ಸಮೀಕ್ಷೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ 'ಟೂ ಮಚ್' ಹೇಳಿಕೆಗೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಇದು ಜಾತಿ ಗಣತಿಯಲ್ಲ, ಕೇವಲ ಒಂದು ಸಮೀಕ್ಷೆ ಎಂದ ಅವರು, ಇದರಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳ (ಅ.4): ಸಮೀಕ್ಷೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ ಅವರು'ಟೂ ಮಚ್' ಅಂದಿರೋ ವಿಚಾರ ನನಗೆ ಗೊತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ಹೇಳಿದರು
ಸಮೀಕ್ಷೆ ಕುರಿತು ಡಿಕೆ ಶಿವಕುಮಾರ್ ಅಕ್ಷೇಪ ವಿಚಾರ ಸಂಬಂಧ ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ಇವತ್ತು ಸಮೀಕ್ಷೆಗೆ ನಮ್ಮ ಮನೆಗೂ ಬಂದಿದ್ದರು, ನಾನು ಮಾಹಿತಿ ಕೊಟ್ಟಿದ್ದೇನೆ. ಆದರೆ, ತೀರಾ ವೈಯಕ್ತಿಕ ಪ್ರಶ್ನೆಗಳು ಇದರಲ್ಲಿ ಯಾವುದೂ ಇರಲಿಲ್ಲ. ಟ್ರ್ಯಾಕ್ಟರ್ ಇದೆಯೋ ಇಲ್ಲವೋ ಎಂಬಂತಹ ಪ್ರಶ್ನೆಗಳನ್ನು ಕೇಳಿರಬಹುದು. ಕೆಲವೊಮ್ಮೆ ಸಮೀಕ್ಷೆ ಮಾಡುವವರು ಅತಿರೇಕವಾಗಿ ಕೇಳಿರಬಹುದು ಎಂದು ಸಚಿವ ತಂಗಡಗಿ ಹೇಳಿದರು.
ಜಾತಿ ಗಣತಿಯನ್ನು ನಾವು ಮಾಡುತ್ತಿಲ್ಲ, ಅದು ಕೇಂದ್ರ ಸರ್ಕಾರದ ಜವಾಬ್ದಾರಿ. ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂಬ ಒತ್ತಡವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಹೇಳಿಕೆಯಿಂದ ಜಾತಿ ಗಣತಿ ಸಂಬಂಧಿಸಿದ ವಿವಾದಕ್ಕೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಂತಾಗಿದೆ.
