Extramarital Affair : ಉತ್ತರ ಪ್ರದೇಶದಲ್ಲಿ ಮಹಿಳೆ ಇಟ್ಟ ಬೇಡಿಕೆ ಎಲ್ಲರನ್ನು ಆಘಾತಗೊಳಿಸಿದೆ. ಮದುವೆ ಆದ್ಮೇಲೆ ಅಕ್ರಮ ಸಂಬಂಧ ಇಟ್ಕೊಂಡಿದ್ದ ಮಹಿಳೆ ಈಗ ಇಬ್ಬರನ್ನು ಹಂಚಿಕೊಳ್ಳುವ ಷರತ್ತು ವಿಧಿಸಿದ್ದಾಳೆ. ಅದಕ್ಕೆ ಗಂಡ ಹೇಳಿದ್ದೇನು ಗೊತ್ತಾ?
ಉತ್ತರ ಪ್ರದೇಶ (Uttar Pradesh )ದ ರಾಂಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬಳು ಪಂಚಾಯತ್ನಲ್ಲಿ ಎಲ್ಲರ ಮುಂದೆ ನಿಂತು ಕೇಳಿದ ಮಾತು ಜನರನ್ನು ದಿಗ್ಭ್ರಮೆಗೊಳಿಸಿದೆ. ಗಂಡನಿದ್ರೂ ಬಾಯ್ ಫ್ರೆಂಡ್ (Boyfriend) ಹೊಂದಿರುವ ಮಹಿಳೆ, ತಿಂಗಳನ್ನು ಗಂಡ ಹಾಗೂ ಬಾಯ್ ಫ್ರೆಂಡ್ ಗೆ ಹಂಚಲು ಮುಂದಾಗಿದ್ದಾಳೆ. 15 ದಿನ ಗಂಡನ ಜೊತೆಗಿರ್ತೇನೆ ಮತ್ತೆ 15 ದಿನ ಬಾಯ್ ಫ್ರೆಂಡ್ ಜೊತೆಗಿರ್ತೇನೆ ಎಂದಿದ್ದಾಳೆ.
ಘಟನೆ ರಾಂಪುರದಲ್ಲಿರುವ ಅಜೀಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಜೀಮ್ ನಗರದ ಯುವತಿ, ಸುಮಾರು ಒಂದೂವರೆ ವರ್ಷಗಳ ಹಿಂದೆ ಪಕ್ಕದ ಹಳ್ಳಿಯ ಯುವಕನನ್ನು ಮದುವೆ ಆಗಿದ್ಲು. ಮದುವೆಯಾದ ಕೆಲವು ತಿಂಗಳ ನಂತ್ರ ಅವಳಿಗೆ ತಾಂಡಾ ಪ್ರದೇಶದ ಇನ್ನೊಬ್ಬ ಯುವಕನ ಮೇಲೆ ಪ್ರೀತಿ ಶುರುವಾಗಿದೆ. ಒಂದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಮಹಿಳೆ ಪ್ರೇಮಿ ಜೊತೆ ಓಡಿ ಹೋಗಿದ್ದಳು.
ಒಂದು ವರ್ಷದಲ್ಲಿ 10 ಬಾರಿ ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದ ಮಹಿಳೆ ! : ಕಳೆದ ಒಂದು ವರ್ಷದಲ್ಲಿ ಮಹಿಳೆ ಒಟ್ಟು 9 ಬಾರಿ ತನ್ನ ಬಾಯ್ ಫ್ರೆಂಡ್ ಜೊತೆ ಓಡಿಹೋಗಿದ್ದಾಳೆ. ಪ್ರತಿ ಬಾರಿ ಪಂಚಾಯತ್ ಅಥವಾ ಪೊಲೀಸರ ಸಹಾಯದಿಂದ ಆಕೆಯನ್ನು ವಾಪಸ್ ಕರೆ ತರಲಾಗ್ತಿತ್ತು. ಎಂಟು ದಿನಗಳ ಹಿಂದೆ ಮತ್ತೆ ಹತ್ತನೇ ಬಾರಿ ಓಡಿ ಹೋಗಿದ್ದಾಳೆ. ಮಹಿಳೆ ಪತಿ ಅಜೀಮ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ರು. ಪ್ರಿಯಕರನ ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಗಂಡನಿಗೆ ಒಪ್ಪಿಸಿದ್ರು. ಆದ್ರೆ ಪೊಲೀಸ್ ಕೆಲ್ಸ ಪ್ರಯೋಜನಕ್ಕೆ ಬರ್ಲಿಲ್ಲ. ಒಂದು ದಿನ ಮಾತ್ರ ಗಂಡನ ಮನೆಯಲ್ಲಿದ್ದ ಮಹಿಳೆ ಮರುದಿನ ಮತ್ತೆ ಬಾಯ್ ಫ್ರೆಂಡ್ ಮನೆಗೆ ಹೋಗಿದ್ದಾಳೆ.
