ರಾಜ್ಯ ಸರ್ಕಾರವು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ಮಾಲೀಕರಿಗೆ ದಂಡ ಪಾವತಿಸಿ ಸಕ್ರಮಗೊಳಿಸಲು ಅವಕಾಶ ನೀಡಿದೆ. ಶೇಕಡಾ 15ರ ಮಿತಿಯೊಳಗಿನ ಉಲ್ಲಂಘನೆಗಳಿಗೆ ಮಾತ್ರ ಅನ್ವಯವಾಗುವ ಈ ಯೋಜನೆಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಟನೆ ಮಾಡಿ ಕಟ್ಟಿದ ಕಟ್ಟಡಗಳಿಗೆ ವಿನಾಯಿತಿ ಘೋಷಿಸಿದೆ. ರಾಜ್ಯ ಸರ್ಕಾರ ದಂಡ ಕಟ್ಟಿ ಪರಿಷ್ಕೃತ ನಕ್ಷೆ ಪಡೆಯಲು ಅವಕಾಶ ನೀಡಿದೆ. ಶೇಕಡಾ 15 ರ ಮಿತಿಯೊಳಗೆ ನಿಯಮ ಉಲ್ಲಂಘಟನೆ ಮಾಡಿದ ಕಟ್ಟಡಗಳಿಗೆ ಮಾತ್ರ ಇದು ಅನ್ವಯ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಂಡಗಳು ಹೇಗೆ?

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ನಿಗದಿಯಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕೆ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 1000 ರೂ ದಂಡ. ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 1500 ರೂ ದಂಡ ನಿಗದಿಯಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 1200 - ವಾಣಿಜ್ಯ ಕಟ್ಟಡಕ್ಕೆ 1800 ರೂ ದಂಡ ಇರಲಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಂಡ ಹೇಗೆ?

ನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 1500 - ವಾಣಿಜ್ಯ ಕಟ್ಟಡಕ್ಕೆ 2250 ರೂ ದಂಡ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ 2000 ರೂ ದಂಡ ನಿಗದಿ. ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀ ಗೆ 300 ರೂ ದಂಡ ನಿಗದಿಪಡಿಸಿ ಆದೇಶ. ನಿಯಮ ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಾರ್ ಪಾರ್ಕಿಂಗ್ ಗೂ ದಂಡ ನಿಗದಿ. ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ 5000 ರೂ ದಂಡ ನಿಗದಿ. ಆದರೆ ನಗರಸಭೆ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ ಪಾರ್ಕಿಂಗ್ ಗೆ ದಂಡ ನಿಗದಿಯಿಲ್ಲ.