ಧರ್ಮಸ್ಥಳ ಪ್ರಕರಣ ಸಂಬಂಧ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಸಮನ್ಸ್ ನೀಡಲು ಹೋದ ವಕೀಲರಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು (ಆ.18) ಧರ್ಮಸ್ಥಳ ಪ್ರಕರಣ ಇಂದು ಸದನದಲ್ಲಿ ಭಾರಿ ಚರ್ಚೆಯಾಗಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್ ಹಾಗೂ ವಿಪಕ್ಷಗಳು ಒತ್ತಿ ಹೇಳಿದೆ. ಇತ್ತ ಸೌಜನ್ಯ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಧರ್ಮಸ್ಥಳ, ಬುರುಡೆ ಪ್ರಕರಣಗಳ ಸಂಬಂಧ ಯೂಟ್ಯೂಬ್ ಚಾನೆಲ್ ಗಳಲ್ಲಿ ಅಪಪ್ರಚಾರ ಮಾಡಿದ ಕುರಿತು ಮಹೇಶ್ ಶೆಟ್ಟಿ ತಿಮರೋಡಿಗೆ ಸಮನ್ಸ್ ನೀಡಲು ಹೋದ ವಕೀರಲಿಗೆ ತಿಮರೋಡಿ ಗ್ಯಾಂಗ್ ಅಡ್ಡಿಪಡಿಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿತ್ತು. ವಾಗ್ವಾದಗಳು ನಡೆದಿದೆ.
ಮಹೇಶ್ ಶೆಟ್ಟಿ ಮನೆಯಲ್ಲಿ ನಡೆದ ಘಟನೆ
ಹ್ಯಾಂಡ್ ಸಮನ್ಸ್ ನೀಡಲು ಹೋದ ವಕೀಲರಿಗೆ ತಿಮರೋಡಿ ಗ್ಯಾಂಗ್ ತೀವ್ರವಾಗಿ ಅಡ್ಡಿಪಡಿಸಿದೆ. ಬೆಂಗಳೂರು ಟ್ರಯಲ್ ಕೋರ್ಟ್ ನೀಡಿದ್ದ ಹ್ಯಾಂಡ್ ಸಮನ್ಸ್‌ನ್ನು ಮಹೇಶ್ ಶೆಟ್ಟಿ ಮನೆಗೆ ತೆರಳಿ ನೀಡಲು ಮುಂದಾಗಿದ್ದರು. ಆದರೆ ಮಹೇಶ್ ಶೆಟ್ಟಿ ಗ್ಯಾಂಗ್ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿ ವಕೀರಲ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಮಾತಿಗೆ ಮಾತಿಗೆ ಬೆಳೆದದಿದೆ. ವಕೀಲರ ವಿರುದ್ಧವೇ ತಿಮರೋಡಿ ಗ್ಯಾಂಗ್ ವಾಗ್ವಾದ ನಡೆಸಿ ಪರಿಸ್ಥಿತಿ ಉದ್ವಿಘ್ನಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿವಾದಿಗಳಿಗೆ ನೀಡಬೇಕಾದ ಹ್ಯಾಂಡ್ ಸಮನ್ಸ್
ಯೂಟ್ಯೂಬ್ ಚಾನೆಲ್ ಗಳಲ್ಲಿ ಅಪಪ್ರಚಾರ ಮಾಡಿದ ಬಗ್ಗೆ ಇಂಜೆಕ್ಷನ್ ಪಡೆಯಲಾಗಿತ್ತು. ಈ ಪ್ರಕರಣ ಸಂಬಂಧ ಹ್ಯಾಂಡ್ ಸಮನ್ಸ್ ನೀಡಲು ಹೋದ ವಕೀಲರಿಗೆ ಅಡ್ಡಿಪಡಿಸಲಾಗಿದೆ ಎಂದು ವಕೀಲ ಅರ್ಜುನ್ ಆರೋಪಿಸಿದ್ದಾರೆ. ನಾವು ನಮ್ಮ ಲೀಗಲ್ ಡ್ಯೂಟಿ ಮಾಡಲು ಹೋಗಿದ್ದೆವು. ಆದರೆ ಹ್ಯಾಂಡ್ ಸಮನ್ಸ್ ಕೊಡಲು ಹೋದಾಗ ಗದ್ದಲ ಮಾಡಿದರು ಎಂದು ಆರೋಪಿಸಿದ್ದಾರೆ
ಮಹೇಶ್ ಶೆಟ್ಟಿ ಮನೆಯಲ್ಲಿದ್ದ ಗಿರೀಶ್ ಮಟ್ಟಣ್ಣನವರ್ , ಜಯಂತ್
ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ವಕೀರಲನ್ನು ಅಡ್ಡಿಪಡಿಸಿದಾಗ ಈ ಗ್ಯಾಂಗ್‌ನಲ್ಲಿ ಗಿರೀಶ್ ಮಟ್ಟಣ್ಣನವರ್, ಜಯಂತ್, ತನುಷ್ ಶೆಟ್ಟಿ ಸೇರಿದಂತೆ ಹಲವರು ಇದ್ದರು. ಇವತ್ತೆ ಸಮನ್ಸ್ ಕೊಡಬೇಕಿತ್ತು. ಹೀಗಾಗಿ ಮಹೇಶ್ ಶೆಟ್ಟಿ ಮನಗೆ ತೆರಳಿದ ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.
