ಪ್ರೀತಿ ಕುರುಡು ಎಂದು ಹೇಳುತ್ತಾರೆ. ಇಲ್ಲೋರ್ವ ಹುಡುಗ ತನ್ನ ಪ್ರಿಯತಮೆ ಫೋನ್‌ ಬ್ಯುಸಿ ಬಂತು ಎಂದು ಇಡೀ ಗ್ರಾಮವನ್ನೇ ಕತ್ತಲೆಯಲ್ಲಿಟ್ಟ. ಹೌದು, ಇಲ್ಲೊಂದು ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ. 

ಪ್ರೀತಿಗೋಸ್ಕರ ಹುಚ್ಚುತನದಿಂದ ಪ್ರಾಣ ಕೊಡೋವರೆ ಇದ್ದಾರಂತೆ, ಇನ್ನು ಊರಿನ ಕರೆಂಟ್‌ ಕಟ್‌ ಮಾಡದೇ ಇರ್ತಾರಾ? ಈ ಮಾತು ಕೇಳಿದ್ರೆ ಏನಪ್ಪಾ ಇದು ವಿಚಿತ್ರ ಅಂತ ನಿಮಗೂ ಅನಿಸಬಹುದು. ಗ್ರಾಮೀಣ ಭಾಗದ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಕಾಲ್‌ ಮಾಡೋಕೆ ಕರೆಂಟ್‌ ಕೊಡಿ ಅಂತ ವಿದ್ಯುತ್‌ ಮಂಡಳಿಗೆ ಫೋನ್‌ ಮಾಡಿದ ಆಡಿಯೋವೊಂದು ಈಗಲೂ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಈಗ ಇಲ್ಲೋರ್ವ ಯುವಕ ತನ್ನ ಪ್ರೇಯಸಿ ಫೋನ್‌ ಬ್ಯುಸಿ ಬಂತು ಎಂದು ಕರೆಂಟ್‌ ವಾಯರ್‌ ಕಟ್‌ ಮಾಡಿದ್ದಾನೆ.

ಕರೆಂಟ್ ಲೈನ್‌ ಕಟ್‌ ಮಾಡಿದ ಹುಡುಗ!

ಸಿಟಿ, ಗ್ರಾಮೀಣ ಭಾಗದ ಲವ್‌ಸ್ಟೋರಿಗಳ ವಿಧಾನವೇ ಬೇರೆ ಎನ್ನಬಹುದು. ಈ ಕಥೆಗಳು ಆಗಾಗ ಕಾಲಕ್ಕೆ ತಕ್ಕಂತೆ ಟ್ವಿಸ್ಟ್‌ ಪಡೆಯುತ್ತಲೇ ಇರುತ್ತವೆ. ಅದರಲ್ಲಿ ಓರ್ವ ಯುವಕನ ಲವ್ ಸ್ಟೋರಿಯು ನಿಜಕ್ಕೂ ಡೇಂಜರಸ್‌ ಆಗಿದೆ ಎನ್ನಬಹುದು. ಹುಡುಗಿ ಫೋನ್‌ ಯಾವಾಗಲೂ ಬ್ಯುಸಿ ಬರುತ್ತದೆ ಎಂದು ಆತ ತನ್ನ ಊರಿನ ಮೇನ್‌ ಕರೆಂಟ್‌ ಕಂಬದ ಲೈನ್‌ಗಳನ್ನು ಕಟ್‌ ಮಾಡಿದ್ದಾನೆ. ಕರೆಂಟ್‌ ಕಂಬ್‌ ಹತ್ತಿ ಅಲ್ಲಿನ ಲೈನ್‌ ಕಟ್‌ ಮಾಡಿದ್ದಾನೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ. ಇದು ನಿಜಕ್ಕೂ ಎಲ್ಲಿ ನಡೆದಿದೆ? ಯಾವಾಗ? ನಿಜಕ್ಕೂ ಇದರ ಹಿಂದಿನ ಕಥೆ ಏನು ಎನ್ನೋದು ಬಯಲಾಗಿಲ್ಲ. ಪ್ರಿಯತಮೆಗೋಸ್ಕರ ಲೈನ್‌ ಕಟ್‌ ಮಾಡಿದ ಎಂದಷ್ಟೇ ಹೇಳಲಾಗುತ್ತಿದ್ದು, ವಿಡಿಯೋ ವೈರಲ್‌ ಆಗ್ತಿದೆ. ನಿಜಕ್ಕೂ ಲವ್ವರ್‌ಗೋಸ್ಕರವೇ ಇದರ ಹಿಂದಿನ ಫೀಲಿಂಗ್ಸ್, ಕಾರಣಗಳುಮ ಪರಿಣಾಮಗಳ ಬಗ್ಗೆಯೂ ಯೋಚಿಸಬೇಕಾಗುವುದು.

