ಐರಾ ಪ್ರೊಡಕ್ಷನ್‌ಹೌಸ್ ತೆರೆದು ಈ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿರುವ ಸಂಗತಿಯನ್ನು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಪ್ರೊಡಕ್ಷನ್ ಹೌಸ್ ತೆರೆದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತಮೂಲಗಳಿಂದ ಅಧಿಕೃತ ಮಾಹಿತಿ ಬಂದಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿನಿಮಾ ನಿರ್ಮಾಣ ಕಾರ್ಯ ಶುರು ಮಾಡಿದ್ದಾರೆ. ಐರಾ ಫಿಲಂಸ್‌ ಪ್ರೆಸೆಂಟ್‌ (AAIRA Films Presents) ಹೆಸರಿನಲ್ಲಿ ಬೆಳಗಾವಿ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳ್ಕರು ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಈ ಸಂಗತಿಯೀಗ ಬೆಳಗಾವಿ ಇಫ್ರಾ (Belagavi Infra) ಸೋಷಿಯಲ್ ಮೀಡಿಯಾ ಅಕೌಂಟ್‌ ಮೂಲಕ ಹೊರಜಗತ್ತಿಗೆ ಬಹಿರಂಗವಾಗಿದೆ. ಈ ಸಂಗತಿಯನ್ನು ಬೆಳಗಾವಿ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಖಚಿತ ಪಡಿಸಿದ್ದಾರೆ ಎಂದೂ ಸಹ ಬರೆಯಲಾಗಿದೆ.

ಹೌದು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ದಿಯೀಗ ಬಂದಿದೆ. ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ‌ಇಲಾಖೆ ಸಚಿವೆ, ರಾಜಕಾರಣ, ಸಹಕಾರ ಕ್ಷೇತ್ರದ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಛಾಪು ಮೂಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮೊಮ್ಮಗಳ ಹೆಸರಲ್ಲಿ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ ಪ್ರೊಡಕ್ಷನ್ ‌ಹೌಸ್ ತೆರೆದಿದ್ದಾರೆ.

ಮೊಮ್ಮಗಳಾದ ಐರಾ ಹೆಸರಲ್ಲಿ ಸದ್ದಿಲ್ಲದೇ 'ಐರಾ ಪ್ರೊಡಕ್ಷನ್ ಹೌಸ್' ಆರಂಭಿಸಿದ ಸಚಿವೆ ಹೆಬ್ಬಾಳ್ಕರ್, ಈಗಾಗಲೇ ‌ಎರಡು ಕನ್ನಡ ಚಿತ್ರಗಳ ನಿರ್ಮಾಣ ಮಾಡಲು ಪ್ರಾರಂಭಿಸಿದ್ದಾರೆ. ಐರಾ ಪ್ರೊಡಕ್ಷನ್‌ಹೌಸ್‌ನಿಂದ ನಿರ್ಮಾಣ ಹಂತದಲ್ಲಿರುವ ಎರಡು ಕನ್ನಡದ ಸಿನಿಮಾಗಳಲ್ಲಿ, ಸ್ಯಾಂಡಲ್‌ವುಡ್‌ನ ಖ್ಯಾತನಾಮರಾದ ನಟರಾದ ರಮೇಶ್ ‌ಅರವಿಂದ, ಗೋಲ್ಡನ್ ಸ್ಟಾರ್ ಗಣೇಶ ಹಾಗೂ ಡಾಲಿ ಡನಂಜರ್‌ರ‌ಂಥ ನಾಯಕರು ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.

ಐರಾ ಪ್ರೊಡಕ್ಷನ್‌ಹೌಸ್ ತೆರೆದು ಈ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿರುವ ಸಂಗತಿಯನ್ನು ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಪ್ರೊಡಕ್ಷನ್ ಹೌಸ್ ತೆರೆದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತಮೂಲಗಳಿಂದ ಅಧಿಕೃತ ಮಾಹಿತಿ ಬಂದಿದೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳೂ ಕೂಡ ಲಭ್ಯವಾಗಿವೆ.