ಒಕ್ಕಲಿಗ ಕ್ರೈಸ್ತ,ಬ್ರಾಹ್ಮಣ ಕ್ರೈಸ್ತ ಜಾತಿ ಇದೆಯಾ? ಸಿದ್ದರಾಮಯ್ಯ ಇದೀಗ ಸೋನಿಯಾ ಗಾಂಧಿ ಒಲೈಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇದೇ ವೇಳೆ ಸರ್ಕಾರಕ್ಕೆ ಆಸ್ತಿಕ ಯಾರು, ನಾಸ್ತಿಕ ಯಾರು ಅನ್ನೋ ಪತ್ತೆ ಹಚ್ಚುವ ಕೆಲಸ ಯಾಕೆ ಎಂದಿದ್ದಾರೆ.
ಬೆಂಗಳೂರು (ಸೆ.13) ಒಕ್ಕಲಿಗ ಕ್ರೈಸ್ತ, ಬ್ರಾಹ್ಮಣ ಕ್ರೈಸ್ತ , ಲಿಂಗಾಯತ ಕ್ರೈಸ್ತ ಅನ್ನೋ ಜಾತಿ ಇದೆಯಾ? ಒಮ್ಮೆ ಮತಾಂತರ ಆದ ಬಳಿಕ ಕೈಸ್ತರು. ಅವರ ಹಿಂದಿನ ಜಾತಿ ಹುಡುಕುವ ಪ್ರಯತ್ನ ಸರ್ಕಾರಕ್ಕೆ ಯಾಕೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ. ಈ ಪೈಕಿ ಛಲವಾದಿ ನಾರಾಯಣಸ್ವಾಮಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಆಸ್ತಿಕ ನಾಸ್ತಿಕ ಹುಡುಕುವ ಕೆಲಸ ಬೇಕಾ.?
ಯಾವುದೇ ಆಡಳಿತ ಸರ್ಕಾರಕ್ಕೆ ಆಸ್ತಿಕ ನಾಸ್ತಿಕನನ್ನು ಹುಡುಕುವ ಕೆಲಸ ಬೇಕಾ.? ಒಕ್ಕಲಿಗ ಕ್ರೈಸ್ತ, ಬ್ರಾಹ್ಮಣ ಕ್ರೈಸ್ತ ಇದರ ಅರ್ಥವೇನು? ಸಿದ್ದರಾಮಯ್ಯನವರು ಇದೀಗ ಸೋನಿಯಾ ಗಾಂಧಿಯವರನ್ನ ಒಲೈಕೆ ಮಾಡಲು ಜಾತಿ, ಜಾತಿಗೂ ಕ್ರೈಸ್ತರನ್ನ ಜೋಡಿಸುತ್ತಿದೆ. ಯಾವುದೇ ಜಾತಿಯವರಾಗಿದ್ರು ಕ್ರೈಸ್ತರಾಗಿ ಮತಾಂತರವಾದರೆ ಅವರು ಕ್ರೈಸ್ತರೇ. ಅವರು ಯಾವ ಜಾತಿಯಿಂದ ಸೇರಿದ್ದಾರೆ ಅನ್ನೋದು ನಿಮಗೆ ಯಾಕೆ ಬೇಕು? ಇದು ಮತಾಂತರವನ್ನು ಉತ್ತೇಜಿಸುವ ಕೆಲಸ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಮತಾಂತರ ಆದವರನ್ನು ಕ್ರಿಶ್ಚಿಯನ್, ಸಿದ್ದರಾಮಯ್ಯ ಹೇಳಿಕೆಯೇ ಗೊಂದಲ ಎಂದ ಛಲವಾದಿ
ಮತಾಂತರ ಆದವರನ್ನ ಕ್ರಿಶ್ಚಿಯನ್ ಅಂತಲೇ ನಿರ್ಧರಿಸಲಾಗುತ್ತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಛಲವಾದಿ ನಾರಾಯಾಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರ ನಡೆಯೊಂದು ನುಡಿಯೊಂದು ಆಗಿದೆ. ಅವರು ಏನು ಹೇಳ್ತಾರೋ ಅದರ ವಿರುದ್ದವಾಗಿ ಮಾಡ್ತಾರೆ. ಮತಾಂತರ ಆದವರನ್ನು ಕ್ರಿಶ್ಚಿಯನ್ ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ. ಬಳಿಕ ಜಾತಿ ಕಾಲಂನಲ್ಲಿ ಬ್ರಾಹ್ಮಣ ಕ್ರೈಸ್ತ, ಲಿಂಗಾಯಿತ ಕ್ರೈಸ್ತ ಎಂದು ದಾಖಲಿಸುತ್ತಾರೆ. ಸಿದ್ದರಾಮಯ್ಯ ಅವರಿಗೆ ಏನಾಗಿದೆ ನನಗೆ ಗೊತ್ತಿಲ್ಲ. ಅವರ ವಯಸ್ಸಿ ಕಾರಣವೋ ಅಥವಾ ನಡೆಯಲ್ಲಿ ಬದಲಾವಣೆ ಮಾಡಿಕೊಂಡ್ರೋ ಗೊತ್ತಿಲ್ಲ ಎಂದು ಥಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಜನತಾದಳದಲ್ಲಿ ಇರುವವರೆಗೆ ಅವರನ್ನ ಬಹಳ ಉತ್ತಮರು ಎಂದು ಹಲವರು ಅವರನ್ನು ಫಾಲೋ ಮಾಡಿದ್ದರು. ಈಗ ನೋಡಿದ್ರೆ ಅವರ ತಪ್ಪು ಹೆಜ್ಜೆಗಳನ್ನ ಕಂಡವರು ಛೀಮಾರಿ ಹಾಕುವ ಕೆಲಸ ಮಾಡಲು ಹೊರಟಿದ್ದಾರೆ. ಅಧಿಕಾರಕ್ಕೆ ಕಾಂಗ್ರೆಸ್ ಸೇರಿದ ಮೇಲೆ ಅಧಿಕಾರದಲ್ಲಿ ಕೂತಿರಬೇಕು ಅನ್ನೋ ಕಾರಣಕ್ಕೆ ಅವಿವೇಕದ ಕೆಲಸ ಮಾಡ್ತಾರೆ ಅಂತ ನಾವು ತಿಳಿದುಕೊಂಡಿರಲಿಲ್ಲ. ಇಡೀ ಜನ ಅವರಿಗೆ ಶಾಪ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಛಲವಾದಿ ಹೇಳಿದ್ದಾರೆ.
ನಾಸ್ತಿಕ, ಆಸ್ತಿಕ ಜನಗಣತಿಯಲ್ಲಿ ಬರಬೇಕಿಲ್ಲ.
ನಾಸ್ತಿಕ, ಆಸ್ತಿಕ ಜನಗಣತಿಯಲ್ಲಿ ಬರಬೇಕಿಲ್ಲ. ಅದು ವ್ಯಕ್ತಿಗಳ ನಡುವೆ ಇರುವ ನಡವಳಿಕೆ. ಎಷ್ಟೋ ನಾಸ್ತಿಕರು ಆಸ್ತಿಕರಾಗಿದ್ದಾರೆ. ಅದೇ ರೀತಿ ಆಸ್ತಿಕರು ನಾಸ್ತಿಕರಾಗಿದ್ದಾರೆ. ತಿಳುವಳಿಕೆ ಇಲ್ಲದೇ ಇದ್ದಾಗ ಯಾವುದೋ ಒಂದು ವಿಚಾರವನ್ನ ಹೀಯಾಳಿಸುವುದು, ವಿರೋಧಿಸುವುದು ಸಹಜ. ಅದೇ ಅರಿವಿಗೆ ಬಂದ ಬಳಿಕ ಅವರು ಪರಿವರ್ತನೆ ಆಗುತ್ತಾರೆ. ಆದರೆ ಸರ್ಕಾರ ಜನರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
11 ಕೋಟಿ ಸಸಿ ನೆಟ್ಟಿದ್ದೀರಿ ಎಷ್ಟುಳಿದಿವೆ?..' ಅರಣ್ಯ ಪ್ರದೇಶ ಹೆಚ್ಚಾಗದ್ದಕ್ಕೆ ಸಿಎಂ ಬೇಸರ
ಸಮಾಜವನ್ನ ಉತ್ತಮಗೊಳಿಸಿ ಒಳ್ಳೆ ರೀತಿಯಲ್ಲಿ ನಡೆಸಬೇಕು ಅನ್ನೋ ಭಾವನೆ ಸರ್ಕಾರಕ್ಕಿಲ್ಲ. ಜನ ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ಅಷ್ಟರಲ್ಲಿ ಕಾಂಗ್ರೆಸ್ ನ್ನು ಅಳಿಸಿ ಹಾಕುವ ಭಾವನೆಯಲ್ಲಿ ದೇಶದ ಜನ ಇದ್ದಾರೆ.
