ಅವ್ರಿಗೆಲ್ಲಾ ಕೆಟ್ಟ ಹೆಸರು ತರೋದನ್ನ ನನ್ನ ದೇಹ ಮಾಡಕೂಡದು. ನಾನು ಅನ್ನೋ ನನ್ನ ದೇಹ 18 ವರ್ಷದಿಂದ 30 ವರ್ಷದವರೆಗೆ ಚಂಚಲತೆಯಿಂದ ನನಗೆ ಇಷ್ಟ ಬಂದಂತೆ ಮಾಡ್ಕೋತೀನಿ, ನನಗೇನು? ನಂಗೆ ಅದು ಸಿಗುತ್ತೆ ಇದು ಸಿಗುತ್ತೆ ಅಂತ ಮಾಡ್ಕೊಂಡು ಹೋದ್ರೆ ನನ್ನ ವ್ಯಕ್ತಿತ್ವಕ್ಕೆ ಒಂದು ಗಟ್ಟಿತನ ಇರಲ್ಲ.

ನಟಿ-ನಿರ್ದೇಶಕಿ ರೂಪಾ ಅಯ್ಯರ್ ಟಿಪ್ಸ್‌

ನಟಿ, ನಿರ್ದೇಶಕಿ, ನಿರ್ಮಾಪಕಿ ಹಾಗೂ ಆಧ್ಯಾತ್ಮಿಕ ಚಿಂತಕಿ ರೂಪಾ ಅಯ್ಯರ್ (Roopa Iyer) ಅವರು ಮಾತನ್ನಾಡಿರುವ ಹಲವು ವಿಡಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೊಂದು ವಿಡಿಯೋದಲ್ಲಿ ರೂಪಾ ಅಯ್ಯರ್ ಅವರು ಹೇಳಿದ್ದು ಇದು:- ಎಲ್ಲರೂ ದೇಹದ ಮಾತು ಕೇಳಿ ಬಿಹೇವ್ ಮಾಡ್ಬೇಡಿ, ಬುದ್ಧಿಗೆ ತಕ್ಕಂತೆ ನಡೆದುಕೊಳ್ಳಿ.. 

ಲಿವಿಂಗ್ ಟುಗೇದರ್ ಆಗಿರಬಹುದು, ಪ್ರೀತಿ ಆಗಿರಬಹುದು, ನಿಮ್ಗೆ ಯಾವುದೋ ಒಂದ್ ಏಜ್‌ನಲ್ಲಿ ಇನ್‌ಫ್ಯಾಕ್ಚ್ಯುವೇಶನ್, ಅಟ್ರಾಕ್ಷನ್ ಶುರುವಾಗೋದು 16 ಅಥವಾ 18 ವರ್ಷದಿಂದ.. ಆದ್ರೆ, ತಂದೆ-ತಾಯಿ ಅನ್ನೋದು, ನನ್ನ ಜೀವನ, ನಾನು ಅನ್ನೋ ವ್ಯಕ್ತಿತ್ವವನ್ನು ನಾನು ಸಮಾಜದಲ್ಲಿ ರೂಪಿಸಿಕೊಂಡಿರೋದು ನಾನು ಹುಟ್ಟದಾಗಿನಿಂದ್ಲೇ ಬಂದಿರುತ್ತೆ..

