Chetan Kumar on RSS ban: ಮಂಡ್ಯದಲ್ಲಿ ಮಾತನಾಡಿದ ನಟ ಚೇತನ್, ಆರೆಸ್ಸೆಸ್ ಮಾತ್ರವಲ್ಲ, ಅಸಮಾನತೆಯ ವ್ಯವಸ್ಥೆಯೇ ನಮ್ಮ ನಿಜವಾದ ಶತ್ರು ಎಂದು ಹೇಳಿದ್ದಾರೆ. ಯಾವುದೇ ಸಂಘಟನೆಯನ್ನು ನಿಷೇಧಿಸುವುದನ್ನು ವಿರೋಧಿಸಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲೇಖಿಸಿ ಸೈದ್ಧಾಂತಿಕವಾಗಿ ಸೋಲಿಸುವಂತೆ ಸವಾಲು

ಮಂಡ್ಯ (ಅ.26): ನಮಗೆ ಆರೆಸ್ಸೆಸ್ ಶತ್ರ ಮಾತ್ರವಲ್ಲ, ಅಸಮಾನತೆಯ ವ್ಯವಸ್ಥೆಯೇ ನಮ್ಮ ಶತ್ರು ಎಂದು ನಟ, ಸಮಾಜಿಕ ಹೋರಾಟಗಾರ ಚೇತನ್ ತಿಳಿಸಿದರು. ಆರೆಸ್ಸೆಸ್ ನಿಷೇಧ ವಿವಾದ ಕುರಿತಂತೆ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ರಾಜಕಾರಣಿಗಳದ್ದು ಜಾತಿ ರಾಜಕೀಯ ಅಷ್ಟೆ

ಜಾತಿ ರಾಜಕೀಯ ಮಾಡುವುದು ಮಾತ್ರ ರಾಜಕಾರಣಿಗಳ ಕೆಲಸ, ಒಂದು ಪಕ್ಷದವರಿಗೆ ಮತ್ತೊಂದು ಪಕ್ಷದವರು ಮಾತ್ರ ಶತ್ರುಗಳು. ಆದರೆ ದಲಿತ ಸಂಘಟನೆಗಳಿಗೆ ಪಕ್ಷ, ಆರೆಸ್ಸೆಸ್ ಮಾತ್ರವಲ್ಲ, ಇಡೀ ಅಸಮಾನತೆಯ ಅನ್ಯಾಯದ ವ್ಯವಸ್ಥೆಯೇ ಶತ್ರು. ಹೀಗಾಗಿ ನಮಗೆ ಆರೆಸ್ಸೆಸ್ ಮಾತ್ರವಲ್ಲ, ಅಸಮಾನತೆಯೇ ನಮ್ಮ ಶತ್ರು ಎಂದರು. ಮುಂದುವರಿದು, ನಾವು ಕುವೆಂಪು ಅನುಯಾಯಿಗಳು. ಯಾರೂ ಸಹ ಸಂವಿಧಾನ ರಕ್ಷಣೆ ಮಾಡುತ್ತಿಲ್ಲ. ಸಂವಿಧಾನ ಕಾಪಾಡುತ್ತಿರುವುದು ನಾವು, ಸಮಸಮಾಜ ನಿರ್ಮಾಣ ಮಾಡೋದು ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ಮೂರು ಪಕ್ಷಗಳಿಗೆ ಸವಾಲು:

ರಾಜಕೀಯ ಲಾಭಕ್ಕಾಗಿ ಯಾವ ಸಂಸ್ಥೆಯನ್ನೂ ನಿಷೇಧಿಸಲು ಒಪ್ಪುವುದಿಲ್ಲ. ನಿಷೇಧ ಸಂಸ್ಕೃತಿ ಒಪ್ಪುವುದಿಲ್ಲ, ಆರ್ಟಿಕಲ್ 19ರ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಸಹಿಸುವುದಿಲ್ಲ. ಸೈದ್ಧಾಂತಿಕವಾಗಿ ಸೋಲಿಸಿ ಎಂದು ಸವಾಲು ಹಾಕಿದರು.