ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇದೀಗ ಸಕಲೇಶಪುರದ ಮಾರನಹಳ್ಳಿ ಬಳಿ ಗುಡ್ಡ ಕುಸಿದು ಹೆದ್ದಾರಿ ಬಂದ್ ಆಗಿದೆ. ಇದರ ಪರಿಣಾಮ ಶಿರಾಡಿ ಘಾಟ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಹಾಸನ (ಆ.16) ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಇತ್ತ ಹಾಸನ ಜಿಲ್ಲೆಯ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಸಕಲೇಶಪುರದ ಮಾರನಹಳ್ಳಿ ಬಳಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದಿದೆ. ಮರಗಿಡ ಸಮೇತ ಗುಡ್ಡ ಕುಸಿದ ಹೆದ್ದಾರಿ ಮೇಲೆ ಬಿದ್ದಿದೆ. ಇದರ ಪರಿಣಾಮ ಬೆಂಗಳೂರು-ಮಂಗಳೂರು ಹೆದ್ದಾರಿ 75 ಸಂಚಾರ ಬಂದ್ ಆಗಿದೆ. ವಾರಂತ್ಯದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ರಸ್ತೆ ಮೂಲಕ ಸಾಗುತ್ತಿದೆ. ಆದರೆ ಗುಡ್ಡ ಕುಸಿತದ ಪರಿಣಾಮ ರಸ್ತೆ ಬಂದ್ ಆಗಿದ್ದು ಶಿರಾಡಿ ಘಾಟ್ ಜಾಮ್ ಆಗಿದೆ. ರಸ್ತೆಯಲ್ಲಿ ಸಿಲುಕಿದ ವಾಹನ ಸವಾರರು ಪರದಾಡುವಂತಾಗಿದೆ.

ಶಿರಾಡಿ ಘಾಟ್ ಸಂಪೂರ್ಣ ಜಾಮ್

ವೀಕೆಂಡ್ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರವಿದೆ. ಇತ್ತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿದು ಬಿದ್ದಿದೆ. ಮಾರನಹಳ್ಳಿ ಮಾತ್ರವಲ್ಲ, ಶಿರಾಢಿ ಘಾಟ್ ಹಲೆವೆಡೆ ಭೂಕುಸಿತ ಸಂಭವಿಸಿದೆ. ಹೀಗಾಗಿ ಶಿರಾಢಿ ಘಾಟ್ ಸಂಪೂರ್ಣ ವಾಹನ ಜಾಮ್ ಆಗಿದೆ. ಜೆಸಿಬಿ ಮೂಲಕ ಮಣ್ಣು ತೆರುವು ಕಾರ್ಯಾಚರಣೆ ನಡೆಯುತ್ತಿದೆ. ಇತ್ತ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದಾರೆ. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಡಬೇಕಾಗಿದೆ.

ಬೆಂಗಳೂರು-ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆ

ಬೆಂಗಳೂರು ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿ 75ರಲ್ಲಿ ಈ ಗುಡ್ಡ ಕುಸಿತ ಸಂಭವಿಸಿದೆ. ಮಾರನಹಳ್ಳಿ, ಶಿರಾಡಿ ಘಾಟ್ ಕೆಲವೆಡೆ ಗುಡ್ಡ ಕುಸಿದಿದೆ. ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರುವ ಕಾರಣ ಕೆಲೆವೆಡೆ ಮಣ್ಣು ತೆರವು ಮಾಡಲು ಜೆಸಿಬಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ನಿರಂತವಾಗಿ ಸುರಿಯುತ್ತಿರುವ ಮಳೆ

ಮಣ್ಮು ತೆರೆವು ಕಾರ್ಯಾಚರೆಣೆಗೂ ಮಳೆ ಅಡ್ಡಿಯಾಗುತ್ತಿದೆ. ಇಷ್ಟೇ ಅಲ್ಲ ಮತ್ತಷ್ಟು ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ಸವಾಲು ಎದುರಾಗಿದೆ. ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಬಾರಿ ಮಳೆಯಾಗುತ್ತಿದೆ. ಸಕೇಶಪುರ, ಯೆಡಕಮುರಿ, ಶಿರಾಡಿ ಘಾಟ್ ಸೇರಿದಂತೆ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ.

ಬೆಂಗಳೂರು-ಮಂಗಳೂರು ರೈಲು ಹಳಿ ಮೇಲೂ ಕುಸಿದ ಗುಡ್ಡ

ಸಕಲೇಶಪುರದ ಯೆಡಕುಮರಿ ಬಳಿ ಗುಡ್ಡ ಕುಸಿತು ರೈಲು ಹಳಿ ಮೇಲೆ ಬಿದ್ದಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ರೈಲು ಹಳಿ ಮೇಲೆ ಬಿದ್ದಿದೆ. ಇತ್ತ ರೈಲು ಹಳಿ ಮೇಲೆ ನೀರು ತುಂಬಿ ಹರಿಯುತ್ತಿದೆ. ರೈಲು ಹಳಿ ಮೇಲೆ ಗುಡ್ಡ ಕುಸಿದ ಕಾರಣ ರೈಲು ಸಂಚಾರದಲ್ಲೂ ವ್ಯತ್ಯಯವವಾಗಿದೆ.