ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿ ಬಂಧಿತನಾಗಿರುವ ಚಿನ್ನಯ್ಯ ಅಲಿಯಾಸ್ ಮಾಸ್ಕ್ ಮ್ಯಾನ್‌ಗೆ ಇಂದು ಮತ್ತೆ ಮೆಡಿಕಲ್ ಟೆಸ್ಟ್ ನಡೆಯಲಿದೆ. ಬಳಿಕ ವಿಚಾರಣೆ ತೀವ್ರಗೊಳ್ಳಲಿದೆ.
ಧರ್ಮಸ್ಥಳ (ಆ.24) ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪದಡಿ ಅರೆಸ್ಟ್ ಆಗಿರುವ ಚಿನ್ನಯ್ಯ ಅಲಿಯಾಸ್ ಮಾಸ್ ಮ್ಯಾನ್ ವಿಚಾರಣೆ ಇಂದು ತೀವ್ರಗೊಳ್ಳಲಿದೆ. ಇಂದ ಮತ್ತೆ ಮಾಸ್ಕ್ ಮ್ಯಾನ್ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬಳಿಕ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಬೆಳ್ತಂಗಡಿಯಲ್ಲಿರುವ ಎಸ್ಐಟಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಲಿದೆ. ಸಂಪೂರ್ಣ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಿದ್ದಾರೆ. ನಿನ್ನೆ ತಡರಾತ್ರಿ ವರೆಗೂ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮಾಸ್ಕ್ ಮ್ಯಾನ್ ಸುಂಟರಗಾಳಿ ಠುಸ್
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಆರೋಪಿಸಿ ಕ್ಷೇತ್ರದ ವಿರುದ್ಧ ಗಂಭೀರ ಆರೋಪ ಮಾಡಿದ ಮಾಸ್ಕ್ ಮ್ಯಾನ್ 16ಕ್ಕೂ ಹೆಚ್ಚು ಕಡೆ ಉತ್ಖನನಕ್ಕೆ ಸೂಚಿಸಿದ್ದ. ಧರ್ಮಸ್ಥಳದ ಕ್ಷೇತ್ರದ ಸೂಚನೆ ಮೇರೆಗೆ ರಹಸ್ಯವಾಗಿ ಮೃತದೇಹಗಳನ್ನು ಹೂತಿಟ್ಟಿದ್ದೇನೆ. ಈ ಮೃತದೇಹಗಳ ಪೈಕಿ ಬಹುತೇಕ ಹೆಣ್ಣುಮಕ್ಕಳು ಹಾಗೂ ಮಹಿಳೆಯ ಮೃತದೇಹ ಎಂದು ದೂರು ನೀಡಿದ್ದ. ಧರ್ಮಸ್ಥಳ ವಿರುದ್ಧ ಕೇಳಿಬಂದ ಆರೋಪ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಸದ್ದು ಮಾಡಿತ್ತು. ಇತ್ತ ಎಸ್ಐಟಿ ಅಧಿಕಾರಿಗಳು ಗುಂಡಿ ಅಗೆದರೂ 6ನೇ ಪಾಯಿಂಟ್ ಹೊರತುಪಡಿಸಿ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ಎಸ್ಐಟಿ ವಿಚಾರಣೆಗೂ ಮೊದಲು ತಂದ ತಲೆಬುರುಡೆ ಕುರಿತು ಸ್ಪಷ್ಟ ಹೇಳಿಕೆ ನೀಡಲು ಮಾಸ್ಕ್ ಮ್ಯಾನ್ ಹಿಂದೇಟು ಹಾಕಿದ್ದಾನೆ.
