Beggar trouble by fight between two wifes. ಮಧ್ಯಪ್ರದೇಶದಲ್ಲಿ ಭಿಕ್ಷುಕನೊಬ್ಬನ ಚರ್ಚೆಗೆ ಬಂದಿದ್ದಾನೆ. ಇಬ್ಬರು ಹೆಂಡತಿಯರ ಈ ಭಿಕ್ಷುಕನಿಗೆ ದೊಡ್ಡ ಸಮಸ್ಯೆಯೊಂದು ಶುರುವಾಗಿದೆ.
ಮಧ್ಯಪ್ರದೇಶದ ಭಿಕ್ಷುಕ (beggar)ನೊಬ್ಬನ ಕಥೆ ಕೇಳಿ ಜಿಲ್ಲಾಧಿಕಾರಿ (collector) ಮುಖದಲ್ಲಿ ನಗು ಬಂದಿದೆ. ಸಮಸ್ಯೆ ಗಂಭೀರತೆ ಅರಿತ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಪ್ರಕರಣವನ್ನು ಹಸ್ತಾಂತರಿಸಿ, ಭಿಕ್ಷುಕನ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.
ಇಬ್ಬರು ಹೆಂಡಿರ ಮುದ್ದಿನ Beggar :
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ನಡೀತಾ ಇತ್ತು. ಅಲ್ಲಿಗೆ ಭಿಕ್ಷುಕನೊಬ್ಬ ಬಂದಿದ್ದ. ಅವನ ಸಮಸ್ಯೆ ಕೇಳಿ ಆರಂಭದಲ್ಲಿ ಜಿಲ್ಲಾಧಿಕಾರಿ ದಂಗಾಗಿದ್ದರು. ಕಚೇರಿಯಲ್ಲಿದ್ದವರೆಲ್ಲ ಇದೆಂಥ ಸಮಸ್ಯೆ ಅಂತ ಅಚ್ಚರಿಯಿಂದ ನೋಡುವಂತಾಗಿತ್ತು. ಶಫೀಕ್ ವಿಕಲಾಂಗ. ಆತನಿಗೆ ಕಣ್ಣು ಕಾಣುವುದಿಲ್ಲ. ಪ್ರತಿ ದಿನ ಭಿಕ್ಷೆ ಬೇಡಿ ಜೀವನ ನಡೆಸ್ತಾನೆ. ಅವನ ಪ್ರಕಾರ, ಸರಿಯಾಗಿ ಭಿಕ್ಷೆ ಬೇಡಿದ್ರೆ ಒಳ್ಳೆ ಆದಾಯ ಇದೆ. ಆದ್ರೆ ಆತನ ಸಂಪಾದನೆಗೆ ಪತ್ನಿಯರೇ ಅಡ್ಡಿ. ಯಸ್, ಶಫೀಕ್ ಗೆ ಇಬ್ಬರು ಪತ್ನಿಯಂದಿರು. ಅವರ ಗಲಾಟೆಯಿಂದ ಶಫೀಕ್ ಗೆ ಸರಿಯಾದ ಟೈಂಗೆ ಭಿಕ್ಷೆ ಬೇಡುವ ಡ್ಯೂಟಿಗೆ ಹೋಗೋಕೆ ಆಗ್ತಿಲ್ಲ.
ಕಲೆಕ್ಟರ್ ಕಚೇರಿಗೆ ಬಂದ ಶಫೀರ್, ನನಗೆ ಇಬ್ಬರು ಪತ್ನಿಯಂದಿರು. ಇಬ್ಬರು ವಿಪರೀತ ಜಗಳ ಆಡ್ತಾರೆ. ಅವರನ್ನು ಸುಧಾರಿಸೋದ್ರಲ್ಲೇ ನನ್ನ ಸಮಯ ಹಾಳಾಗ್ತಿದೆ ಎಂದಿದ್ದಾನೆ. ಅಷ್ಟೇ ಅಲ್ಲ, ನನಗೆ ಈ ಇಬ್ಬರು ಪತ್ನಿಯಂದಿರನ್ನು ಬಿಡೋಕೆ ಇಷ್ಟವಿಲ್ಲ. ಇಬ್ಬರಲ್ಲಿ ಒಬ್ಬರನ್ನು ನಾನು ಆಯ್ಕೆ ಮಾಡಿಕೊಳ್ಳೋದಿಲ್ಲ. ನನಗೆ ಇಬ್ಬರೂ ಒಂದೇ ಮನೆಯಲ್ಲಿ ಖುಷಿಯಾಗಿ ಇರಬೇಕು. ಹೊಂದಿಕೊಂಡು ಜೀವನ ನಡೆಸಬೇಕು. ಅದಕ್ಕೆ ಏನಾದ್ರೂ ಮಾಡಿ ಅಂತ ಮನವಿ ಸಲ್ಲಿಸಿದ್ದಾನೆ.
