ನಟಿ ಮೇಘನಾ ರಾಜ್ ಹೊಸ ಮನೆಯನ್ನು ಕಟ್ಟಿಸಿದ್ದು, ಈ ಮನೆಯ ಇಂಚಿಂಚು ಮಾಹಿತಿಯನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಇದರ ಪರಿಚಯವನ್ನು ನಟಿ ಹೀಗೆ ಮಾಡಿಸಿದ್ದಾರೆ ನೋಡಿ...
ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಮಗ ರಾಯನ್ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. 2020ರ ಜೂನ್ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನಾ ರಾಜ್ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಬಹುತೇಕ ಅಭಿಮಾನಿಗಳ ಮಾತು.
ಇದರ ನಡುವೆಯೇ, ನಟಿ, ಬೆಂಗಳೂರಿನಲ್ಲಿ ಭವ್ಯ ಬಂಗಲೆ ಕಟ್ಟಿಸಿದ್ದಾರೆ. ಕಟ್ಟಿಸಿರೋದು ಎಂದರೆ, ಸುಮಾರು ಆರು ವರ್ಷಗಳ ಹಿಂದೆ ಕಟ್ಟಿದ್ದ ಮನೆಯನ್ನೇ ಕೊಂಡು ಅದನ್ನು ಸಂಪೂರ್ಣವಾಗಿ ನವೀಕರಿಸಿದ್ದಾರೆ. ಈ ಮನೆಯಲ್ಲಿರುವ 90ರ ದಶಕದ ವಿಂಟೇಜ್ ಪೀಠೋಪಕರಣವನ್ನು ಹಾಗೆಯೇ ಉಳಿಸಿಕೊಂಡು ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿದ್ದಾರೆ. ಇದಾಗಲೇ ಇದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಇದೀಗ ಅಭಿಮಾನಿಗಳ ಆಸೆಯ ಮೇರೆಗೆ ಸಂಪೂರ್ಣ ಬಂಗಲೆಯ ಪರಿಚಯ ಮಾಡಿಸಿದ್ದಾರೆ ನಟಿ. 'ಮೇಘನಾ ರಾಜ್ ಸರ್ಜಾ ರಾಯನ್ ರಾಜ್' ಎಂದು ಮನೆಗೆ ಹೆಸರು ಇಡಲಾಗಿದೆ. ಹಸಿರಿನ ನಡುವೆ ಭವ್ಯ ಬಂಗಲೆ ಕಣ್ಮನ ಸೆಳೆಯುವಂತಿದೆ. ಬಾಗಿಲು ತೆರೆಯುತ್ತಲೇ ಚಿರಂಜೀವಿ ಸರ್ಜಾರ ಬೃಹತ್ ಛಾಯಾಚಿತ್ರ ಗಮನ ಸೆಳೆಯುತ್ತದೆ. ಇದು ಚಿರುಗಾಗಿ ಇರುವ ಕೋಣೆ ಎಂದಿದ್ದಾರೆ ಮೇಘನಾ. ಅದರ ಪಕ್ಕದಲದ್ಲಿಯೇ ಲಿವಿಂಗ್ ರೂಮ್‌ನಲ್ಲಿ ಗೋಡೆಯದ್ದೇ ಬಣ್ಣ ಹೋಲುವ ಗ್ರೇ ಕಲರ್ ಸೋಫಾ ಸೆಟ್, ಪಕ್ಕದ ಡೈನಿಂಗ್ ರೂಮ್‌ನಲ್ಲೂ ಅದೇ ಬಣ್ಣದ ಡೈನಿಂಗ್ ಟೇಬಲ್, ಕರ್ಟನ್ ಎಲ್ಲವೂ ಕಣ್ಮನ ಸೆಳೆಯುವಂತಿದೆ.
ಪಕ್ಕದಲ್ಲಿಇಯೇ ಅಡುಗೆ ಮನೆ ಇದ್ದು, ಅದು ಕೂಡ ವಿಶೇಷವಾಗಿದೆ. ಅದರಂತೆಯೇ, ಇನ್‌ಫಾರ್ಮಲ್ ಮತ್ತು ಫಾರ್ಮಲ್ ಲಿವಿಂಗ್ ರೂಮ್ ನೋಡಬಹುದು. ಜೊತೆಗೆ ವಿಶೇಷವಾಗಿ ವಿನ್ಯಾಸ ಮಾಡಲಾದ ದೇವರ ಮನೆ, ಅಡುಗೆ ಮನೆ, ಡೈನಿಂಗ್ ಏರಿಯಾ ಕೂಡ ನೋಡಬಹುದು. ಅಂದಹಾಗೆ ಮೇಘನಾ ಅವರ ಮನೆ 2500 ಚದರ ಅಡಿ ಹೊಂದಿದ್ದು, ಮೂರು ಅಂತಸ್ತು ಕಟ್ಟಲಾಗಿದೆ. ಕೆಳಗಡೆ ಮಾಮೂಲಿನಂತೆ ಪಾರ್ಕಿಂಗ್ ಇದ್ದರೆ, ಮೊದಲ ಮಹಡಿಯಲ್ಲಿ ಲಿವಿಂಗ್ ರೂಮ್ ಜೊತೆ ವಿವಿಧದ ರೂಮ್ಗಳು, 2ನೇ ಮಹಡಿಯಲ್ಲಿ ನಾಲ್ಕು ರೂಮ್ಗಳಿವೆ. ಇವೆಲ್ಲವುಗಳ ಪರಿಚಯವನ್ನು ಮಾಡಿಸಿದ್ದಾರೆ ನಟಿ ಮೇಘನಾ ರಾಜ್.
ಸದ್ಯ ನಟಿ ಅಪ್ಪ-ಅಮ್ಮನ ಜೊತೆ ನೆಲೆಸಿದ್ದಾರೆ ನಟಿ. ತಮ್ಮ ಕನಸಿನ ಮನೆಯ ಬಗ್ಗೆ ಈ ಹಿಂದೆಯೂ ಮೇಘನಾ ಮಾತನಾಡಿದ್ದರು. 'ನಾನು ಮತ್ತು ಚಿರು ಹೇಗೆ ಮನೆ ಕಟ್ಟಬೇಕು ಅಂದುಕೊಂಡಿದ್ದೇವೋ ಈ ಮನೆ ಅದೇ ರೀತಿ ಇತ್ತು. ಅದಕ್ಕಾಗಿಯೇ ಇದನ್ನು ಪರ್ಚೇಸ್ ಮಾಡಿದ್ವಿ. ಇದರಲ್ಲಿರುವ ವಿನ್ಯಾಸ ಎಲ್ಲಾ ಇಷ್ಟವಾಯಿತು. ಕೊನೆಗೆ ನಮಗೆ ಬೇಕಾದ ರೀತಿಯಲ್ಲಿ ನವೀಕರಿಸಿಕೊಂಡಿರುವುದಾಗಿ ನಟಿ ಹೇಳಿದ್ದಾರೆ. ಈ ಮನೆಯಲ್ಲಿ ತಮಗೆ ತುಂಬಾ ಇಷ್ಟವಾಗಿರುವ ಕೋಣೆ ಎಂದರೆ ಇನ್‌ಫಾರ್ಮಲ್ ಲಿವಿಂಗ್ ರೂಮ್, ವಾಕ್‌ಇನ್ ವಾರ್ಡ್‌ರೋಬ್ ಮತ್ತು ಇನ್‌ಫಾರ್ಮಲ್ ಬಾಲ್ಕನಿ ಎಂದಿದ್ದಾರೆ ನಟಿ.

