಗಿದೆ.ಈ ನಗರವು ಕೋಮುಸೂಕ್ಷ್ಮ ಪ್ರದೇಶವಾಗಿದೆ. ಪುನೀತ್ ಕೆರೆಹಳ್ಳಿ ತಮ್ಮ ಪ್ರಚೋದಾನಾತ್ಮಕ ಭಾಷಣಗಳಿಂದ ಜನರ ಭಾವನೆಗಳಿಗೆ ಧಕ್ಕೆಯುನ್ನುಂಟು ಮಾಡಿ, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗುವಂತೆ ಭಾಷಣ ಮಾಡುವುದರಿಂದ ಪುನೀತ್ ಕೆರೆಹಳ್ಳಿಗೆ ನಿರ್ಬಂಧಿಸುವಂತೆ ಪೊಲೀಸರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು.

ಸಾಮಾಜಿಕ ಸುವ್ಯವಸ್ಥೆಗೆ ತೊಂದರೆ ಆಗದಿರುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಸಕಲೇಶಪುರ ತಾಲ್ಲೋಕಿನ ಸರಹದ್ದಿನೊಳಗೆ ಪುನೀತ್ ಕೆರೆಹಳ್ಳಿ ರವರು ಪ್ರವೇಶಿದಂತೆ ನಿರ್ಭಂಧಿಸುವ ಕಲಂ 163 ಬಿಎನ್‌ಎಸ್‌ಎಸ್ ಕಾಯ್ದೆ 2023ರ ಅಡಿಯಲ್ಲಿ ನಿರ್ಬಂಧಿಸಿ ಆದೇಶಿಸುವಂತೆ ಕೋರಿದ್ದರು.