ಪ್ರದೀಪ್ ಈಶ್ವರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯ ನಿಲ್ಲಿಸುವಂತೆ ಸವಾಲು ಹಾಕಿದ್ದಾರೆ. ಚಲವಾದಿ ನಾರಾಯಣಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ನೀವುಗಳು ರಾಜ್ಯದ ಸಿಎಂ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ನಾನು ನಿಮ್ಮ ಬಗ್ಗೆ ಮಾತನಾಡಬಾರದಾ? ಕೋತಿಗಳನ್ನ ಕೋತಿ ಅಂದ್ರೆ ತಪ್ಪಾ ಎಂದು ಚಲವಾದಿ ನಾರಾಯಣ ಸ್ವಾಮಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಾಕಿಸ್ತಾನಕ್ಕೆ ಹೋಗಿ ಅಂತ ಇಲ್ಲಿ ಬಾಯಿ ಬಡೆದುಕೊಳ್ತಾರೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಿಲ್ಲಿಸುವುದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇವರಿಗೆ ಯೋಗ್ಯತೆ ಇದ್ರೆ ಭಾರತ-ಪಾಕಿಸ್ತಾನ ಪಂದ್ಯ ಕ್ಯಾನ್ಸಲ್ ಮಾಡೋಕೆ ಹೇಳಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಇವರದ್ದು ಒಳಗೊಂದು-ಹೊರಗೊಂದು ನೀತಿ
ಡಿಸೆಂಬರ್ 25ರಂದು ಪಾಕ್ ಪ್ರಧಾನಿ ಷರೀಫ್ ನಿವಾಸಕ್ಕೆ ನಮ್ಮ ಪ್ರಧಾನಿಗಳು ಹೋಗ್ತಿದ್ದಾರೆ. ಈ ಬಗ್ಗೆ ಮಾತನಾಡಿದ್ರೆ ಬಾಂಧವ್ಯ ವೃದ್ಧಿ ಎಂದು ಹೇಳುತ್ತಾರೆ. ಇವರದ್ದು ಒಳಗೊಂದು, ಹೊರಗೊಂದು ಸ್ಟ್ಯಾಂಡ್. ಪಾಕಿಸ್ತಾನ, ಪಾಕಿಸ್ತಾನ ಅಂತ ಬೈತಾರೆ. ಹಾಗಾದ್ರೆ ಯಾಕೆ ಈ ಪಂದ್ಯವನ್ನು ಆಡಬೇಕು ಎಂದು ಪ್ರಶ್ನೆ ಮಾಡಿದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ಒಪ್ಪಿದ್ರೆ ತಾನೇ ಇದೆಲ್ಲಾ ನಡೆಯಲು ಸಾಧ್ಯ. ಒಂದು ವೇಳೆ ನಮಗೆ ಪವರ್ ಇದ್ದಿದ್ರೆ ನಾವು ಖಂಡಿತವಾಗಿಯೂ ಈ ಪಂದ್ಯ ರದ್ದು ಮಾಡಲಾಗುತ್ತಿತ್ತು ಎಂದರು.
ಯತ್ನಾಳ್ ಅವರೇ ಈಗ ತಾಕತ್ತಿದ್ರೆ ಮ್ಯಾಚ್ ಕ್ಯಾನ್ಸಲ್ ಮಾಡಿಸಿ
ಪಹಲ್ಗಾಮ್ ಮತ್ತು ಪುಲ್ವಾಮಾ ದಾಳಿಯಲ್ಲಿ ಮೃತರ ಕುಟುಂಬದವರ ಬಗ್ಗೆ ಗೌರವ ಇದ್ರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಪಾಕಿಸ್ತಾನ ಜೊತೆಗಿನ ಪಂದ್ಯವನನ್ನು ರದ್ದುಗೊಳಿಸಲಿ ಎಂದು ಆಗ್ರಹಿಸಿದರು. ಐಸಿಸಿ ಅಧ್ಯಕ್ಷರಾಗಿರೋದು ಕೇಂದ್ರ ಸಚಿವ ಅಮಿತ್ ಶಾ ಮಗ ಅಲ್ಲವಾ? ಹಾಗಾಗಿ ಈ ಮ್ಯಾಚ್ ಕ್ಯಾನ್ಸಲ್ ಮಾಡಲ್ಲ. ನಮ್ಮ ರಾಜ್ಯ ಬಿಜೆಪಿ ನಾಯಕರಿಗೆ ಮಾನ ಮಾರ್ಯದೆ ಇಲ್ಲ. ಯತ್ನಾಳ್ ಅವರೇ ನಿನ್ನೆ ತುಮಕೂರು, ಮದ್ದೂರಲ್ಲಿ ಭರತನಾಟ್ಯ ಮಾಡುತ್ತಿದ್ದೀರಿ. ಈಗ ತಾಕತ್ತಿದ್ರೆ ಮ್ಯಾಚ್ ಕ್ಯಾನ್ಸಲ್ ಮಾಡಿಸಿ. ಇವರೆಲ್ಲಾ ಅಸಮರ್ಥ ನಾಯಕರು. ನಾವು ಇಂಡಿಯಾ- ಪಾಕಿಸ್ತಾನ ಮ್ಯಾಚ್ ನೋಡಲ್ಲ. ಅಮಿತ್ ಶಾ ಅವರ ಮಗ ಬಿಸಿಸಿಐ ಅಧ್ಯಕ್ಷರಿಗೆ ಒಂದು ಫೋನ್ ಮಾಡಿ ಈ ಮ್ಯಾಚ್ ನಿಲ್ಲಿಸಬಹುದು. ಇವರಿಗೆ ಹಣ ಮುಖ್ಯವಾಗಿರೋ ಕಾರಣ ಈ ಮ್ಯಾಚ್ ಕ್ಯಾನ್ಸಲ್ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗರೇ ಇದೇನಾ ನಿಮ್ಮ ದಲಿತ ಪ್ರೀತಿ?
