ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅರೆಸ್ಟ್ ಆಗಿದ್ದಾರೆ. ಮನೆಯಿಂದ ಬಂಧಿಸಿ ಕರೆತರುವಾಗ ವಕೀಲ ಜಗದೀಶ್ ಈ ಬಂಧದಿಂದ ಯಾರೂ ಅಶಾಂತಿ ಮಾಡಬೇಡಿ ಎಂದು ಕರೆ ನೀಡಿದ್ದಾರೆ.

ಬೆಂಗಳೂರು (ಆ.22) ಬಿಗ್ ಬ್ಯಾಸ್ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಲಾಯರ್ ಜಗದೀಶ್ ಇತ್ತೀಚೆಗೆ ಹಲವು ನಾಯಕರ ವಿರುದ್ದ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇತ್ತ ಸೋಶಿಯಲ್ ಮೀಡಿಯಾ ಮೂಲಕ ಜಾತಿ ನಿಂದನೆ ಹೇಳಿಕೆ ನೀಡಿ ಹಲವರ ಆಕ್ರೋಶಕ್ಕೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ದೂರು ಕೂಡ ದಾಖಲಾಗಿತ್ತು. ಜಾತಿ ನಿಂದನೆ ಆರೋಪದದಡಿ ಬಿಗ್ ಬ್ಯಾಸ್ ಖ್ಯಾತಿಯ ಮಾಜಿ ಸ್ಪರ್ಧಿ, ಲಾಯರ್ ಜಗದೀಶ್‌ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಲಾಯರ್ ಜಗದೀಶ್ ಮನೆಗೆ ತೆರಳಿದ ಪೊಲೀಸರು ಜಗದೀಶ್ ಅರೆಸ್ಟ್ ಮಾಡಿದ್ದಾರೆ. ಇತ್ತ ಅರೆಸ್ಟ್ ಬಳಿಕ ಪೊಲೀಸ್ ಜೀಪ್ ಹತ್ತೋ ಮುನ್ನ, ಈ ಬಂಧನದಿಂದ ಯಾರೂ ಅಶಾಂತಿ ಮಾಡಬೇಡಿ ಎಂದು ಕರೆ ನೀಡಿದ್ದಾರೆ.

ಯಾರೂ ಅಶಾಂತಿ ಮಾಡಬೇಡಿ, ಇದು ಸಾಮಾನ್ಯ ಪ್ರಕ್ರಿಯೆ

ಕೂಡಿಗೆಹಳ್ಳಿ ಪೊಲೀಸರು ಮನೆಗೆ ತೆರಳಿ ಜಗದೀಶ್ ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿ ಕರೆತರುವಾಗ ಹೋಗೋ ಮುಂಚೆ ಏನಾದು ಹೇಳಿ ಎಂದು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಲಾಯರ್ ಜಗದೀಶ್ ಯಾರು ಅಶಾಂತಿ ಮಾಡಬೇಡಿ, ಅರಾಮಾಗಿರಿ. ಇದು ಸಾಮಾನ್ಯ ಪ್ರಕ್ರಿಯೆ ಎಂದು ಲಾಯರ್ ಜಗದೀಶ್ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.

ಮನೆಯ ಗೇಟ್ ಬಳಿ ಬರುತ್ತಿದ್ದಂತೆ ಲೆಟರ್ ಕುರಿತು ಪೊಲೀಸರ ಬಳಿ ಲಾಯರ್ ಜಗದೀಶ್ ಹೇಳುತ್ತಾರೆ. ಆದರೆ ಲಾಯರ್ ಜಗದೀಶ್ ಮಾತನ್ನು ಗಂಭೀರವಾಗಿ ಪರಿಗಣಿಸದೆ, ನೇರವಾಗಿ ಪೊಲೀಸ್ ಜೀಪ್ ಕಳಿ ಕರೆದೊಯ್ದಿದ್ದಾರೆ. ಇತ್ತ ಜಗದೀಶ್ ಸಿನಿಮಾ ಶೈಲಿಯಲ್ಲಿ ಪೊಲೀಸ್ ಡೋರ್ ತೆರೆದು ಬಂಧಿತ ಆರೋಪಿಯಾಗಿ ಪೊಲೀಸರ ನಡುವೆ ಕುಳಿತು ಕೂಡಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಕೂಡಿಗೆಹಳ್ಳಿ ಠಾಣೆಯಲ್ಲಿ ವಿಚಾರಣೆ

ಲಾಯರ್ ಜಗದೀಶ್ ಅರೆಸ್ಟ್ ಮಾಡಿ ಕರೆತಂದ ಪೊಲೀಸರು ಕೂಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಂತಿ ನಿಂದನೆ ಹೇಳಿಕೆ ಪ್ರಕರಣಗಳ ಕುರಿತು ಜಗದೀಶ್ ಬಳಿ ಉತ್ತರ ಪಡೆದುಕೊಂಡಿದ್ದಾರೆ. ಹಲವು ನಾಯಕರ ವಿರುದ್ದ ಹೇಳಿಕೆ ನೀಡಿರುವ ಜಗದೀಶ್ ಇದೀಗ ಸತತ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

ಲಾಯರ್ ಜಗದೀಶ್‌ಗೆ ಶುರುವಾಯ್ತಾ ಸಂಕಷ್ಟ ಕಾಲ?

ಲಾಯರ್ ಜಗದೀಶ್ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಜೆಪಿ ನಾಯಕ ಎಸ್ಆರ್ ವಿಶ್ವನಾಥ್ ಸೇರಿದಂತೆ ಹಲವು ನಾಯಕರ ವಿರುದ್ಧ ಹೇಳಿಕೆ ನೀಡಿದ್ದರು. ಈ ಪೈಕಿ ಎಸ್ಆರ್ ವಿಶ್ವನಾಥ್ ವಿಧಾನಸಭೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು. ಲಾಯರ್ ಜಗದೀಶ್ ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಸಾಕ್ಷಿ ಆಧಾರವಿಲ್ಲದೆ ನನ್ನ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ ಎಂದು ಎಸ್ಆರ್ ವಿಶ್ವನಾಥ್ ಸದನದಲ್ಲಿ ಆಕ್ರೋಶ ಹೊರಹಾಕಿದ್ದರು. ಇದೇ ವೇಳೆ ಹಕ್ಕುಚ್ಯುತಿ ಮಂಡಿಸಿದ್ದರು.