ಆರ್.ಅಶೋಕ್ ಬಗ್ಗೆ ಫೇಮಸ್ ಜ್ಯೋತಿಷ್ಯಾಲಯದಲ್ಲಿ ಜಾತಕ ಕೇಳಿದ್ದೇನೆ. ಅವರ ಫ್ಯೂಚರ್ ಜ್ಯೋತಿಷ್ಯ ಕೇಳಿದ್ದೇನೆ. ಯತ್ನಾಳ್ ಬಗ್ಗೆಯೂ ಜ್ಯೋತಿಷ್ಯ ಕೇಳಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು (ಅ.04): ಆರ್.ಅಶೋಕ್ ಬಗ್ಗೆ ಫೇಮಸ್ ಜ್ಯೋತಿಷ್ಯಾಲಯದಲ್ಲಿ ಜಾತಕ ಕೇಳಿದ್ದೇನೆ. ಅವರ ಫ್ಯೂಚರ್ ಜ್ಯೋತಿಷ್ಯ ಕೇಳಿದ್ದೇನೆ. ಯತ್ನಾಳ್ ಬಗ್ಗೆಯೂ ಜ್ಯೋತಿಷ್ಯ ಕೇಳಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ನಂತರ ಮಾತನಾಡಿದ ಅವರು, ಸಿ.ಟಿ‌. ರವಿ, ಆರ್.ಅಶೋಕ್ ಮತ್ತು ವಿಜಯೇಂದ್ರನ‌ ಸೈಡ್ ಲೈನ್ ಮಾಡಿದ್ರೆ ಮಾತ್ರ ನೀವು ಪಕ್ಷಕ್ಕೆ ಬರ್ತೀನಿ ಅಂತ ಯತ್ನಾಳ್ ಕಂಡೀಷನ್ ಹಾಕಿದ್ದಾರಂತೆ. ಇದು ಜಾತಕ ಸರ್, ಅವರು ಹೇಳಿಲ್ಲ ಎಂದರು

ಪ್ರಲ್ಹಾದ್ ಜೋಷಿ ಬಗ್ಗೆಯೂ ಕೇಳಿದ್ದೇನೆ. ಇವರಿಗೆಲ್ಲ ಚೆಕ್‌ಮೇಟ್ ಇಟ್ಟು ಬಿಜೆಪಿಯವರು ಸಿಎಂ ಅಭ್ಯರ್ಥಿ ಆಗಬೇಕಂತ ಜೋಶಿ‌ ಅಂಡರ್ ಕರೆಂಟ್‌ನಲ್ಲಿ‌ ಕೆಲಸ ಮಾಡ್ತಿದ್ದಾರೆ ಇದು ಜಾತಕ ಸರ್. ಇವರೆಲ್ಲ ಕಿತ್ತಾಡುತ್ತಿದ್ರೆ ಬಿ.ಎಲ್ ಸಂತೋಷ್ ಸೈಲೆಂಟಾಗಿ ದೆಹಲಿಯಲ್ಲಿ ಆಟ ಆಡ್ತಿದ್ದಾರೆ. ಇಷ್ಟೆಲ್ಲ ಜಾತಕ‌ ತಿಳಿದುಕೊಳ್ಳುವ ಬದಲು ಅಶೋಕಣ್ಣ ನಮ್ಮ ಪಕ್ಷದ ಬಗ್ಗೆ ಮಾತಾಡ್ತಾರೆ. ನಮ್ಮ ಹೈಕಮಾಂಡ್ ಇದೆ, ಸಿಎಂ, ಡಿಸಿಎಂ ಇದ್ದಾರೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಆರ್.ಅಶೋಕ್ ವಿರುದ್ಧ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರು ಆರೋಗ್ಯವಾಗಿದ್ದಾರೆ, ನಾನು ಮಾತನಾಡಿಸಿದೆ. ಆಕ್ಟಿವ್ ಆಗಿದ್ದಾರೆ, ತುಂಬಾ ಚೆನ್ನಾಗಿದ್ದಾರೆ ಎಂದರಲ್ಲದೇ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು. ಆರ್.ಅಶೋಕ್‌ ಔಟ್ ಗೋಯಿಂಗ್ ವಿಪಕ್ಷ ನಾಯಕ. ಸುನೀಲ್ ಕುಮಾರ್ ಇನ್ ಕಮ್ಮಿಂಗ್ ವಿಪಕ್ಷ ನಾಯಕ. ಪದ್ಮನಾಭನಗರ ಜ್ಯೋತಿಷ್ಯಾಲಯ ಸುಳ್ಳು ಹೇಳುತ್ತೆ.

ಹೀಗಾಗಿ ಬೇರೆ ಜ್ಯೋತಿಷ್ಯಾಲಯಕ್ಕೆ ಹೋಗಿದ್ದೆ. ಅಲ್ಲಿ ಆರ್.ಅಶೋಕ್ ಚೇರ್ ಅಕ್ಟೋಬರ್‌ನಲ್ಲಿ ಅಲ್ಲಾಡುತ್ತೆ. ಬಿಜೆಪಿಯಲ್ಲಿ ಅಕ್ಟೋಬರ್ ಕ್ರಾಂತಿ ಆಗುತ್ತೆ. ಆರ್.ಅಶೋಕ್‌ ಚೇರ್‌ಗೆ ಕಂಟಕ‌ ಇದೆ. ಸುನೀಲಣ್ಣ ಕಾಯ್ತಾ ಇದ್ದಾರೆ, ಯಾವಾಗ ಚೇರ್ ಬಿಟ್ಟು ಕೊಡ್ತಾರೆ ಅಂತ. ಬಿಜೆಪಿ ಮನೆ ಬಾಗಿಲು ಹೊಡೆದು ಹೋಗಿದೆ. ಬಿಜೆಪಿಯ ಮನೆ ಒಡೆದು ನೂರು ಬಾಗಿಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶವನ್ನು ವ್ಯಕ್ತಪಡಿಸಿದರು.