ಚೀಫ್ ಸೆಕ್ರೆಟರಿ ಶಾಲಿನಿ ರಜನೀಶ್ ವಿರುದ್ಧ ಎನ್ ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ರವಿಕುಮಾರ್‌ಗೆ ನಾಯಿಗಳಿಗೆ ಬರುವ ಮೂರು ಕಾಯಿಲೆಗಳಿವೆ ಎಂದು ವ್ಯಂಗ್ಯವಾಡಿದ್ದಾರೆ. 

ಬೆಂಗಳೂರು (ಜು.4): ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್‌ಗೆ ನಾಯಿಗಳಿಗೆ ಬರುವ ಮೂರು ಕಾಯಿಲೆಗಳು ಬಂದಿವೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ಸಿಎಂ ಚೀಫ್ ಸೆಕ್ರೆಟರಿ ಶಾಲಿನಿ ರಜನೀಶ್ ವಿರುದ್ಧ ಎನ್‌ ರವಿಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ಆರೋಪ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಚೀಫ್ ಸೆಕ್ರೆಟರಿ ಶಾಲಿನಿ ರಜನೀಶ್ ಅವರು ಒಳ್ಳೆಯ ಕೆಲಸಗಳನ್ನ ಮಾಡುತ್ತಿದ್ದಾರೆ ಎಂದು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇಂತಹ ದಕ್ಷ ಅಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರವಿಕುಮಾರಗೆ ಹುಚ್ಚು ಹಿಡಿದಿದೆ ಎಂದು ತೀಕ್ಷ್ಣ ಟೀಕಿಸಿದರು.

ನಾಯಿಗಳಿಗೆ ಮೂರು ಕಾಯಿಲೆ ರವಿಕುಮಾರಗೆ ಬಂದಿದೆ:

ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್‌ಗೆ ನಾಯಿಗಳಿಗೆ ಬರುವ ಮೂರು ಕಾಯಿಲೆಗಳು ಬಂದಿವೆ. ಮೊದಲನೆಯದಾಗಿ, ಸುಮ್ಮನೆ ಬೊಗಳುವ ಖಾಯಿಲೆಯನ್ನು ಕ್ಯಾನೈನ್ ಡಿಸ್ಟಂಪರ್‌ಗೆ ಹೋಲಿಸಿದ್ದಾರೆ. ಎರಡನೆಯದಾಗಿ, ಮೆಂಟಲ್ ಕನ್ಫ್ಯೂಷನ್ ಮತ್ತು ಸುಮ್ಮನೆ ಕೋಪ ಮಾಡಿಕೊಳ್ಳುವ ಲಕ್ಷಣವನ್ನು ರೇಬಿಸ್ ಕಾಯಿಲೆಗೆ ಸಮಾನಗೊಳಿಸಿದ್ದಾರೆ. ಮೂರನೆಯದಾಗಿ, ಪಾರೋ ವೈರಸ್‌ನಂತಹ ಕಾಯಿಲೆಯನ್ನು ಉಲ್ಲೇಖಿಸಿ, ರವಿಕುಮಾರ್ ಈ ವೈರಸ್‌ಗಳನ್ನು ಯಾರಿಗೆಲ್ಲಾ ಅಂಟಿಸಿದ್ದಾರೋ ಅವರಿಗೆ ಈ ಮೂರು ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಜೊತೆಗೆ, ರವಿಕುಮಾರ್‌ಗೆ ಕೆಲವರು ಕೋತಿ ನಾಯಿ ಎಂದು ಕರೆಯುವುದು ಸರಿಯಲ್ಲ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ. ಈ ಬಗ್ಗೆ ಕೆಲವರಿಗೆ ಬುದ್ಧಿವಾದ ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ. ರವಿಯಣ್ಣಾ ಈ ಮೂರು ಕಾಯಿಲೆಗಳನ್ನು ವಾಸಿಮಾಡಿಕೊಳ್ಳಲಿ ಎಂದು ಕುಟುಕಿದ್ದಾರೆ.

ಅಂತಿಮವಾಗಿ, ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿದ್ದಾರೆ. ಜೊತೆಗೆ, Girl Child is Not Tension, Girl Child is Equal to Ten Sons ಎಂಬ ಸಂದೇಶದ ಮೂಲಕ ಮಹಿಳೆಯರ ಮಹತ್ವವನ್ನು ತಿಳಿಸುವ ಮೂಲಕ ಎನ್‌ ರವಿ ಕುಮಾರ್‌ಗೆ ಚಾಟಿ ಬೀಸಿದ್ದಾರೆ.