ಪಂಚಾಯತ್ ಮುಂದೆ ಮಹಿಳೆ ಹೇಳಿದ್ದೇನು? : ಪತ್ನಿಯನ್ನು ಮತ್ತೆ ಮನೆಗೆ ಕರೆತರಲು ಬಾಯ್ ಫ್ರೆಂಡ್ ಮನೆಗೆ ಹೋಗಿದ್ದಾನೆ ಪತಿ. ಈ ವೇಳೆ ಒಂದು ಪಂಚಾಯತಿ ನಡೆಸಲಾಗಿದೆ. ಎಲ್ಲರ ಮುಂದೆ ಗಂಡನ ಮನೆಗೆ ವಾಪಸ್ ಬರಲು ವಿರೋಧಿಸಿದ ಮಹಿಳೆ, ವಿಶಿಷ್ಟ ಬೇಡಿಕೆ ಇಟ್ಟಿದ್ದಾಳೆ. ನಾನು ತಿಂಗಳಲ್ಲಿ 15 ದಿನ ನನ್ನ ಗಂಡನ ಮನೆಯಲ್ಲಿ ಮತ್ತು 15 ದಿನ ನನ್ನ ಪ್ರಿಯಕರನ ಮನೆಯಲ್ಲಿ ಇರ್ತೇನೆ ಎಂದಿದ್ದಾಳೆ.
ಮಹಿಳೆ ಈ ಮಾತು ಕೇಳಿ ಜನರು ದಂಗಾಗಿದ್ದಾರೆ. ಹೆಂಡತಿ ಈ ಮಾತು ಕೇಳಿ ಗಂಡನಿಗೆ ಬೇಸರವಾಗಿದೆ. ನನ್ನನ್ನು ಕ್ಷಮಿಸು ಅಂತ ಕೈಮುಗಿದು ಬೇಡಿಕೊಂಡ ಪತಿ, ಬಾಯ್ ಫ್ರೆಂಡ್ ಜೊತೆ ಜೀವನ ನಡೆಸುವಂತೆ ಪತ್ನಿಗೆ ಹೇಳಿದ್ದಾನೆ. ಇದು ಸದ್ಯ ಎಲ್ಲರ ಬಾಯಲ್ಲಿ ಓಡಾಡ್ತಿರುವ ವಿಷ್ಯವಾಗಿದೆ. ಇದೇ ಮೊದಲ ಬಾರಿಗೆ ಇಂಥ ಪ್ರಕರಣ ನೋಡಿದ್ದೇವೆ ಅಂತ ಗ್ರಾಮಸ್ಥರು ಹೇಳಿದ್ದಾರೆ. ಗಂಡ – ಹೆಂಡತಿ ಮಧ್ಯೆ ಜಗಳ ಆಗೋದು ಸಾಮಾನ್ಯ. ಅದು ಅತಿರೇಕಕ್ಕೆ ಹೋದಾಗ ಪತಿ – ಪತ್ನಿ ಡಿವೋರ್ಸ್ ಪಡೆಯೋದು ಕಾಮನ್ ಆಗಿದೆ. ಆದ್ರೆ ಬಾಯ್ ಫ್ರೆಂಡೂ ಬೇಕು, ಗಂಡನೂ ಬೇಕು ಎನ್ನುವ ಪ್ರಕರಣ ಬಹಳ ಅಪರೂಪ. ಇಬ್ಬರನ್ನು 15 -15 ರ ಸೂತ್ರದಲ್ಲಿ ಹಂಚಿಕೊಳ್ಳಲು ಮುಂದಾದ ಮಹಿಳೆ ನಿರ್ಧಾರ ಕೇಳಿ ಪೊಲೀಸರೂ ದಂಗಾಗಿದ್ದಾರೆ.
