ಬಿಜೆಪಿಗೆ ಸೆಡ್ಡು ಹೊಡೆಯಬೇಕು ಎಂದುಕೊಂಡಿಲ್ಲ. ನಂಬಿದವರಿಂದ ಏನು ಇಲ್ಲ ಎಂಬುದು ಹೈಕಮಾಂಡ್ ಗೊತ್ತಾಗಿದೆ. ಯತ್ನಾಳ್‌ಗೆ ಹಿಂದೂ ಶಕ್ತಿ ಇದೆ ಎಂದು ಗೊತ್ತಾಗಿದೆ. ಬಿಜೆಪಿ ಹೈಕಮಾಂಡ್ ತಪ್ಪು ನಿರ್ಣಯ ಮಾಡಿದೆ ಎಂದರು ಶಾಸಕ ಯತ್ನಾಳ್.

ಮಂಡ್ಯ (ಸೆ.12): ಮೇಲುಕೋಟೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿ ಚಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ಹಿಂದೂ ಧಾರ್ಮಿಕ ದತ್ತಿ ಸಂಗ್ರಹ ಮಾಡುವ ಹಣ ಅದೇ ದೇವಸ್ಥಾನಗಳ ಅಭಿವೃದ್ದಿಗೆ ಬಳಕೆಯಾಗಬೇಕು. ಈ ವಿಷಯದ ಬಗ್ಗೆ ವಿಧಾನಸೌಧದಲ್ಲೂ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಹೇಗೆ ನಮ್ಮ ತೆರಿಗೆ ಹಣ ನಮಗೆ ಬೇಕು ಅಂತಾರೆ. ಆದ್ರೆ ದುರ್ದೈವಾ ಹಿಂದೂಗಳ ಹಣ ಮಸೀದಿ, ಚರ್ಚ್‌ಗಳ ಅಭಿವೃದ್ದಿಗೆ ಹೋಗ್ತಿದೆ ಎಂದರು.

ಮುಂದೆ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇಗುಲ ಜೀರ್ಣೋದ್ಧಾರ ಸಂಕಲ್ಪವನ್ನ ಮಾಡಿದ್ದೇನೆ. ದೇವರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದೇನೆ. ಜನರ ಅಪೇಕ್ಷೆ 2028 ಕ್ಕೆ ಈಡೇರಲಿ. ನಿನ್ನೆ ಮದ್ದೂರಿನಲ್ಲಿ ಇಷ್ಟೊಂದು ಜನರು ಸೇರ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸನಾತನ ಧರ್ಮದ ವಿಚಾರ ಬಂದಾಗ ಜಾತಿ, ಜನಾಂಗ ನೋಡಲ್ಲ. ಪೊಲೀಸರೇ ಇಷ್ಟೊಂದು ಜನರು ಬರ್ತಾರೆ ಎಂದು ನಿರೀಕ್ಷಿಸಲಿಲ್ಲ. ಚಾಮರಾಜನಗರದಿಂದ ಬೀದರ್ ವರೆಗೆ, ಕೋಲಾರದಿಂದ ಕೊಡಗುವರೆಗೆ ಜನರು ಒಪ್ಪಿಕೊಂಡಿದ್ದಾರೆ. ಜನರು ಹಿಂದೂ ಧರ್ಮ ರಕ್ಷಣೆ, ಭ್ರಷ್ಟಚಾರ ರಹಿತ ಸರ್ಕಾರ, ಕುಟುಂಬ ರಹಿತ ರಾಜಕಾರಣ ಸಂಕೇತ ಕೊಟ್ಟಿದ್ದಾರೆ.

ಹೊಸ ಪಾರ್ಟಿ ಕಟ್ಟುವ ವಿಚಾರವಾಗಿ ಮಾತನಾಡಿದ ಯತ್ನಾಳ್, ರಾಜಕೀಯ ಪಕ್ಷವನ್ನ ಕಟ್ಟಬೇಕು, ಬಿಜೆಪಿಗೆ ಸೆಡ್ಡು ಹೊಡೆಯಬೇಕು ಎಂದುಕೊಂಡಿಲ್ಲ. ನಂಬಿದವರಿಂದ ಏನು ಇಲ್ಲ ಎಂಬುದು ಹೈಕಮಾಂಡ್ ಗೊತ್ತಾಗಿದೆ. ಯತ್ನಾಳ್‌ಗೆ ಹಿಂದೂ ಶಕ್ತಿ ಇದೆ ಎಂದು ಗೊತ್ತಾಗಿದೆ. ಬಿಜೆಪಿ ಹೈಕಮಾಂಡ್ ತಪ್ಪು ನಿರ್ಣಯ ಮಾಡಿದೆ. ಆ ತಪ್ಪು ತಿದ್ದುಕೊಂಡು 2028 ಕ್ಕೆ ನನಗೆ ರಾಜ್ಯ ಜವಾಬ್ದಾರಿ ಕೊಡುವ ವಿಶ್ವಾಸವಿದೆ ಎಂದು ಶಾಸಕ ಯತ್ನಾಳ್ ಹೇಳಿದರು.

ಕರ್ನಾಟಕ ಹಿಂದೂ ಪಾರ್ಟಿ ಕಟ್ಟುವೆ

ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ತೆಗೆದುಕೊಳ್ಳದಿದ್ದರೆ ಕರ್ನಾಟಕ ಹಿಂದೂ ಪಾರ್ಟಿ ಹೆಸರಿನಲ್ಲಿ ಹೊಸ ಪಕ್ಷ ಕಟ್ಟುವೆ. ನಮ್ಮ ಪಕ್ಷದ ಗುರುತು ಜೆಸಿಬಿ. ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ ಎಂದು ಗುಡುಗಿದರು. ಕರ್ನಾಟಕ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ಹಿಂದೂಗಳ ಪರ ಗಟ್ಟಿಯಾಗಿ ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ನಾವೆಲ್ಲಾ ಹಿಂದೂಗಳ ಪರವಾಗಿ ಗಟ್ಟಿ ಮಾತಾನಾಡುತ್ತೇವೆ. ನಾವು ಪ್ರತಾಪ್ ಒಂದಾಗಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಹಿಂದೂಗಳ ಪರವಾಗಿ ಹೋರಾಡುವವನು ಮುಂದಿನ ಕರ್ನಾಟಕದ ಸಿಎಂ. ಮುಂದಿನ ಸಿಎಂ ಜೆಸಿಬಿ ಸಿಎಂ. ನಮ್ಮ ಸರ್ಕಾರ ಅಧಿಕಾರಕ್ಕೆ ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನೆಲ್ಲಾ ಕೆಡವಲಾಗುವುದು. ಹಿಂದೂಗಳೆಲ್ಲಾ ಜಾತಿ ರಾಜಕಾರಣ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಎಂದರು. ಮೃತರ ಮೆರವಣಿಗೆ ವೇಳೆ ತಮಟೆ ಬಾರಿಸಲು ಮಸೀದಿ ಮುಂದೆ ಬಿಡೋಲ್ಲ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ. 2028ಕ್ಕೆ ಎಲ್ಲರೂ ವಿಧಾನಸೌಧದ ಮುಂದೆ ಭಗವಧ್ವಜ ತರ್ತೀರಾ? ನನ್ನನ್ನು ಕರ್ನಾಟಕ ಸಿಎಂ ಮಾಡ್ರೀರಾ ಎಂದು ನೆರೆದಿದ್ದ ಸಾವಿರಾರು ಹಿಂದೂ ಕಾರ್ಯಕರ್ತರನ್ನು ಪ್ರಶ್ನಿಸಿದರು.