ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅನ್ನು ತೀರ್ಮಾನ ಮಾಡೋದು ಯಾರು.? ಅದರ ಬೋರ್ಡ್ ಅಧ್ಯಕ್ಷರ ಅಮಿತ್ ಶಾ ಪುತ್ರ ಇದ್ದಾರೆ. ಬಾಯಲ್ಲಿ ಮಾತ್ರ ಪಾಕಿಸ್ತಾನ ಅಂತಾರೆ, ಅವರ ಜೊತೆಗೆ ಮ್ಯಾಚ್ ಆಡಿಸ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಸೆ.14): ಇಡೀ ಭಾರತದ ಜನರು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ತಿರಸ್ಕರಿಸಿದ್ದಾರೆ. ನಾವು ಮ್ಯಾಚ್ ನೋಡಲ್ಲ ಅಂತ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅನ್ನು ತೀರ್ಮಾನ ಮಾಡೋದು ಯಾರು.? ಅದರ ಬೋರ್ಡ್ ಅಧ್ಯಕ್ಷರ ಅಮಿತ್ ಶಾ ಪುತ್ರ ಇದ್ದಾರೆ. ಬಾಯಲ್ಲಿ ಮಾತ್ರ ಪಾಕಿಸ್ತಾನ ಅಂತಾರೆ, ಅವರ ಜೊತೆಗೆ ಮ್ಯಾಚ್ ಆಡಿಸ್ತಿದ್ದಾರೆ. ಮಧ್ಯಾಹ್ನ ಸಭೆ ಮಾಡ್ತಿವಿ ಎಂದರು. ಆದರೂ ಮ್ಯಾಚ್ ಆಡಿಸೋದು ಅವರಿಗೆ ಬಿಟ್ಟ ವಿಚಾರ. ಕೇವಲ ಮತಕ್ಕಾಗಿಯೇ ಅವರು ಮಾತಾಡ್ತಾರೆ. ಅವರು ಪಾಕಿಸ್ತಾನದ ಪರವಾಗಿಯೇ ಇದ್ದಾರೆ ಎಂದರು.
ಅವರು ಯಾವ ಹಿಂದೂಗಳಿಗೆ ಬೆಲೆ ಕೊಟ್ಟಿಲ್ಲ. ವೋಟಿಗೆ ಏನು ಬೇಕು ಅದನ್ನು ಮಾಡುತ್ತಾರೆ ಅಷ್ಟೇ. ಜಾತಿಗಣತಿಯಲ್ಲಿ ಒಕ್ಕಲಿಗ ಕ್ರಿಶ್ಚಿಯನ್ , ದಲಿತ ಕ್ರಿಶ್ಚಿಯನ್ ಎಂದು ನಮೂದಿಸಿರುವ ವಿಚಾರವಾಗಿ, ಕ್ಯಾಬಿನೆಟ್ ನಲ್ಲಿ ಏನು ಚರ್ಚೆಯಾಗಿಲ್ಲ. ಸಿಎಂ ಹೇಳಿದಾಗ ನಾನು ನೋಡಿದ್ದು. ಯಾರು ಬೇಕಿದ್ರು ಮತಾಂತರ ಆಗಲು ಸ್ವಾತಂತ್ರರಿದ್ದಾರೆ, ಅದು ಅವರ ತೀರ್ಮಾನ ಅಂತ ಸಿಎಂ ಹೇಳಿದ್ದಾರೆ. ನಾವು ಬದಲಾವಣೆ ಆಗೋದು, ಘೋಷಣೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ಜಾತಿಗಣತಿಯಲ್ಲಿ ಏನು ನಮೂದಿಸುತ್ತಾರೆ ಅದು ಕನ್ಸಿಡರ್ ಆಗುತ್ತೆ. ಮತಾಂತರ ಆಗಬಾರದು ಅನ್ನೋದು ಅಭಿಪ್ರಾಯ.
