ಈಗ ಅನನ್ಯ ಭಟ್ ಇರುವುದೇ ಸುಳ್ಳು ಆಗಿದೆ. ಮಾಸ್ಕ್ ಮ್ಯಾನ್‌ಗೆ ಮಾಸ್ಕ್ ಹಾಕಿಸಿರುವುದೇ ಸರ್ಕಾರ. ಅವನಿಗೆ ಬೆಂಬಲ ಕೊಟ್ಟಿರುವುದೇ ಸಿದ್ದರಾಮಯ್ಯ ಸರ್ಕಾರ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ (ಆ.25): ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣ ಸಂಬಂಧಪಟ್ಟಂತೆ ಇದು ಬುರುಡೆ ಗ್ಯಾಂಗ್ ಎಂದು ಹೇಳಿದ್ದೆ. ಇದು ಮತಾಂತರದ ಗ್ಯಾಂಗ್ ಎಂದು ಇಲ್ಲಿನ ಟಿ ಬಿ ಡ್ಯಾಂನಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಇದು ಮತಾಂತರದ ಜಿಹಾದ್. ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ. ಈಗ ಅನನ್ಯ ಭಟ್ ಇರುವುದೇ ಸುಳ್ಳು ಆಗಿದೆ. ಮಾಸ್ಕ್ ಮ್ಯಾನ್‌ಗೆ ಮಾಸ್ಕ್ ಹಾಕಿಸಿರುವುದೇ ಸರ್ಕಾರ. ಅವನಿಗೆ ಬೆಂಬಲ ಕೊಟ್ಟಿರುವುದೇ ಸಿದ್ದರಾಮಯ್ಯ ಸರ್ಕಾರ. ಈಗ ಪ್ರಗತಿಪರರು ಕಾಣೆಯಾಗಿದ್ದಾರೆ.
ಬುರುಡೆ ಅಗೆಯಲು ಎರಡು ಮೂರು ಕೋಟಿ ಖರ್ಚು ಆಗಿದೆ. ಇದಕ್ಕೆ ಖರ್ಚು ಆಗಿದ್ದು ಯಾರ ಹಣ. ದಾರಿಯಲ್ಲಿ ಹೋಗುವವನು ಬಂದು ಕೇಳಿದರೆ ಎಸ್ಐಟಿ ರಚನೆ ಮಾಡುತ್ತೀರಿ. ಮುಸ್ಲಿಂ, ಚರ್ಚ್ ಗಳಿಗೆ ಇವರು ಹೋಗುವುದಿಲ್ಲ. ಹಿಂದೂ ದೇವಾಲಯಗಳು ಮಾತ್ರ ಇವರ ಟಾರ್ಗೆಟ್. ಬುರುಡೆ ಮನುಷ್ಯನನ್ನು ಆರಂಭದಲ್ಲಿ ತನಿಖೆ ಮಾಡಬೇಕಾಗಿತ್ತು. ಏಕಾಏಕಿ ತನಿಖೆಗೆ ಆದೇಶ ಮಾಡಿದರು. ಮಾಸ್ಕ್ ಹಾಕಿದ್ದರಿಂದ ಆತ ಎಂತವನೆಂದು ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಕಾಮನಸೆನ್ಸ್ ಇಲ್ಲ. ಯಾರು ಎಂದು ಪರಿಶೀಲನೆ ಮಾಡಿ ಆಮೇಲೆ ತನಿಖೆಗೆ ಕೊಡಿ ಎಂದು ಕೇಳಿದ್ದೇನೆ. ಗಿರೀಶ್, ತಿಮರೋಡಿ ಇವರು ಇವರೆಲ್ಲ ಕಾಂಎ ಪ್ರಯೋಜಕತ್ವ ಮಂಡಳಿ ಎಂದರು.
ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ, ಎರಡು ಪಾಕಿಸ್ತಾನ ಕೊಟ್ಟವರು ಯಾರು. ಆರ್‌ಎಸ್‌ಎಸ್ ಇಲ್ಲ ಅಂದರೆ ಭಾರತ ಪಾಕಿಸ್ತಾನ ಆಗುತ್ತಿತ್ತು. ಮೋದಿ, ಉಪರಾಷ್ಟ್ರಪತಿ ಆರ್‌ಎಸ್‌ಎಸ್. ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದರು. ಖರ್ಗೆ ಬೇಡವೆಂದರೂ ಪ್ರಯಾಗರಾಜ್‌ಗೆ ಹೋದರು. ನವೆಂಬರ್ ಕ್ರಾಂತಿ ವಿಚಾರವಾಗಿ ಡಿ.ಕೆ.ಶಿವಕುಮಾರ್ ಆಡುವ ಹುಡುಗ ಅಲ್ಲ. ರಾಜಕೀಯ ಚಾಣಕ್ಯ. ಯಾವಾಗ ಯಾರಿಗೆ ಚೆಕ್ ಈಡಬೇಕು ಅವರು ಇಡುತ್ತಾರೆ. ಈ ದರಿದ್ರ ಸರಕಾರ ತೊಲಗಲಿ ಎಂದು ತಿಳಿಸಿದರು.
ದಸರಾ ಹಿಂದೂಗಳ ಹಬ್ಬ: ಬಾನು ಮುಸ್ತಾಕ್‌ರಿಂದ ದಸರಾ ಉದ್ಘಾಟನೆ ವಿಚಾರವಾಗಿ, ದಸರಾ ಹಿಂದೂಗಳ ಹಬ್ಬ. ಮುಸ್ಲಿಂರ ಹಬ್ಬ ಅಲ್ಲ. ಮೂರ್ತಿ ಪೂಜೆ ಇಲ್ಲ ಎನ್ನುವುದು ಮುಸ್ಲಿಂ ಧರ್ಮದಲ್ಲಿ ಇಲ್ಲ. ಅವರನ್ನು ಧರ್ಮದಿಂದ ಹೊರಗಡೆ ಹಾಕಿದರೆ ಏನು ಮಾಡ್ತೀರಿ. ಚಾಮುಂಡೇಶ್ವರಿ ವಿಚಾರದಲ್ಲಿ ಯಾರೂ ಸಿಕ್ಕಿಲ್ವಾ? ಹಿಂದೂಗಳನ್ನು ಕಡೆಗಣಿಸುತ್ತೀರಾ. ಕಳೆದ ಬಾರಿ ಹೀಗೆ ಮಾಡಿದ್ರಿ. ಈ ಬಾರಿಯೂ ಹಾಗೆಯೇ ಮಾಡಿದ್ದೀರಿ. ಹಿಂದೂಗಳ ವಿರೋಧಿಗಳನ್ನು ಕರೆದುಕೊಂಡು ಬಂದು ಹೀಗೆ ಮಾಡುತ್ತಿದ್ದಾರೆ. ಚಾಮುಂಡೇಶ್ವರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಇದು ಯಾರಿಗೂ ಒಳ್ಳೇಯದಲ್ಲ. ಸಿದ್ದರಾಮಯ್ಯ ಅವರ ಟಿಪ್ಪು ಮನಸ್ಥಿತಿ ತೋರಿಸಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.