ಬಿಜೆಪಿಯನ್ನು ಮೆಚ್ಚಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರು ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳಲಾಗುತ್ತಿದೆ.
ಬೆಂಗಳೂರು (ಸೆ.18): ರಾಜ್ಯ ಸರ್ಕಾರವು ಜಾತಿ ಗಣತಿ ಆರಂಭಿಸಲು ಮುಂದಾಗುತ್ತಿರುವಂತೆಯೇ ಪ್ರತ್ಯೇಕ ಲಿಂಗಾಯತ ಧರ್ಮದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಗಣತಿ ವೇಳೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಯಾವುದನ್ನು ಉಲ್ಲೇಖಿಸಬೇಕು ಎಂಬ ಬಗ್ಗೆ ಬಿಜೆಪಿ, ಅಖಿಲ ಭಾರತ ವೀರಶೈವ ಮಹಾಸಭಾ, ವಿರಕ್ತ ಮಠಗಳು ವೈರುಧ್ಯದ ಕರೆ ನೀಡುತ್ತಿರುವುದು ಗೊಂದಲಮಯ ವಾತಾವರಣಕ್ಕೆ ಕಾರಣವಾಗಿದೆ.
ಇದರ ನಡುವೆಯೇ, ವೀರಶೈವ-ಲಿಂಗಾಯತರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವಂತೆ ಕರೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದಿರುವ ಸಚಿವ ಎಂ.ಬಿ. ಪಾಟೀಲ್, ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವೀರಶೈವ-ಲಿಂಗಾಯತ ಸಮುದಾಯದ ವಿಚಾರದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಮೂಲಕ ರಾಜಕೀಯ ಕೆಸರೆರೆಚಾಟ ಆರಂಭಗೊಂಡಿದೆ.
ಜಾತಿ ಆಧಾರಿತ ಜನಗಣತಿ ಕುರಿತಂತೆ ವೀರಶೈವ-ಲಿಂಗಾಯತ ಸಮುದಾಯದಲ್ಲಿನ ಗೊಂದಲಗಳ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಧರ್ಮದ ಕಾಲಂನಲ್ಲಿ ಯಾವುದನ್ನು ಉಲ್ಲೇಖಿಸಬೇಕು ಎಂಬ ಬಗ್ಗೆ ಬಿಜೆಪಿ, ಅಖಿಲ ಭಾರತ ವೀರಶೈವ ಮಹಾಸಭಾ, ವಿರಕ್ತ ಮಠಗಳದ್ದು ಒಂದೊಂದು ಅಭಿಪ್ರಾಯವಿದೆ. ಬಿಜೆಪಿಯ ಲಿಂಗಾಯತ ನಾಯಕರು ಹಿಂದು ಎಂದರೆ, ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಎಂದು ಹಾಗೂ ವಿರಕ್ತ ಮಠಗಳು ಲಿಂಗಾಯತ ಎಂದು ಬರೆಯಬೇಕು ಎಂದು ಸಮಾಜದವರಿಗೆ ಹೇಳುತ್ತಿವೆ. ಈ ಎಲ್ಲದರ ಬಗ್ಗೆ ಚರ್ಚೆಗಳಾಗಬೇಕು ಎಂದು ಹೇಳಿದರು.
ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ
ಬಿಜೆಪಿಯನ್ನು ಮೆಚ್ಚಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರು ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳಲಾಗುತ್ತಿದೆ. ಇನ್ನು, ಕೆಲದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಿರ್ಣಯ ತೆಗೆದುಕೊಂಡಾಗ ಯಡಿಯೂರಪ್ಪ, ವಿಜಯೇಂದ್ರ ವೇದಿಕೆಯಲ್ಲೇ ಕುಳಿತಿದ್ದರು. ಆಗ ಅದನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರು. ಈಗ ಹಿಂದೂ ಎಂದು ಬರೆಸುವಂತೆ ಕರೆ ನೀಡುವ ಮೂಲಕ ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯನ್ನು ಮೆಚ್ಚಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರು ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಲಾಗುತ್ತಿದೆ. ಇನ್ನು, ಕೆಲದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಿರ್ಣಯ ತೆಗೆದುಕೊಂಡಾಗ ಯಡಿಯೂರಪ್ಪ, ವಿಜಯೇಂದ್ರ ವೇದಿಕೆಯಲ್ಲೇ ಕುಳಿತಿದ್ದರು. ಆಗ ಅದನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರು. ಈಗ ಹಿಂದೂ ಎಂದು ಬರೆಸುವಂತೆ ಕರೆ ನೀಡುವ ಮೂಲಕ ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
