ಕೊಪ್ಪಳದಲ್ಲಿ ಯುವಕನಿಗೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಫೋನ್ ಕರೆಯಲ್ಲಿ ನಿಂದನೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಕೊಪ್ಪಳ (ಸೆ.12): ಫೋನ್ ಕರೆ ಮಾಡಿದ ಯುವಕನಿಗೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವಾಚ್ಯವಾಗಿ ನಿಂದಿಸಿದ ಗಂಭೀರ ಆರೋಪ ಕೇಳಿಬಂದಿದೆ.
ಕೊಪ್ಪಳ ಜಿಲ್ಲೆಯ ಕವಲೂರು ಓಣಿ ನಿವಾಸಿ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕ ಮಂಜುನಾಥ್ ನಾಯಕ್ ಎಂಬುವವರಿಗೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂಭಾಷಣೆ ವಿಡಿಯೋ ರೆಕಾರ್ಡ್ ಆಗಿದ್ದು ಅದರಲ್ಲಿ ನಿಂದಿಸಿರುವುದು ದಾಖಲಾಗಿದೆ
ಫೋನ್ ಇಡಲೋ ಸುವ್ವರ್ ಎಂದ ರಜಾಕ್!
ಸೆಪ್ಟೆಂಬರ್ 3, 2025 ರಂದು ಟಿವಿ ಡಿಬೇಟ್‌ನಲ್ಲಿ ಬಳಸುವ ಭಾಷೆ ವಿಚಾರಕ್ಕೆ ಮಂಜುನಾಥ ನಾಯಕ್ ಎಂಬ ಯುವಕ ಅಬ್ದುಲ್ ರಜಾಕ್ ಗೆ ಕರೆ ಮಾಡಿ, 'ನೀವು ಮಾದ್ಯಮದಲ್ಲಿ ಮಾತಾಡೋವಾಗ ಇಡಿಯಟ್ ಅಂತೀರಿ ಅದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಂಜುನಾಥ ನಾಯಕ್. ಈ ವೇಳೆ ಅಬ್ದುಲ್ ರಜಾಕ್ ಅವರು 'ಫೋನ್ ಇಡಲೋ ಸುವ್ವರ್..' ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮಂಜುನಾಥ ಆರೋಪಿಸಿದ್ದಾರೆ. ಈ ಕುರಿತು ಅವರು ಆಡಿಯೋ ರೆಕಾರ್ಡಿಂಗ್ ಸಹಿತ ನಗರ ಠಾಣೆಗೆ ದೂರು ನೀಡಿದ್ದಾರೆ.
ಅಬ್ದುಲ್ ರಜಾಕ್ ಅವರು ನನಗೆ 'ಸುವ್ವರ್' ಎಂದು ನಿಂದಿಸಿದ್ದು, ಮಾನಸಿಕವಾಗಿ ನೋವುಂಟು ಮಾಡಿದೆ. ಇದು ಸ್ಪಷ್ಟವಾಗಿ ಜಾತಿ ನಿಂದನೆಯಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ, ಜಾತಿ ನಿಂದನೆ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ದೂರಿನೊಂದಿಗೆ ಈ ಆಡಿಯೋ ರೆಕಾರ್ಡಿಂಗ್ ಸಲ್ಲಿಸಲಾಗಿದೆ. ದೂರು ಸ್ವೀಕರಿಸಿ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.
