ಇದೇ ರೀತಿ ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರ ಇರುವುದಿಲ್ಲ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಕೂಡ ಇರಲ್ಲ. ಸರ್ಕಾರನೂ ಇರಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಚಾಮರಾಜನಗರ (ಅ.29): ಇದೇ ರೀತಿ ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರ ಇರುವುದಿಲ್ಲ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಕೂಡ ಇರಲ್ಲ. ಸರ್ಕಾರನೂ ಇರಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಆಂತರಿಕ ಪೈಟ್ ಜೋರಿದೆ, 2.5 ವರ್ಷ ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟೆ ಬಂದಿದ್ದಾರೆ, ಆದ್ರೀಗ ತಾನು 5 ವರ್ಷ ಸಿಎಂ ಆಗ್ತಿನಿ, ಬದಲಾವಣೆ ಆದ್ರೆ ತಾನು ಹೇಳಿದವರು ಆಗಬೇಕು, ಡಿಕೆಶಿ ಸಿಎಂ ಆಗಬಾರದೆಂದು ಇದೆಲ್ಲಾ ತಂತ್ರ ನಡೀತಿದೆ. ಸಿದ್ದರಾಮಯ್ಯ ತಂತ್ರ- ಪ್ರತಿತಂತ್ರದ ನಡುವೆ ಆಡಳಿತ ಹಾಳಾಗಿದೆ, ಇವರ ಹೈಡ್ರಾಮಾಕ್ಕೆ ಆಡಳಿತ ಕುಸಿಯುತ್ತಿದೆ, ಇದೇ ರೀತಿ ಮುಂದುವರೆದ್ರೆ ಸರ್ಕಾರ ಬೀಳತ್ತೆ ಎಂದರು.
ಆರ್‌ಎಸ್‌ಎಸ್ ಪಥ ಸಂಚಲನ ವಿವಾದ ವಿಚಾರಕ್ಕೆ ಮಾತನಾಡಿ, ಹಲವರು ವರ್ಷದಿಂದ ಆರ್ ಎಸ್ಎಸ್ ಪಥ ಸಂಚಲನ ನಡೆದು ಬಂದಿದೆ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಎಲ್ಲವನ್ನೂ ರದ್ದು ಮಾಡಲಾಗಲ್ಲ, ಸಂವಿಧಾನದಡಿ ಕೊಟ್ಟ ಸ್ವಾತಂತ್ರ್ಯದಡಿಯೇ ಪಥ ಸಂಚಲನ ನಡೆಯುತ್ತದೆ. ಇಂದು ಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ, ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ದೊಡ್ಡ ಸೋಲು ಉಂಟಾಗಿದೆ ಇದೆಲ್ಲವೂ ಸರ್ಕಾರಕ್ಕೆ ಏತಕ್ಕೆ ಬೇಕಿತ್ತು? ಸಂಘ ಚಟುವಟಿಕೆಯಲ್ಲಿ ಭಾಗಿಯಾದರೆಂದು ನೌಕರರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದು ಕಿಡಿಕಾರಿದರು.
ಹಿಂದೆ 1966 ರಲ್ಲಿ ಸರ್ಕಾರಿ ನೌಕರರು ಸಂಘಕ್ಕೆ ಹೋಗಬಾರದೆಂದು ನೆಹರೂ ಬ್ಯಾನ್ ಮಾಡಿದ್ದರು. ಆದರೆ, 2024 ರಲ್ಲಿ ಕೇಂದ್ರ ಸರ್ಕಾರ ನಿರ್ಬಂಧವನ್ನು ರದ್ದು ಮಾಡಿದೆ. ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗಿಯಾಗಲು ಸಂಪೂರ್ಣ ಹಕ್ಕಿದೆ, ಆರ್ ಎಸ್ಎಸ್ ರಾಜಕೀಯ ಪಕ್ಷವಲ್ಲ- ಸಮುದಾಯ ಸಂಘಟಿಸುವ ದೇಶಭಕ್ತಿಯಯ ಸಂಘಟನೆ ಎಂದರು. ಆರ್‌ಎಸ್‌ಎಸ್ ಟೀಕೆ ಮುಂದುವರೆಸಿದ್ದೇ ಆದ್ರೆ ರಾಜಕೀಯ ಅಂತ್ಯಕಾಲ ಎಂದು ತಿಳ್ಕೊಳಿ, ಜನರ ಮನಸ್ಸನ್ನು ಡೈವರ್ಟ್ ಮಾಡಲು ಅವರೇ ಒಂದೊಂದು ವಿಚಾರ ಹೊರಬಿಡುತ್ತಿದ್ದಾರೆ,