ಇಡೀ ಫ್ಯಾಮಿಲಿಯನ್ನ ನಾವು ರೆಪ್ರೆಸೆಂಟ್ ಮಾಡ್ಕೊಂಡು ಬದಕ್ತಾ ಇರ್ತೀವಿ

ನನ್ನ ತಳಪಾಯ, ನನ್ನ ಬೇರು, ನನ್ನ ಫ್ಯಾಮಿಲನ ರೆಪ್ರಸೆಂಟ್ ಮಾಡುತ್ತೆ.. ನನ್ನ ಅಜ್ಜಿ, ನನ್ನ ತಾತ, ನನ್ನ ಅಪ್ಪ, ನನ್ನ ಅಮ್ಮ ಹೀಗೆ ನನ್ನ ಇಡೀ ಫ್ಯಾಮಿಲಿಯನ್ನ ನಾವು ರೆಪ್ರೆಸೆಂಟ್ ಮಾಡ್ಕೊಂಡು ಬದಕ್ತಾ ಇರ್ತೀವಿ.. ಅವ್ರಿಗೆಲ್ಲಾ ಕೆಟ್ಟ ಹೆಸರು ತರೋದನ್ನ ನನ್ನ ದೇಹ ಮಾಡಕೂಡದು. ನಾನು ಅನ್ನೋ ನನ್ನ ದೇಹ 18 ವರ್ಷದಿಂದ 30 ವರ್ಷದವರೆಗೆ ಚಂಚಲತೆಯಿಂದ ನನಗೆ ಇಷ್ಟ ಬಂದಂತೆ ಮಾಡ್ಕೋತೀನಿ, ನನಗೇನು? ನಂಗೆ ಅದು ಸಿಗುತ್ತೆ ಇದು ಸಿಗುತ್ತೆ ಅಂತ ಮಾಡ್ಕೊಂಡು ಹೋದ್ರೆ ನನ್ನ ವ್ಯಕ್ತಿತ್ವಕ್ಕೆ ಒಂದು ಗಟ್ಟಿತನ ಇರಲ್ಲ. 

ಕಪ್ಪುಚುಕ್ಕಿ ಹಾಗೂ ಕಳಂಕ ಇರಲ್ಲ

ಸರಿಯಾದ ವ್ಯಕ್ತಿತ್ವನ ರೂಪಿಸಿಕೊಂಡಾಗ, ಗುರುಗಳು ಹಾಗೂ ಸಮಾಜ ಹೇಳಿಕೊಡೋ ಪಾಠವನ್ನು ಕಲಿತುಕೊಂಡು ಒಂದು ಗಟ್ಟಿಯಾದ ವ್ಯಕ್ತಿತ್ವ ರೂಪಿಸಿಕೊಂಡಾಗ ನಮ್ಮ ವ್ಯಕ್ತಿತ್ವಕ್ಕೆ ಯಾವುದೇ ಕಪ್ಪುಚುಕ್ಕಿ ಹಾಗೂ ಕಳಂಕ ಇರಲ್ಲ. ಅದು ಬಿಟ್ಟು ನಾನು ನಾಲ್ಕು ಗೋಡೆ ಮಧ್ಯೆ ಏನೋ ಮಾಡ್ಕೋತಿನಿ ಅಂತ ಹೊರಟ್ರೆ, ಬೇರೆ ಯಾರಿಗೋ ಗೊತ್ತಿಲ್ಲ ಅಂದ್ರೂ ಅದೆಲ್ಲಾ ನಮ್ಗೆ ಗೊತ್ತಿರುತ್ತೆ, ಜೊತೆಗೆ ಮೇಲಿರೋ ಆ ದೇವ್ರಿಗೆ ಗೊತ್ತಿರುತ್ತೆ.. ಅಷ್ಟೇ ಅಲ್ಲ, ನನ್ನ ಬ್ಯಾಡ್ ಕರ್ಮನಾ ನಾವೇ ನಮ್ಮ ತಲೆಮೇಲೆ ಹೊತ್ಕೊಂಡು ಹೋಗ್ತಾ ಇರ್ತೀವಿ.. 

ಬುದ್ಧಿ ಇದ್ದೂ ಕೂಡ, ನಾವು ಕೇವಲ ನಮ್ಮ ದೇಹದ ಬಯಕೆ ಮಾತು ಕೇಳಿ ಹಾಗೆ ನಡ್ಕೊಂಡ್ರೆ, ಲಿವಿಂಗ್ ಟುಗೇದರ್ ಆಗಿರಬಹುದು, ಪ್ರೀತಿ ಆಗಿರಬಹುದು, ನಾವು ಯಾವುದೇ ರೀತಿಯಲ್ಲಿ ಕೆಟ್ಟದಾಗಿ ನಡೆದುಕೊಂಡಾಗ ಮುಂದೊಂದು ದಿನ ನಮಗೆ ಪಾಪ ಪ್ರಜ್ಞೆ ಕಾಡುತ್ತೆ, 30 ವರ್ಷ ಆದ್ಮೇಲೆ..' ಎಂದಿದ್ದಾರೆ. ಇದು 'ಅರಿವು ಕನ್ನಡ' ಶಾರ್ಟ್ಸ್‌ ಮೂಲಕ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗ್ತಿದೆ.

View post on Instagram