ಸರ್ಕಾರ ಕರೆಕ್ಟಾಗಿ ಮಾಡುತ್ತಿದೆ
ಬಟ್ ನಾನು ಆಗುತ್ತೇನೆ ಅಂದ್ರೆ ಅದಕ್ಕೆ ಕಾನೂನು ತರಬೇಕು. ಯಾರು ಹುಟ್ಟುತ್ತಲೇ ಯಾವ ಮತದಲ್ಲಿ ಹುಟ್ಟಿರುತ್ತಾರೋ ಅವರು ಮತಾಂತರ ಆಗಬಾರದು ಅನ್ನೋದಕ್ಕೆ ಕಾನೂನು ತರಲು ಲೀಗಲಿ ಟೆಕ್ನಿಕಲಿ ಅವಕಾಶ ಇದೆಯಾ ನೋಡಬೇಕು. ಧರ್ಮಸ್ಥಳ SIT ತನಿಖೆ ಮಂದಗತಿಯಲ್ಲಿ ಸಾಗುತ್ತಿರುವ ವಿಚಾರವಾಗಿ, ಸರ್ಕಾರ ಕರೆಕ್ಟಾಗಿ ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಧರ್ಮಸ್ಥಳದ ವಿಚಾರವಾಗಿ ಸ್ಪಷ್ಟವಾದ ನಿಲುವು ಬರುತ್ತೆ. ಅಲ್ಲಿ ಇಲ್ಲಿ ಮಾತನಾಡೋದು ತಪ್ಪಿತು, ನನಗೆ ನೆಮ್ಮದಿ ಆಯ್ತು ಅಂತ. ಧರ್ಮಸ್ಥಳದ ವಿರೇಂದ್ರ ಹೆಗಡೆಯವರೇ ತನಿಖೆಯನ್ನ ಸ್ವಾಗತ ಮಾಡಿದ್ದಾರೆ. ಕೋರ್ಟ್ ತನಿಖೆ ಮಾಡಲು ಹೇಳಿತ್ತು.
ಆ ಆದೇಶದ ರೆಫರೆನ್ಸ್ ಇಟ್ಟುಕೊಂಡು ತನಿಖೆ ಮಾಡುತ್ತಿದ್ದಾರೆ ನಾವೆಲ್ಲಾ ಧರ್ಮಸ್ಥಳದ ಶಿವನ ಭಕ್ತರೆ. ಅಲ್ಲಿ ಯಾವುದೇ ಅಗೌರವ ಅಥವಾ ಇನ್ಯಾವುದೇ ಉದ್ದೇಶದಿಂದ ತನಿಖೆ ಮಾಡುತ್ತಿಲ್ಲ. ತನಿಖೆಯಿಂದ ಆ ಭಾಗದ ಜನರಿಗೆ ಒಳ್ಳೆಯದಾಗುತ್ತೆ. ಬಿಜೆಪಿ ಅವರು ಅಷ್ಟೇ ತೀಟೆ ಮಾಡ್ತಾರೆ. ತಪ್ಪು ಮಾಡಿದವರನ್ನ ಆರೆಸ್ಟ್ ಮಾಡದ ವಿಚಾರವಾಗಿ, ಅದನ್ನು ಗೃಹ ಸಚಿವರು ಹಾಗೂ ಸಿಎಂ ನೋಡಿಕೊಳ್ತಾರೆ. ನಾನು ತನಿಖೆ ಯಾವ ಮಟ್ಟದಲ್ಲಿದೆ ಅನ್ನೋದ್ರ ಬಗ್ಗೆ ನಾನು ಹೇಳಲು ಹೋಗಲ್ಲ. ಮದ್ದೂರಲ್ಲಿ ಬಿಜೆಪಿ ನಾಯಕರ ಭಾಷಣ ವಿಚಾರವಾಗಿ, ಎಫ್ಐಆರ್ ಹಾಕಿದ್ದಾರೆ ಅಲ್ವ. ಅವರು ಪಾಕಿಸ್ತಾನದ ಪರವೇ. ವಿರುದ್ದ ಅನ್ನೋದಕ್ಕಿಂತ ಹೆಚ್ಚಿಗೆ ವೋಟಿಗೊಸ್ಕರ ಏನು ಬೇಕಿದ್ರು ಮಾಡ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
