ಧರ್ಮಸ್ಥಳ ಶವಹೂತಿಟ್ಟ ಪ್ರಕರಣದ ಷಡ್ಯಂತ್ರ ಬಯಲಾಗುತ್ತಿದ್ದಂತೆ ದೂರುದಾರ ಚಿನ್ನಯ್ಯ ಅಲಿಯಾಸ್ ಮುಸುಕುದಾರಿ ಅರೆಸ್ಟ್ ಆಗಿದ್ದಾನೆ.   ಸುಜಾತಾ ಭಟ್‌ಗೂ ನಡುಕು ಶುರುವಾಗಿದೆ. ಯಾವುದೇ ಕ್ಷಣದಲ್ಲಿ ಸುಜಾತಾ ಭಟ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಧರ್ಮಸ್ಥಳ (ಆ.24) ಧರ್ಮಸ್ಥಳ ವಿರುದ್ದ ಮಾಡಿದ ನೂರಾರು ಶವ ಹೂತಿಟ್ಟ ಗಂಭೀರ ಆರೋಪದ ಷಡ್ಯಂತ್ರ ಬಯಲಾಗುತ್ತಿದ್ದಂತೆ ದೂರುದಾರ ಚಿನ್ನಯ್ಯ ಅಲಿಯಾಸ್ ಮುಸುಕುದಾರಿ ದೂರುದಾರ ಅರೆಸ್ಟ್ ಆಗಿದ್ದಾನೆ. ನಿನ್ನೆ(ಆ.23) ಮುಸುಕುದಾರಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ಮಾಸ್ಕ್ ಮ್ಯಾನ್ ಅರೆಸ್ಟ್ ಬೆನ್ನಲ್ಲೇ ಬುರುಡೆ ಗ್ಯಾಂಗ್ ಹಿಂದಿನ ಹಲವರಿಗೆ ನಡುಕು ಶುರುವಾಗಿದೆ. ಇದೇ ಪ್ರಕರಣ ಜೊತೆ ಭಾರಿ ಸದ್ದು ಮಾಡಿದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರೆ ಸುಜಾತಾ ಭಟ್‌ಗೆ ಸಂಕಷ್ಟ ಹೆಚ್ಚಾಗಿದೆ. ಇಂದು ಅಥವಾ ನಾಳೆ ಸುಜಾತಾ ಭಟ್ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಯಾವುದೇ ಕ್ಷಣದಲ್ಲೂ ಸುಜಾತಾ ಭಟ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಅನನ್ಯಾ ಭಟ್ ನಾಪತ್ತೆ ಪ್ರಕರಣದದಲ್ಲಿ ಅನುಮಾನ, ವಶಕ್ಕೆ ಪಡೆಯುವ ಸಾಧ್ಯತೆ

ಸುಜತಾ ಭಟ್ ಹಲವು ಗಂಭೀರ ಆರೋಪ ಮಾಡಿದ್ದಾರೆ. ದೂರಿನಲ್ಲಿ ಮಹತ್ವದ ವಿಚಾರ ಮುಂದಿಟ್ಟಿದ್ದಾರೆ. ಆದರೆ ಸುಜಾತಾ ಭಟ್ ದೂರಿನಲ್ಲಿ ಉಲ್ಲೇಖಿಸಿರುವ ಅಂಶಕ್ಕೂ, ನೈಜತೆಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಎಸ್ಐಟಿ ಅಧಿಕಾರಿಗಳು ಗಮನಿಸಿದ್ದಾರೆ. ಇತ್ತ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ಗಮನಿಸಿದ್ದಾರೆ. ವಯಸ್ಸಿನ ಕಾರಣದಿಂದ ಇಂದು ಅಥವಾ ನಾಳೆ ಸುಜಾತಾ ಭಟ್ ಅವರ ಮನೆಯಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇದೆ. ತನ್ನಲ್ಲಿ ಕೆಲ ದಾಖಲೆ ಇವೆ. ಅದನ್ನು ಎಸ್ಐಟಿಗೆ ನೀಡುತ್ತೇನೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ವಿಚಾರಣೆ ವೇಳೆ ಸುಜಾತಾ ಭಟ್ ಅನನ್ಯಾ ಭಟ್ ಕುರಿತು ದಾಖಲೆ ನೀಡಲು ವಿಫಲರಾದರೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಎಸ್ಐಟಿಯಿಂದ ಅನನ್ಯಾ ಭಟ್ ಮಿಸ್ಸಿಂಗ್ ಕೇಸ್ ತನಿಖೆ

ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಿದ ಬೆನ್ನಲ್ಲೇ ಸುಜಾತಾ ಭಟ್ ಕಂಗಾಲಾಗಿದ್ದಾರೆ. ಈಗಾಗಲೇ ಏಷ್ಯಾನೆಟ್ ಸುವರ್ಣನ್ಯೂಸ್ ಸುಜಾತಾ ಭಟ್ ಆರರೋಪದ ಹಿಂದಿನ ಅಸಲಿ ಕತೆಗಳನ್ನು ಬಹಿರಂಗಪಡಿಸಿದೆ. ಇತ್ತ ಎಸ್ಐಟಿ ಅಧಿಕಾರಿಗಳು ಸುಜಾತಾ ಭಟ್ ಇತಿಹಾಸವನ್ನೇ ಕೆದಕಿದ್ದಾರೆ. ಸುಜಾತಾ ಭಟ್ ಹೇಳಿಕೆ, ಆಕೆಯ ಆರೋಪ, ಸತ್ಯಾಂಶ, ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳು ತರಿಸಿಕೊಂಡಿದ್ದಾರೆ.

ಎಸ್‌ಐಟಿಯನ್ನೇ ಗೊಂದಲಕ್ಕೀಡು ಮಾಡಿದ ಸುಜಾತಾ ಭಟ್ ಹೇಳಿಕೆ

ಸುಜಾತಾ ಭಟ್ ಹೇಳಿಕೆಗಳು ಎಸ್ಐಟಿ ಅಧಿಕಾರಿಗಳನ್ನೇ ಗೊಂದಲಕ್ಕೀಡು ಮಾಡಿದೆ. ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸುಜಾತಭಟ್ ನೀಡಿರುವ ದೂರಿಗೂ, ಮಾಧ್ಯಮಗಳ ಮುಂದೆ ನೀಡ್ತಿರೋ ಹೇಳಿಕೆಗಳಿಗೂ ವ್ಯತ್ಯಾಸ ಕಾಣುತ್ತಿದೆ. ಪ್ರಾಥಮಿಕವಾಗಿ ಸುಜಾತ್ ಭಟ್ ಹೇಳಿಕೆ ದಾಖಲಿಸಲಾಗಿದೆ. ಇದೀಗ ವಿಚಾರಣೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಎಸ್ಐಟಿ ಸುಜಾತಾ ಭಟ್ ಕುರಿತು ಸಂಪೂರ್ಣ ಇತಿಹಾಸ ತೆಗೆದಿದ್ದಾರೆ.

ಕೆಲ ದಿನಗಳ ಹಿಂದೆ ಸುಜಾತ ಭಟ್ ಬೆಂಗಳೂರಿನ ನಿವಾಸಕ್ಕೆ ಬಂದಿದ್ದ ಎಸ್ಐಟಿ ಬಳಿಕ ವಾಪಾಸ್ಸಾಗಿತ್ತು. ಸುಜಾತಭಟ್ ನೀಡಿದ್ದ ದೂರಿನ ಸಂಬಂಧ ಇದುವರೆಗೂ ಯಾವುದೇ ದಾಖಲೆಯನ್ನು ಎಸ್ಐಟಿಗೆ ಸಲ್ಲಸಿಲ್ಲ.