ನಿನ್ನ ತೀರ್ಮಾನ ನಾನು ಮೆಟ್ಟಿಲಲ್ಲೇ ಮಾಡುತ್ತೇನೆ ಎಂದು ಕಾಂತಾರ ಸಿನಿಮಾದಲ್ಲಿನ ಹೇಳಿದ ದೈವದ ನುಡಿ ಸತ್ಯವಾಗಿದೆ ಎಂದು ಚಕ್ರವರ್ತಿ ಸೂಲೆಬೆಲೆ ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲೆ ವಿವರಿಸಿದ ಅಣ್ಣಪ್ಪ ಸ್ವಾಮಿ ತೀರ್ಮಾನದ ಏನು?
ಬೆಂಗಳೂರು (ಆ.24) ಕಾಂತಾರ ಸಿನಿಮಾದಲ್ಲಿ ದೈವದ ಬಳಿ ತನ್ನ ಜಮೀನು ಮರಳಿ ನೀಡಬೇಕು ಅನ್ನೋ ಜಮೀನ್ದಾರನ ಆಜ್ಞೆಯ ದೃಶ್ಯ ಹಾಗೂ ದೈವದ ನುಡಿ ಭಾರಿ ವೈರಲ್ ಆಗಿದೆ. ಕೋರ್ಟ್‌ಗೆ ಹೋಗ್ತಿ. ಆದರೆ ನಿನ್ನ ತೀರ್ಮಾನವನ್ನು ನಾನು ಮೆಟ್ಟಿಲಲ್ಲೇ ಮಾಡುತ್ತೇನೆ ಎಂದು ದೈವ ತನ್ನ ನುಡಿಯಲ್ಲಿ ಹೇಳುವ ದೃಶ್ಯವಿದೆ. ಈ ಡೈಲಾಗನ್ನು ಇದೀಗ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲೆಬೆಲೆ ಹೇಳಿದ್ದಾರೆ. ಈ ಡೈಲಾಗ್ ಮೂಲಕ ಧರ್ಮಸ್ಥಳ ಪ್ರಕರಣದಲ್ಲಿ ಅಣ್ಣಪ್ಪ ಸ್ವಾಮಿ ಮೆಟ್ಟಿಲಲ್ಲೇ ಕ್ಷೇತ್ರದ ವಿರುದ್ಧ ನಡೆದ ಷಡ್ಯಂತ್ರವನ್ನು ಬಯಲು ಮಾಡಿ ಸತ್ಯ ಹೊರತಂದಿದ್ದಾನೆ ಎಂದು ಚಕ್ರವರ್ತಿ ಸೂಲೆಬೆಲೆ ಹೇಳಿದ್ದಾರೆ.
ಬಾಹುಬಲಿ ಬೆಟ್ಟ ದಾಟುತ್ತಿದ್ದಂತೆ ಮೆಟ್ಟಿಲಲ್ಲೇ ಅಣ್ಣಪ್ಪನ ತೀರ್ಮಾನ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಡೆ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ ಚಕ್ರವರ್ತಿ ಸೂಲೆಬೆಲೆ, ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ಬಯಲಾಗಿದೆ. ಕಾಂತಾರ ಡೈಲಾಗ್ ನಿಜ. ನೀನು ಇಲ್ಲಿ ಏನು ಬೇಕಿದ್ದರೆ ಮಾಡು, ಆದರೆ ನಿನ್ನ ತೀರ್ಮಾನ ನಾನು ಮೆಟ್ಟಿಲಲ್ಲಿ ಮಾಡುತ್ತೇನೆ ಎಂಬ ಡೈಲಾಗ್ ನಿಜವಾಗಿದೆ ಎಂದು ಸೂಲಿಬೆಲೆ ಹೇಳಿದ್ದಾರೆ. ಮಂಜುನಾಥ ಎಲ್ಲರೂ ನಮ್ಮವರೇ ಎಂದು ಸುಮ್ಮನೆ ಇರಬಹುದು. ಆದರೆ ಅಣ್ಣಪ್ಪ ಸ್ವಾಮಿ ಹಾಗಲ್ಲ. ಧರ್ಮಸ್ಥಳದ ವಿರುದ್ದ ಷಡ್ಯಂತ್ರ ಬಾಹುಬಲಿ ಬೆಟ್ಟ ದಾಟಿ ಕ್ಷೇತ್ರದ ಕಡೆ ಬರುತ್ತಿದ್ದಂತೆ ಅಣ್ಣಪ್ಪ ಸ್ವಾಮಿ ಮೆಟ್ಟಿಲಲ್ಲೇ ತೀರ್ಮಾನ ಮಾಡಿದ್ದಾನೆ ಎಂದು ಚಕ್ರವರ್ತಿ ಸೂಲೆಬೆಲೆ ಹೇಳಿದ್ದಾರೆ.