ಇದೇ ವೇಳೆ ಚಲವಾದಿ ನಾರಾಯಣಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಜನರಿಗೆ ಒಳ್ಳೆಯದು ಮಾಡೋದರಲ್ಲಿ ನಾನು ಅಣ್ಣ ಅವರು ತಮ್ಮ. ದಲಿತರ ಬಗ್ಗೆ ನಾರಾಯಣ ಸ್ವಾಮಿ ಮಾತನಾಡ್ತಾರೆ. ಆದ್ರೆಎಐಸಿಸಿ ಅಧ್ಯಕ್ಷರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ. ನಮ್ಮ ಕ್ಷೇತ್ರದಲ್ಲಿ ದಲಿತ ಹುಡುಗ ಆತ್ಮ*ಹತ್ಯೆ ಮಾಡಿಕೊಂಡ. ಆ ಹುಡುಗ ನಿಮ್ಮ ಬಿಜೆಪಿ ಸಂಸದರ ಹೇಳಿ ಸಾವನ್ನಪ್ಪಿದ. ನೀವು ಅವರ ಕುಟುಂಬವನ್ನು ಮಾತನಾಡಿಸಲು ಬಂದ್ರಾ? ಇದೇನಾ ನಿಮ್ಮ ದಲಿತ ಪ್ರೀತಿ ಎಂದು ಶಾಸಕರು ಪ್ರಶ್ನಿಸಿದರು.
ಇದನ್ನೂ ಓದಿ: 'ನಾನೇ ಬಾಸ್' ಎಂದ ಡಿಕೆಶಿ, ರಾಜಕೀಯಕ್ಕೆ ಬರದಿದ್ರೆ ಏನಾಗುತ್ತಿದ್ದೆ ಎನ್ನುವ ಪ್ರಶ್ನೆಗೆ ಕೊಟ್ಟ ಉತ್ತರವೇನು?
ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುವೆ
ನನ್ನನ್ನು ನಿಮ್ಯಾನ್ಸ್ ಗೆ ಸೇರಿಸುತ್ತೇನೆ ಎಂದು ಹೇಳಿದ್ದಾರೆ. ಮೊದಲು ನೀವು ಟ್ರೀಟ್ಮೆಂಟ್ ತೆಗೆದುಕೊಂಡು ಬನ್ನಿ. ನಿಮ್ಮ ಜೊತೆ ಚಿಕಿತ್ಸೆ ಪಡೆದುಕೊಳ್ಳಲು ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಅವರನ್ನು ಕರೆದುಕೊಂಡು ಹೋಗಿ. ನೀವು ಸರಿಯಾಗಿ ಬಂದ್ರೆ ನಾನು ಚಿಕಿತ್ಸೆ ಪಡೆಯುತ್ತೇನೆ. ಹೆಚ್ಚಿನ ಚಿಕಿತ್ಸೆಗೆ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸುತ್ತೇನೆ. ನೀವುಗಳು ರಾಜ್ಯದ ಸಿಎಂ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು. ನಾನು ನಿಮ್ಮ ಬಗ್ಗೆ ಮಾತನಾಡಬಾರದಾ? ಕೋತಿಗಳನ್ನ ಕೋತಿ ಅಂದ್ರೆ ತಪ್ಪಾ ಎಂದು ಚಲವಾದಿ ನಾರಾಯಣ ಸ್ವಾಮಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.
ಹಿಂದೂ ಧರ್ಮದ ಬಗ್ಗೆ ಎಲ್ಲಾ ನಾಯಕರು ಮಾತನಾಡುತ್ತಾರೆ. ಬಡ ಬ್ರಾಹ್ಮಣ ಅರ್ಚಕರ ಮಕ್ಕಳಿಗೆ ಏನಾದರೂ ಸಹಾಯ ಮಾಡಿದ್ದಾರಾ? ಯತ್ನಾಳ್ ಅವರೇ ನಿಮ್ಮ ಹತ್ತಿರ ನೂರಾರು ಕೋಟಿ ಆಸ್ತಿ ಇದೆ. ಅರ್ಚಕರ ಮಕ್ಕಳ ಭವಿಷ್ಯಕ್ಕೆ 25% ಆಸ್ತಿ ಬರೆದುಕೊಟ್ಟರೆ ನಾನು ಕೊಡುತ್ತೇನೆ. ನಿಮ್ಮ ಹಿಂದೂ ಧರ್ಮದ ಪ್ರೀತಿ ಬಗ್ಗೆ ನಾನು ಎಲ್ಲೂ ಮಾತನಾಡಲ್ಲ ಎಂದು ಮತ್ತೊಂದು ಸವಾಲು ಹಾಕಿದರು.
ಇದನ್ನೂ ಓದಿ: ಅಶೋಕಣ್ಣ ತೋರಿಸಬೇಡಿ, ನೋಡುವ ಆಸಕ್ತಿ ಇಲ್ಲ: ವಿಧಾನಪರಿಷತ್ತಿನ 2 ಸುಂದರ ಕೋತಿ ಯಾಕೆ ಸುಮ್ನಿವೆ? ಪ್ರದೀಪ್ ಈಶ್ವರ!
