ಧರ್ಮಸ್ಥಳ ಗ್ರಾಮ ಸುತ್ತಮುತ್ತ ಶವಗಳನ್ನು ಹೂತ ಆರೋಪ ಸಂಬಂಧ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶೀಘ್ರ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ವಾರದಲ್ಲಿ ಈ ಕುರಿತ ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವ ಸುಳಿವು ಲಭಿಸಿದೆ.

ಬೆಂಗಳೂರು : ಧರ್ಮಸ್ಥಳ ಗ್ರಾಮ ಸುತ್ತಮುತ್ತ ಶವಗಳನ್ನು ಹೂತ ಆರೋಪ ಸಂಬಂಧ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಶೀಘ್ರ ಚಾರ್ಜ್‌ಶೀಟ್‌ ಸಲ್ಲಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ವಾರದಲ್ಲಿ ಈ ಕುರಿತ ತನಿಖೆ ಪ್ರಕ್ರಿಯೆ ಪೂರ್ಣಗೊಳ್ಳುವ ಸುಳಿವು ಲಭಿಸಿದೆ.

ಪ್ರಕರಣದ ಬಗ್ಗೆ ನಡೆಸಿರುವ ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸದ್ಯದಲ್ಲೇ ನ್ಯಾಯಾಲಯಕ್ಕೆ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಿದೆ. ರಾಜ್ಯ ಸರ್ಕಾರ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್‌ ಸಲ್ಲಿಸುವಂತೆ ಗೃಹ ಇಲಾಖೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಲಯದ ಸೂಚನೆ ಮೇರೆಗೆ ಎಸ್‌ಐಟಿ ರಚನೆಯಾಗಿದ್ದರಿಂದ ಮುಂದೆ ನ್ಯಾಯಾಲಯದ ಅನುಮತಿ ಪಡೆದೇ ಎಸ್‌ಐಟಿ ಭವಿಷ್ಯದ ಬಗ್ಗೆ ತೀರ್ಮಾನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

- ಧರ್ಮಸ್ಥಳ ಗ್ರಾಮದ ಬಳಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ್ದ ನೈರ್ಮಲ್ಯ ನೌಕರ

- ಆತನ ಹೇಳಿಕೆ ಬೆನ್ನಲ್ಲೇ ವಿವಿಧ ಮುಖಂಡರಿಂದ ಒತ್ತಡ. ಎಸ್‌ಐಟಿ ರಚಿಸಿದ್ದ ರಾಜ್ಯ ಸರ್ಕಾರ

- ‘ಬುರುಡೆಮ್ಯಾನ್‌’ ಚಿನ್ನಯ್ಯ ಹೇಳಿದ ಹಲವು ಕಡೆ ಶೋಧಿಸಿದರೂ ಸಿಗದ ನೂರಾರು ಬುರುಡೆ

- ಷಡ್ಯಂತ್ರದ ಆರೋಪ. ಚಿನ್ನಯ್ಯ ಬಂಧನ. ಆತನನ್ನೇ ಆರೋಪಿ ಮಾಡಿ ಗ್ರಿಲ್‌ ಮಾಡಿದ್ದ ಎಸ್‌ಐಟಿ

- ಇದೀಗ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್‌ ಸಲ್ಲಿಸಲು ಸರ್ಕಾರದಿಂದ ಸೂಚನೆ ಬಗ್ಗೆ ವರದಿ