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿಲ್ಲ, ಈ ಎರಡೂವರೆ ವರ್ಷ ಮಾತನಾಡಲಿಲ್ಲ, ಈಗ ಚಿತ್ತಾಪುರದಲ್ಲಿ ಲಾ ಅಂಡ್ ಪ್ರಾಬ್ಲಂ ಆಗಿದ್ಯಾ ಎಂದು ಪ್ರಶ್ನಿಸಿದರು. ಐಟಿ ಬಿಟಿ ಮಿನಿಸ್ಟರ್ ಪ್ರಿಯಾಂಕ್ ಗೆ ಉದ್ಯೋಗವಿಲ್ಲ, ಅವರ ಇಲಾಖೆಯನ್ನು ಹೇಳೋರ್ ಕೇಳೋರ್ ಇಲ್ಲಾ, ಪ್ರಿಯಾಂಕ್ ನಿರ್ಲಕ್ಷ್ಯದಿಂದ ಆಂಧ್ರಕ್ಕೆ ಹೊಸ ಕಂಪನಿ ಹೋಗಿದೆ. ಎಲ್ಲಾ ಫೇಲ್ಯೂರ್ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ, ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದಷ್ಟು ಸಂಘ ಹೆಚ್ಚು ಬೆಳೆಯಲಿದೆ, ಆರ್‌ಎಸ್‌ಎಸ್ ಬರೀ ಚಿತ್ತಾಪುರ, ಗುರುಮಿಠಕಲ್ ನಲ್ಲಿಲ್ಲ- ಜಗತ್ತಲ್ಲೇ ಆರ್‌ಎಸ್‌ಎಸ್ ಇದೆ ಎಂದರು.
ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
ಆರ್‌ಎಸ್‌ಎಸ್ ಪಥಸಂಚಲನ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಹಲವು ವರ್ಷದಿಂದ ಸಂವಿಧಾನದಡಿ ಕೊಟ್ಟ ಸ್ವಾತಂತ್ರ್ಯದ ಅಡಿಯೇ ಆರ್‌ಎಸ್ಎಸ್ ಪಥ ಸಂಚಲನ ನಡೆಯುತ್ತಿದೆ. ಮಂಗಳವಾರ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ್ದು, ಕಾನೂನು ಹೋರಾಟದಲ್ಲಿ ಸರ್ಕಾರಕ್ಕೆ ದೊಡ್ಡ ಸೋಲು ಉಂಟಾಗಿದೆ. ಇದೆಲ್ಲವೂ ಸರ್ಕಾರಕ್ಕೆ ಏಕೆ ಬೇಕಿತ್ತು? ಎಂದು ಕಿಡಿಕಾರಿದರು. ಈ ಹಿಂದೆ 1966ರಲ್ಲಿ ಸರ್ಕಾರಿ ನೌಕರರು ಸಂಘಕ್ಕೆ ಹೋಗಬಾರದೆಂದು ನೆಹರೂ ಬ್ಯಾನ್ ಮಾಡಿದ್ದರು.
ಆದರೆ, 2024ರಲ್ಲಿ ಕೇಂದ್ರ ಸರ್ಕಾರ ನಿರ್ಬಂಧವನ್ನು ರದ್ದು ಮಾಡಿದೆ. ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗಿಯಾಗಲು ಸಂಪೂರ್ಣ ಹಕ್ಕಿದೆ. ಆರ್‌ಎಸ್ಎಸ್ ರಾಜಕೀಯ ಪಕ್ಷವಲ್ಲ ಸಮುದಾಯ ಸಂಘಟಿಸುವ ದೇಶಭಕ್ತಿಯ ಸಂಘಟನೆ. ಸಂಘವನ್ನು ಟೀಕೆ ಮುಂದುವರೆಸಿದ್ದೇ ಆದ್ರೆ ರಾಜಕೀಯ ಅಂತ್ಯಕಾಲ ಆರಂಭವಾಗಲಿದೆ. ಐಟಿಬಿಟಿ ಸಚಿವ ಪ್ರಿಯಾಂಕ್‌ಗೆ ಉದ್ಯೋಗವಿಲ್ಲ. ಪ್ರಿಯಾಂಕ್ ನಿರ್ಲಕ್ಷ್ಯದಿಂದ ಗೂಗಲ್ ಕಂಪನಿ ಆಂಧ್ರಕ್ಕೆ ಹೋಗಿದೆ ಎಂದು ಟೀಕಿಸಿದರು.