ಹ್ಯಾಂಡ್ ಸಮ್ಸ್ ಕೊಡುವುದು ನಮ್ಮ ಜವಾಬ್ದಾರಿಯಾಗಿತ್ತು. ಎಸ್ ಐ ಟಿ ತನಿಖೆ ಆರಂಭ ಆದಾಗ ನಡೆದ ಅಪಪ್ರಚಾರದ ಬಗೆಗಿನ ಇಂಜೆಕ್ಷನ್ ಆರ್ಡರ್ ಇದಾಗಿತ್ತು. ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಸುಳ್ಳು ಸುದ್ದಿ ಮಾಡದಂತೆ ಕೋರ್ಟ್ ಇಂಜೆಕ್ಷನ್ ಆರ್ಡರ್ ನೀಡಿತ್ತು. ನಾವು ನಮ್ಮ ಕರ್ತವ್ಯ ಮಾಡಲು ಹೋಗಿದ್ದೆವು. ಆಧರೆ ತಿಮರೋಡಿ ಗ್ಯಾಂಗ್ ನಮ್ಮನ್ನು ವಕೀಲರು ಎಂದು ನಂಬಲಿಲ್ಲ.ನಾವು ಏನು ಹೇಳಿದರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.
ಸಮನ್ಸ್ ಪಡೆಯದ ತಿಮರೋಡಿ
ವಕೀಲರು ಅದೆಷ್ಟೆ ಪ್ರಯತ್ನ ಪಟ್ಟರೂ ತಿಮರೋಡಿ ಗ್ಯಾಂಗ್ ವಾಗ್ವಾದ ನಿಲ್ಲಿಸಲಿಲ್ಲ. ಇಷ್ಟೇ ಅಲ್ಲ ಸಮನ್ಸ್ ಕೂಡ ಪಡೆಯಲು ನಿರಾಕರಿಸಿದ್ದರೆ. ನಾವು ಕೋಟು ಮತ್ತು ಐಡಿ ಕಾರ್ಡ್ ಹಾಕಿ ಬನ್ನಿ ಎಂದು ತಿಮರೋಡಿ ಗ್ಯಾಂಗ್ ಸೂಚಿಸಿದ್ದಾರೆ. ಹ್ಯಾಂಡ್ ಸಮನ್ಸ್ ಕೊಡಲು ಯಾರು ಬೇಕಾದರೂ ಬರಬಹುದು, ವಕೀಲರೇ ಬರಬೇಕು ಎಂದಿಲ್ಲ. ಅವರಿಗೆ ಕೋರ್ಟ್ ಆರ್ಡರ್ ಮೇಲೆ ನಂಬಿಕೆ ಇಲ್ಲ. ಬೆಂಗಳೂರು ಟ್ರೈಲ್ ಕೋರ್ಟ್ ಅವರು ಹೋಗಬೇಕಿತ್ತು ಎಂದು ವಕೀಲ ಅರ್ಜುನ್ ಹೇಳಿದ್ದಾರೆ.
ಪೊಲೀಸರ ಮಧ್ಯಪ್ರವೇಶ
ಪರಿಸ್ಥಿತಿ ಬಿಗುವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
