ಹಾಸನಾಂಬ ಉತ್ಸವದ ಸಮಾರೋಪದ ಅಂಗವಾಗಿ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ, ಜಿಲ್ಲಾಧಿಕಾರಿ ಲತಾಕುಮಾರಿ ಅವರು ನೂರಾರು ಭಕ್ತರೊಂದಿಗೆ ಕೆಂಡ ಹಾಯ್ದು ಭಕ್ತಿ ಮೆರೆದರು. 13 ದಿನಗಳ ಕಾಲ ನಡೆದ ಈ ಉತ್ಸವವು ಲಕ್ಷಾಂತರ ಭಕ್ತರನ್ನು ಆಕರ್ಷಿಸಿದ್ದು, ದೇಗುಲದ ಆದಾಯವು ₹25 ಕೋಟಿಯನ್ನು ಸಮೀಪಿಸಿದೆ.

ಹಾಸನ (ಅ.23): ಹಾಸನಾಂಬ ಉತ್ಸವದ ಸಮಾರೋಪ ಸಂದರ್ಭದಲ್ಲಿ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಭಕ್ತಿಯಿಂದ ಕೆಂಡ ಹಾಯ್ದು ಸಾರ್ವಜನಿಕರ ಗಮನ ಸೆಳೆದರು.

ಕೆಂಡ ಹಾಯ್ದು ಭಕ್ತಿ ಮೆರೆದ ಹಾಸನ ಜಿಲ್ಲಾಧಿಕಾರಿ

ಶ್ರದ್ಧಾಭಕ್ತಿಯಿಂದ ಆಚರಿಸಲಾದ ಈ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ, ಕೆಂಡದ ಮೇಲೆ ಹಾಯ್ದು ತಮ್ಮ ಭಕ್ತಿಯನ್ನು ಮೆರೆದರು. ಜನರ ಜೊತೆಗೆ ಡಿಸಿ ಲತಾಕುಮಾರಿ ಕೂಡ ಕೆಂಡ ಹಾಯ್ದು ದೇವರಿಗೆ ತಮ್ಮ ಭಕ್ತಿಯನ್ನ ಸಲ್ಲಿಸಿದರು. ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿತು.

ಇಂದು ಮಧ್ಯಾಹ್ನ ಗರ್ಭಗುಡಿ ಬಾಗಿಲು ಬಂದ್:

ಇಂದು, ಅಕ್ಟೋಬರ್ 23ರ ಮಧ್ಯಾಹ್ನ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಕಳೆದ 13 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದಿದ್ದು, ದೇಗುಲದ ಆದಾಯ ₹25 ಕೋಟಿಗೆ ಸಮೀಪಿಸಿದೆ. ಈ ಕೆಂಡೋತ್ಸವವು ಉತ್ಸವದ ಮುಕ್ತಾಯವು ಭಕ್ತರಲ್ಲಿ ಭಕ್ತಿ-ಭಾವ ಮೆರೆದರು. ಇದರಲ್ಲಿ ಭಕ್ತರು ಮತ್ತು ಗಣ್ಯರು ಒಂದಾದರು. ಸ್ವತಃ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಜನರೊಂದಿಗೆ ಸಾಮಾನ್ಯರೊಡನೆ ಬೆರೆತರು. ಈ ಘಟನೆಯು ಹಾಸನದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಎತ್ತಿ ತೋರಿಸಿತು, ಜೊತೆಗೆ ಜಿಲ್ಲಾಡಳಿತದ ಜನಸಾಮಾನ್ಯರೊಂದಿಗಿನ ಒಡನಾಟ ಇನ್ನಷ್ಟು ಮೆರಗು ನೀಡಿತು.