ಹಿಂದುತ್ವದ ವಿಚಾರ ಬಂದಾಗ ಜೈನರು ಬೇರೆಯವರು ಎಂದು ನಾವು ಭಾವಿಸಲೇ ಇಲ್ಲ
ಹಿಂದುತ್ವ ವಿಚಾರ ಬಂದಾಗ ಜೈನರು ಬೇರೆಯವರಲ್ಲ . ನಾವು ಅವರನ್ನು ಬೇರೆ ಎಂದು ಭಾವಿಸಲೇ ಇಲ್ಲ. ವೀರೇಂದ್ರ ಹೆಗ್ಗಡೆಯವರು ಜೈನ ಧರ್ಮದವರು ಎಂದು ನಮಗೆ ಗೊತ್ತೇ ಇರಲಿಲ್ಲ. ನಮ್ಮ ಊರಿನ ದೇವಸ್ಥಾನ ಪುರನ್ ನಿರ್ಮಾಣ ಮಾಡಲು ದುಡ್ಡು ಕೊಟ್ಟಾಗ ನಮಗೆ ಜೈನರು ಎಂದು ಅನಿಸಲಿಲ್ಲ. ವಿದ್ಯಾವಂತ ಮಕ್ಕಳಿಗೆ 50 ಕೋಟಿ ರೂಪಾಯಿ ಪುರಸ್ಕಾರದ ರೂಪದಲ್ಲಿ ನೀಡಿದಾದ ಜೈನರಾಗಿರಲಿಲ್ಲ. ನಿಮ್ಮ ಊರಿನ ಕೆರೆ ಶುಚಿಗೊಳಿಸಿ, ನೀರು ತುಂಬುವಂತೆ ಮಾಡಿದಾಗ ಜೈನರು ಎಂದು ಅನಿಸಲಿಲ್ಲ. ಆದರೆ ದೇವಸ್ಥಾನದ ಮೇಲೆ ಷಡ್ಯಂತ್ರ ನಡೆದಾಗ ಕೆಲ ವಿರೋಧಿಗಳಿಗೆ ಹೆಗ್ಗಡೆ ಜನರು ಎಂದು ಅನಿಸಿತು ಎಂದು ಸೂಲಿಬೆಲೆ ಹೇಳಿದ್ದಾರೆ.
ಇದು ಕೊನೆಯಾಗಬೇಕು
ಈ ರೀತಿಯ ಆಕ್ರಮಣ, ಧಾರ್ಮಿಕ ನಂಬಿಕೆಯನ್ನೇ ಬುಡಮೇಲು ಮಾಡುಲ ಹಿಂದೂ ಶ್ರದ್ಧಾ ಕೇಂದ್ರವನ್ನೇ ಮುಗಿಸಿಬಿಡುವ ಈ ದಾಳಿಗಳು ಕೊನೆಯಾಗಬೇಕು. ಚೌತಿಯ ಪೆಂಡಾಲ್‌ನಲ್ಲಿ ಅಣ್ಣಪ್ಪನಿಗಾಗಿ ಒಂದು ಹುಂಡಿ ಇಡಿ. ನಿಮ್ಮ ಮನಸ್ಸಿನಲ್ಲಿ ಕೆಟ್ಟ ಚಿಂತನೆ ಬಂದರೆ ತಪ್ಪು ಕಾಣಿಕೆ ಹಾಕಿ. ಯಾರೋ ಹೇಳಿದ್ದನ್ನು ಕೇಳಿ ಮಂಜುನಾಥನನ್ನು, ಅಣ್ಣಪ್ಪ ಸ್ವಾಮಿಯನ್ನು ಅನುಮಾನದಿಂದ ನೋಡಿದ್ದರೆ ಕ್ಷಮೆ ಕೇಳಿ. ನಾವು ಪಾದಯಾತ್ರೆ ಮಾಡಬೇಕು. ಬೆಂಗಳೂರಿನಿಂದ ಹೊರಟು ಜನರನ್ನು ಸೇರಿಸಿಕೊಂಡು ಮಹಾಯಾತ್ರೆ ಮಾಡಬೇಕು. ಕೇಸರಿ ಯಾತ್ರೆ ರೀತಿ ಕಾಣಬೇಕು. ಧರ್ಮಸ್ಥಳ ತಲುಪಿದಾಗ ಭಕ್ತಸಾಗರವಾಗಬೇಕು. ಇಷ್ಟು ಜನ ಯಾಕೆ ಬಂದ್ದಿದ್ದೀರಿ ಎಂದು ವೀರೇಂದ್ರ ಹೆಗ್ಗಡೆಯವರು ಕೇಳಬೇಕು ಎಂದು ಸೂಲಿಬೆಲೆ ಹೇಳಿದ್ದಾರೆ. ಷಡ್ಯಂತ್ರಗಳು ಒಂದೊಂದಾಗಿ ಹೊರಬರುತ್ತಿದೆ. ಆದರೆ ಮುಂದಿನ ಪೀಳಿಗೆಗೆ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಉಳಿಸಬೇಕಿದೆ. ಮುಂದಿನ ಪೀಳಿಗೆಗೆ ಧಾರ್ಮಿಕ ಕ್ಷೇತ್ರದ ಮೇಲಿನ ನಂಬಿಕೆ ಉಳಿಸುವಂತೆ ಕೆಲಸ ಮಾಡಬೇಕಿದೆ. ಹೀಗಾಗಿ ದೇವಸ್ಥಾನಕ್ಕೆ ಮಕ್ಕಳ ಜೊತೆ ತೆರಳಿ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕತೆಯ ಅರಿವು ಮೂಡಿಸಬೇಕು ಎಂದಿದ್ದಾರೆ.