ಹುಡುಗಿ ಜೊತೆ ಮಾತಾಡೋಕೆ ಆಗ್ಲಿಲ್ಲ

ಒಂದು ಹಳ್ಳಿಯಲ್ಲಿ, 22 ವರ್ಷದ ಆಸುಪಾಸಿನ ಯುವಕ ತನ್ನ ಪ್ರೇಯಸಿಯ ಜೊತೆ ಫೋನ್‌ನಲ್ಲಿ ಮಾತನಾಡಲು ತವಕಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವನು ಫೋನ್‌ ಮಾಡಿದರೆ, ಯಾವಾಗಲೂ ಬ್ಯುಸಿ ಬರುತ್ತಿತ್ತು. ಆ ಯುವಕನಿಗೆ ಹುಡುಗ ಯಾರ ಬಳಿಯೋ ಮಾತನಾಡುತ್ತಿದ್ದಾಳೆ, ನನಗೆ ಫೋನ್‌ ಮಾಡ್ತಿಲ್ಲ ಎಂಬ ಡೌಟ್‌ ಬಂದಿದೆ. ಹುಡುಗಿ ಜೊತೆ ಮಾತಾಡೋಕೆ ಆಗ್ತಿಲ್ಲ ಎಂಬ ಬೇಸರದಲ್ಲಿ ಅವನು ಅವಳ ಮನೆಗೆ ಕನೆಕ್ಟ್‌ ಆಗುವ ಲೈನ್‌ ಕಟ್‌ ಮಾಡಿದ್ದಾನೆ.

ಡೇಂಜರಸ್‌ ನಡವಳಿಕೆ

ಮೊಬೈಲ್‌ ಟವರ್‌ಗೆ ವಿದ್ಯುತ್‌ ಸರಬರಾಜು ಇದ್ದರೆ ಮಾತ್ರ ಫೋನ್‌ ಚಾರ್ಜ್‌ ಮಾಡಬಹುದು. ಅಲ್ಲಿ ಯುಪಿಎಸ್‌ಸಿ ಸಂಪರ್ಕ ಸಿಗೋದು ಕಷ್ಟ. ಇದನ್ನು ತಿಳಿದಿದ್ದ ಆ ಹುಡುಗ ಲೈನ್‌ ಕಂಬ ಹತ್ತಿ, ಅಲ್ಲಿದ್ದ ಲೈನ್‌ ಕಟ್‌ ಮಾಡಿದ್ದಾನೆ. ಇದು ನೋಡಲು ತಮಾಷೆ ಎನಿಸಿದರೂ ಕೂಡ, ನಿಜಕ್ಕೂ ಡೇಂಜರಸ್‌ ಆಗಿದೆ. ಕರೆಂಟ್‌ ಕಟ್‌ ಮಾಡುವಾಗ, ಮೇನ್‌ ಸ್ವಿಚ್‌ ಆಫ್‌ ಆಗಿಲ್ಲ ಅಂದಿದ್ರೆ ಆ ಹುಡುಗನ ಪ್ರಾಣಕ್ಕೆ ಅಪಾಯ ಆಗುತ್ತಿತ್ತು. ಅಷ್ಟೇ ಅಲ್ಲದೆ ಇಡೀ ಗ್ರಾಮಕ್ಕೆ ಕರೆಂಟ್‌ ಸಮಸ್ಯೆ ಆಗುವುದು. ಕರೆಂಟ್‌ನಿಂದ ನಿತ್ಯದ ಒಂದಿಷ್ಟು ಕೆಲಸಗಳು ಆಗುವುದು, ಕರೆಂಟ್‌ ಇಲ್ಲ ಅಂದರೆ ಎಲ್ಲರಿಗೂ ಸಮಸ್ಯೆ ಆಗುವುದು.

ಆ ಹುಡುಗ ಏನು ಮಾಡಬಹುದಿತ್ತು?

ಲವ್‌ ಮಾಡಬೇಕು, ಆ ಹುಡುಗಿ ಫೋನ್‌ನಲ್ಲಿ ಮಾತನಾಡೋಕೆ ರೆಡಿ ಇಲ್ಲ ಅಂದಾಗ, ಟೈಮ್‌ ಕೊಟ್ಟಿಲ್ಲ ಎಂದಾಗ ಒಮ್ಮೆ ಕೂತು ಮಾತನಾಡಿ ಸರಿಮಾಡಿಕೊಳ್ಳಬೇಕು, ಅದನ್ನು ಬಿಟ್ಟು ಈ ರೀತಿ ಮಾಡೋದು ಸರಿ ಇಲ್ಲ. ಆ ಹುಡುಗಿ ಫೋನ್‌ ಬ್ಯುಸಿ ಬರೋದಿಕ್ಕೆ ನಿಜವಾದ ಕಾರಣ ಏನು? ನನ್ನಿಂದ ಅವಳಿಗೆ ಬೇಸರ ಆಗುತ್ತಿದೆಯಾ ಎಂಬುದನ್ನು ಕೂಡ ಯೋಚಿಸಬೇಕು. ರಾಜು ತನ್ನ ಪ್ರೇಯಸಿಯ ಜೊತೆ ಮುಕ್ತವಾಗಿ ಮಾತನಾಡಿದ್ದರೆ, ಈ ಗೊಂದಲವನ್ನು ತಪ್ಪಿಸಬಹುದಿತ್ತು. ಈ ಗೊಂದಲ ಸರಿ ಹೋಗಿಲ್ಲ ಅಂದರೆ ಆ ಹುಡುಗಿಯನ್ನು ಬಿಟ್ಟು ಮೂವ್‌ ಆನ್‌ ಆಗೋದು ಒಳ್ಳೆಯದು. ಈ ತಪ್ಪು ನಿರ್ಧಾರದಿಂದ ಜೀವಕ್ಕೆ ಅಪಾಯ ಆಗಬಹುದು, ಬೇರೆಯವರಿಗೆ ಸಮಸ್ಯೆ ಆಗುವುದು.

View post on Instagram