ಖಾಂಡ್ವಾ ಜಿಲ್ಲಾಧಿಕಾರಿ ರಿಷಭ್ ಗುಪ್ತಾ, ಶರೀಫ್ ಅರ್ಜಿ ಆಲಿಸಿದ ನಂತ್ರ ಈ ವಿಷ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಿದ್ದಾರೆ. ಪತ್ನಿಯರನ್ನು ಮನವೊಲಿಸುವ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಲು ಮುಂದಾಗಿದ್ದಾರೆ. ಗುರುವಾರ ಅಂದ್ರೆ ನಾಳೆ ಇಬ್ಬರು ಪತ್ನಿಯಂದಿರನ್ನು ಕಚೇರಿಗೆ ಬರುವಂತೆ ಹೇಳಲಾಗಿದೆ. ಇಬ್ಬರ ಸಮಸ್ಯೆ ಆಲಿಸಿ, ಇಬ್ಬರ ಮಧ್ಯೆ ಹೊಂದಾಣಿಕೆ ತರುವ ಪ್ರಯತ್ನ ಮಾಡೋದಾಗಿ ಸಿಬ್ಬಂದಿ ಹೇಳಿದ್ದಾರೆ.
ಭಿಕ್ಷುಕನ ಮಾತಿಗೆ ದಂಗಾದ ಸಾರ್ವಜನಿಕರು :
ಈಗಿನ ಕಾಲದಲ್ಲಿ, ದೊಡ್ಡ ಕಂಪನಿಯಲ್ಲಿ ಕೆಲ್ಸ ಮಾಡಿ, ಲಕ್ಷಗಟ್ಟಳೆ ಸಂಪಾದನೆ ಮಾಡಿದ್ರೂ ಒಬ್ಬಳನ್ನು ಸಾಕೋದೇ ಕಷ್ಟ. ಹಾಗಿರುವಾಗ ಭಿಕ್ಷೆ ಬೇಡ್ತಿರುವ ವಿಕಲಾಂಗ ಶರೀಫ್ ಇಬ್ಬರನ್ನು ಸಾಕೋದಾಗಿ ಆತ್ಮವಿಶ್ವಾಸದಿಂದ ಹೇಳಿದ್ದಾನೆ. ನಾನು ಇಬ್ಬರನ್ನು ಸಾಕ್ತೇನೆ. ಪ್ರತಿ ದಿನ ಭಿಕ್ಷೆ ಬೇಡಿ ಹಣ ಸಂಪಾದನೆ ಮಾಡ್ತೇನೆ. ಆದ್ರೆ ಅವರ ಜಗಳವೇ ನನಗೆ ದೊಡ್ಡ ಸಮಸ್ಯೆ ಆಗಿದೆ ಅಂತ ಶರೀಫ್ ಹೇಳ್ತಿದ್ದಂತೆ ಅಲ್ಲಿ ನೆರೆದಿದ್ದವರೆಲ್ಲ ಶರೀಫ್ ಧೈರ್ಯ ಮೆಚ್ಚಿಕೊಂಡಿದ್ದಾರೆ.
ಭಿಕ್ಷುಕ ಶರೀಫ್ ದಿನದ Earning ಎಷ್ಟು? :
ಶರೀಫ್, ರಸ್ತೆ, ರೈಲು, ಬಸ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಭಿಕ್ಷೆ ಬೇಡ್ತಾನೆ., ಅವನಿಗೆ ದಿನಕ್ಕೆ 2 ರಿಂದ ಮೂರು ಸಾವಿರದವರೆಗೆ ಸಂಪಾದನೆ ಆಗುತ್ತೆ.
ಎರಡನೇ ಮದುವೆಗೆ ಕಾರಣ ಏನು? :
ಶರೀಫ್ 2022 ರಲ್ಲಿ ಮೊದಲ ಮದುವೆಯಾಗಿದ್ದ. ಶರೀಫ್ ನನ್ನು ನೋಡಿಕೊಳ್ಳೋದಾಗಿ ಮೊದಲ ಹೆಂಡ್ತಿ ಪಾಲಕರು ಹೇಳಿದ್ದರು. ಆದ್ರೆ ಯಾರೂ ಅವನನ್ನು ನೋಡಿಕೊಳ್ಳಲಿಲ್ಲ. ಇದ್ರಿಂದ ಬೇಸತ್ತ ಶರೀಫ್, 2024ರಲ್ಲಿ ಎರಡನೇ ಮದುವೆ ಆಗಿದ್ದಾನೆ. ಅಲ್ಲಿಂದ ಅವನ ಸಮಸ್ಯೆ ಡಬಲ್ ಆಗಿದೆ. ಇಬ್ಬರು ಹೆಂಡ್ತಿಯರ ಕಿತ್ತಾಟಕ್ಕೆ ಶರೀಫ್ ಬೇಸತ್ತಿದ್ದಾನೆ.
