ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಟಿಯವರು ಅಕ್ಟೋಬರ್‌ನಲ್ಲಿ ವರದಿ ಕೊಡುವುದಾಗಿ ಹೇಳಿದ್ದರು.
ಬೆಂಗಳೂರು (ಅ.28): ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಟಿಯವರು ಅಕ್ಟೋಬರ್‌ನಲ್ಲಿ ವರದಿ ಕೊಡುವುದಾಗಿ ಹೇಳಿದ್ದರು. ಈ ತಿಂಗಳ 31ರೊಳಗೆ ಅಥವಾ ಒಂದೆರಡು ದಿನ ವಿಳಂಬವಾಗಿ ವರದಿ ಸಲ್ಲಿಸಬಹುದು. ಪ್ರಕರಣದ ಅಂತಿಮ ವರದಿ ಕೊಡುವಂತೆ ಹೇಳಿದ್ದೇವೆ. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ವರದಿ ವಿಶ್ಲೇಷಣೆ ಮಾಡಿ ವರದಿ ಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಎಸ್‌ಐಟಿ ವಿಚಾರಣೆಗೆ ಸುಜಾತಾ ಹಾಜರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ತಿಮರೋಡಿ ಟೀಮ್ ಸೋಮವಾರ ಎಸ್ಐಟಿ ವಿಚಾರಣೆಗೆ ಹಾಜರಾಗಿಲ್ಲ. ಆದರೆ, ಸುಜಾತಾ ಭಟ್ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ತಿಮರೋಡಿ, ಮಟ್ಟಣ್ಣನವರ್, ಜಯಂತ್, ವಿಠಲ ಗೌಡ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿತ್ತು. ಅವರು ಆಗಮಿಸಿದರೆ ಬಂಧನದ ಸಾಧ್ಯತೆ ಇತ್ತು.
ಆದರೆ, ನಾಲ್ವರೂ ಸೋಮವಾರ ವಿಚಾರಣೆಗೆ ಹಾಜರಾಗಲೇ ಇಲ್ಲ. ಈ ನಡುವೆ, ಎಸ್ಐಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರ ತಂಡ ಆಗಮಿಸಿದ್ದು, ತಿಮರೋಡಿಗೆ ವಿಚಾರಣೆಗೆ ಹಾಜರಾಗಲು ಇನ್ನೂ ಏಳು ದಿನಗಳ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಮಧ್ಯೆ, ಸುಜಾತಾ ಭಟ್ ಮಾತ್ರ ಸೋಮವಾರ ಬೆಳಗ್ಗೆಯೇ ಎಸ್‌ಐಟಿ ಕಚೇರಿಗೆ ಆಗಮಿಸಿದರು. ಎಸ್ಪಿ ಸೈಮನ್ ಅವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶೋಷಿತ ಸಮಾಜದ ನಾಯಕರು ರಾಜ್ಯವನ್ನು ಆಳಲಿ
ಶೋಷಿತ ಸಮುದಾಯಗಳ ನಾಯಕರು ರಾಜ್ಯದ ಚುಕ್ಕಾಣಿ ಹಿಡಿದಲ್ಲಿ ಆ ಸಮುದಾಯಗಳಿಗೆ ಆತ್ಮಸ್ಥೈರ್ಯ ಬರಲಿದ್ದು, ಅಧಿಕಾರ ವಿಕೇಂದ್ರಿಕರಣವು ಸಹ ಪ್ರಜಾಪ್ರಭುತ್ವದ ನಿಯಮವಾಗಿದೆ ಎಂದು ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಸುಮಾರು 4 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ನೆರವೇರಿಸಿ ಚಟ್ಟೆನಹಳ್ಳಿಯಲ್ಲಿ ನಡೆದ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಡಿಯಲ್ಲಿ ಪಂಚಾಯಿತಿಗಳ ವ್ಯವಸ್ಥೆ ಬಂದ ಮೇಲೆ ಶೋಷಿತ ಸಮಾಜಗಳು ಅಧಿಕಾರವನ್ನು ಮಾಡುವಂತಾಯಿತು.
ಶೊಷಿತ ಸಮಾಜದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆ ಸಮಾಜಕ್ಕೆ ಎಲ್ಲೋ ಒಂದು ಕಡೆ ನಾವು ಸಹ ಅಧಿಕಾರವನ್ನು ಮಾಡಬಹುದು ಎನ್ನುವ ಆತ್ಮಸ್ಥೈರ್ಯ ಬಂದಿತು, ರಾಜ್ಯದಲ್ಲಿ ಅಧಿಕಾರವನ್ನು ಹಲವು ದಶಕಗಳಿಂದ ಕೆಲವೇ ಜನಾಂಗಳು ಆಳುತ್ತಿದ್ದವು ಈಗ ಶೋಷಿತ ಸಮಾಜಗಳು ಅಧಿಕಾರಗಳನ್ನು ಪಡೆದುಕೊಂಡು ಉತ್ತಮವಾದ ಆಡಳಿತ ನೀಡಿದರೆ ಆ ಸಮುದಾಯಗಳ ಜನರಿಗೆ ನಾವು ಸಹ ಆಡಳಿತ ಮಾಡುವ ನಂಬಿಕೆ ಬರುತ್ತದೆ ಎಂದು ತಿಳಿಸಿದರು.ಇತಿಹಾಸದಿಂದ ಅಂತಸ್ತು, ಆಸ್ತಿ, ಅಧಿಕಾರ, ಶಿಕ್ಷಣ ಕೆಲವೇ ಸಮುದಾಯಗಳು ಅನುಭವಿಸುತ್ತಾ ಬರುತ್ತಿವೆ. ಅದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ಇದು ಬದಲಾವಣೆ ಕಾಣುತ್ತಿದೆ, ಈ ದೇಶದಲ್ಲಿ ಶೋಷಿತ ಸಮಾಜಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ ಎಂದರು.
