ಬೆಂಗಳೂರಿನ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳಿದ್ದು, ಬಿಬಿಎಂಪಿ ಲೆಕ್ಕದ ಪ್ರಕಾರ 6,230 ಗುಂಡಿಗಳನ್ನು ಮುಚ್ಚಲಾಗಿದೆ ಮತ್ತು 4,324 ಗುಂಡಿಗಳು ಬಾಕಿ ಇವೆ. ಆದರೆ, ಈ ಲೆಕ್ಕ ಸುಳ್ಳು ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು (ಆ.14): ನಗರದ ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಅಪಘಾತಕ್ಕೆ ಬಾಯ್ಬಿಟ್ಟು ಕಾಯುತ್ತಿವೆ. ಬಿಬಿಎಂಪಿಯ ಇತ್ತೀಚಿನ ಲೆಕ್ಕದಂತೆ, ಬೆಂಗಳೂರಿನ ಒಟ್ಟು 12,721 ರಸ್ತೆ ಗುಂಡಿಗಳ ಪೈಕಿ 6,230 ಗುಂಡಿಗಳನ್ನು ಮುಚ್ಚಲಾಗಿದೆ, 4,324 ಗುಂಡಿಗಳು ಇನ್ನೂ ಬಾಕಿ ಇವೆ ಎಂದು ಹೇಳಿದೆ. ಆದರೆ ಈ ಲೆಕ್ಕ ಸಂಪೂರ್ಣ ಸುಳ್ಳಾಗಿದೆ ಎಂದು ಆರೋಪಿಸಲಾಗಿದೆ. ನಿರಂತರ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಬ್ರೇಕ್ ಹಾಕಿದೆ. ಮಳೆಯಿಂದಾಗಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ.

ಯಲಹಂಕ, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಗುಂಡಿಗಳ ಸಂಖ್ಯೆ ಅತಿ ಹೆಚ್ಚಿರುವುದಾಗಿ ವರದಿಯಾಗಿದೆ. ಬಿಬಿಎಂಪಿ ಅಧಿಕಾರಿಗಳ ವರ್ಚುಯಲ್ ಸಭೆಯಲ್ಲಿ ಈ ಲೆಕ್ಕವನ್ನು ಬಿಚ್ಚಿಟ್ಟಿದ್ದು, ಮಳೆ ನಿಂತ ಕೂಡಲೇ ಗುಂಡಿಗಳನ್ನು ಮುಚ್ಚುವ ಕಾರ್ಯ ಚುರುಕುಗೊಳಿಸಲಾಗುವುದು ಎಂದು ವಾರ್ಡ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಜುಲೈ ಅಂತ್ಯದವರೆಗೂ 12,721 ಗುಂಡಿಗಳನ್ನು ಮುಚ್ಚಿರುವುದಾಗಿ ಬಿಬಿಎಂಪಿ ಹೇಳಿಕೊಂಡಿರುವುದು ನಾಗರಿಕರಲ್ಲಿ ಅನುಮಾನ ಮೂಡಿಸಿದೆ.

ವಲಯ ಒಟ್ಟು ಗುಂಡಿಗಳು ಮುಚ್ಚಿರುವ ಗುಂಡಿ ಬಾಕಿ ಇರುವ ಗುಂಡಿ ಲೆಕ್ಕ