ಷಡ್ಯಂತ್ರ ಒಂದೊಂದಾಗಿ ಬಯಲು, ಮಾಸ್ಕ್ ಮ್ಯಾನ್ ಅರೆಸ್ಟ್
ಧರ್ಮಸ್ಥಳ ಕ್ಷೇತ್ರದ ವಿರುದ್ದ ನಡೆದ ಅಪಪ್ರಚಾರ, ಷಡ್ಯಂತ್ರ ಒಂದೊಂದಾಗಿ ಹೊರಬರಲು ಆರಂಭಗೊಂಡಿತ್ತು. ಮಾಸ್ಕ್ ಮ್ಯಾನ್ ಹೇಳಿಕೆಗಳು, ಎಸ್ಐಟಿ ಉತ್ಖನನ, ವಿಚಾರಣೆ, ಇತ್ತ ಸುಜಾತಾ ಭಟ್ ಪ್ರಕರಣ, ನ್ಯಾಯಕ್ಕಾಗಿ ನಡೆಸಿದ ನಕಲಿ ಹೋರಾಟಗಳ ಮುಖವಾಡ ಬಯಲಾಗುತ್ತಿದ್ದಂತೆ ಹಲವರು ಪ್ರಕರಣದಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದಾರೆ. ಷಡ್ಯಂತ್ರ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಬಯಲಿಗೆಳೆಯಬೇಕು ಎಂದು ಬಿಜೆಪಿ ಸೇರಿದಂತೆ ಧರ್ಮಸ್ಥಳ ಭಕ್ತರು ಆಗ್ರಹಿಸಿದ್ದಾರೆ. ಇದರ ನಡುವೆ ಶವ ಹೂತಿಟ್ಟಿದ್ದೇನೆ ಎಂದು ಆರೋಪಿಸಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಾಸ್ಕ್ ಮ್ಯಾನ್ ಅರೆಸ್ಟ್ ಆಗುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಮಾಸ್ಕ್ ಮ್ಯಾನ್ ಹಿಂದೆ ಯಾರಿದ್ದಾರೆ?
ಮಾಸ್ಕ್ ಮ್ಯಾನ್ ಅರೆಸ್ಟ್ ಆಗಿದ್ದಾರೆ. ಆದರೆ ಈತನ ಹಿಂದಿರುವ ಶಕ್ತಿಗಳು ಅರೆಸ್ಟ್ ಆಗಬೇಕು. ಪ್ರಕರಣವನ್ನು ಎನ್ಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಧರ್ಮಸ್ಥಳ ವಿರುದ್ದ ವ್ಯವಸ್ಥಿತವಾಗಿ ನಡೆದ ಷಡ್ಯಂತ್ರ ಇದು. ಹಿಂದೂಗಳ ಭಾವನೆಗ ಧಕ್ಕೆ ತಂದು, ದೇವಸ್ಥಾನ, ಹಿಂದೂ ಸಂಪ್ರದಾಯ, ಪದ್ಧತಿ ವಿರುದ್ಧೇ ಅಪನಂಬಿಕೆ ಬರುವಂತ ಸಂದರ್ಭ ಸೃಷ್ಟಿಸುವ ಹುನ್ನಾರ ಇದು ಎಂದು ಬಿಜೆಪಿ ಆರೋಪಿಸಿದೆ.
ಧರ್ಮಸ್ಥಳ ಪರ ಭಕ್ತರಿಂದ ಜಾಥಾ
ಧರ್ಮಸ್ಥಳ ವಿರುದ್ಧ ಕೇಳಿಬಂದ ಆರೋಪಗಳು, ಷಡ್ಯಂತ್ರಗಳು ಬಯಲಾಗುತ್ತಿದ್ದಂತೆ ಭಕ್ತರು ಸಂಭ್ರಮಿಸಿದ್ದಾರೆ. ಇದೀಗ ಧರ್ಮಸ್ಥಳ ಜಾಥಾ ನಡೆಸುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಳಲ್ಲಿ ಷಡ್ಯಂತ್ರದ ವಿರುದ್ದ ಪ್ರತಿಭಟನೆಗಳು ನಡೆದಿತ್ತು. ಇತ್ತ ಬಿಜೆಪಿ ನಾಯಕರು ಧರ್ಮಸ್ಥಲ ಚಲೋ ಯಾತ್ರೆ ನಡೆಸಿದ್ದಾರೆ. ಕಾಂಗ್ರೆಸ್ ಕೂಡ ತಯಾರಿ ನಡೆಸುತ್ತಿದ್ದರೆ, ಜೆಡಿಎಸ್ ಇದೀಗ ಬೃಹತ್ ಜಾಥಾ ಹಮ್ಮಿಕೊಂಡಿದೆ.
