ಜನಪ್ರಿಯ ನಟಿಯೊಬ್ಬರು ತಮ್ಮ ವೃತ್ತಿಜೀವನದುದ್ದಕ್ಕೂ ಟಿವಿ ಸೆಟ್‌ಗಳಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾಗಿ ಕೆಲವು ಶಾಕಿಂಗ್‌ ಹೇಳಿಕೆಗಳನ್ನು ನೀಡಿದ್ದಾರೆ.

2023ರ ಬಿಬಿಸಿ ಸಾಕ್ಷ್ಯಚಿತ್ರ 'ಎಮಿಲಿ ಅಟಾಕ್: ಆಸ್ಕಿಂಗ್ ಫಾರ್ ಇಟ್?'ನಲ್ಲಿ ಪ್ರಮುಖ ಪಾತ್ರ ವಹಿಸಿರುವ 35 ವರ್ಷದ ನಟಿ ಎಮಿಲಿ ಅಟಾಕ್, ರೇಡಿಯೋ ಟೈಮ್ಸ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ "ನನ್ನ ವೃತ್ತಿಜೀವನದುದ್ದಕ್ಕೂ, ಅದು ಸೆಟ್‌ನಲ್ಲಿರಲಿ ಅಥವಾ ರ‍್ಯಾಪ್ ಪಾರ್ಟಿಯಲ್ಲಿರಲಿ, ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಆದರೆ ಮೀ ಟೂ ಚಳುವಳಿಯ ನಂತರ ಸೆಟ್‌ನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಅಷ್ಟಕ್ಕೂ ಇದು ಎಷ್ಟು ಕಾಲ ಮುಂದುವರಿಯುತ್ತದೆ, ಎಷ್ಟು ಜನರು ಇದಕ್ಕೆ ಬಲಿಯಾಗಬೇಕು?" ಎಂದು ಪ್ರಶ್ನಿಸಿದ್ದಾರೆ ಎಮಿಲಿ.

ನಾವು ಬಹಳಷ್ಟು ಸೆ*ಕ್ಸ್ ದೃಶ್ಯಗಳನ್ನು ಮಾಡ್ಬೇಕು!
ಫೀಮೇಲ್ ಫಸ್ಟ್ ಯುಕೆ ಪ್ರಕಾರ, ಡೇಮ್ ಜಿಲ್ಲಿ ಕೂಪರ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಧಾರಾವಾಹಿಯಲ್ಲಿ ಇಂಟಿಮಸಿ ಸೀನ್ ಚಿತ್ರಿಸಿದ ರೀತಿಗೆ 'ರೈವಲ್ಸ್‌'ನ ಪಾತ್ರವರ್ಗ ಮತ್ತು ಸಿಬ್ಬಂದಿಯ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಎಮಿಲಿ ಬಹಿರಂಗಪಡಿಸಿದ್ದಾರೆ. ಕಳೆದ ವರ್ಷ ಪ್ರಸಾರವಾದ ಈ ಧಾರಾವಾಹಿ ಉತ್ತಮ ವಿಮರ್ಶೆಗಳನ್ನು ಪಡೆಯಿತು.

"ನನ್ನ ಜೀವನದುದ್ದಕ್ಕೂ ನಾನು ಎಂದಿಗೂ ಸುರಕ್ಷಿತವಾಗಿರಲಿಲ್ಲವಾದ್ದರಿಂದ 'ರೈವಲ್ಸ್‌' ಗ್ಯಾಂಗ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾವೆಲ್ಲರೂ ಪರಸ್ಪರ ಗೌರವದಿಂದ ವರ್ತಿಸುತ್ತೇವೆ. ನಾವು ಬಹಳಷ್ಟು ಸೆ*ಕ್ಸ್ ದೃಶ್ಯಗಳನ್ನು ಮಾಡಬೇಕಾಗಿದೆ ಮತ್ತು ನಾವು ತುಂಬಾ ಜಾಗರೂಕರಾಗಿರುತ್ತೇವೆ. ಇದು ನಿಜವಾಗಿಯೂ ಸಕಾರಾತ್ಮಕ ವಿಷಯ" ಎಂದು ಎಮಿಲಿ ಹೇಳಿದ್ದಾರೆ.

ಹೊಸ ಧಾರಾವಾಹಿಯಲ್ಲಿ ಎಮಿಲಿ
ಸದ್ಯ ದಿ ರೂಮರ್ ನಲ್ಲಿ ಎಮಿಲಿ ಅಟಾಕ್ ನಟಿಸಿದ್ದಾರೆ. ಇದು ಒಂದು ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿರುವ ಮಕ್ಕಳ ಕೊಲೆಗಾರನ ಮೇಲೆ ಕೇಂದ್ರೀಕೃತವಾಗಿದೆ. ಇದರಲ್ಲಿ ತಾಯಿಯ ಪಾತ್ರವು ತನಗೆ ತುಂಬಾ ವೈಯಕ್ತಿಕ ಅನುಭವವಾಗಿತ್ತು ಎಂದು ಅವರು ಬಹಿರಂಗಪಡಿಸಿದರು. ಏಕೆಂದರೆ ಅವರು ಇತ್ತೀಚೆಗೆ ತಮ್ಮ 14 ತಿಂಗಳ ಮಗ ಬಾರ್ನಿಗೆ ಜನ್ಮ ನೀಡಿದ್ದರು.

"ನಾನು ಚಿತ್ರೀಕರಣಕ್ಕೆ 10 ವಾರಗಳ ಮೊದಲು ಹೆರಿಗೆಯಾಗಿದ್ದೆ, ಆದ್ದರಿಂದ ನಾನು ದಣಿದಿದ್ದೆ, ಭಾವನಾತ್ಮಕನಾಗಿದ್ದೆ ಮತ್ತು ಸಿಸೇರಿಯನ್ ನೋವಿನಿಂದ ಬಳಲುತ್ತಿದ್ದೆ, ಆದರೆ ಮೂಲತಃ ಅದು ನನ್ನ ಜೀವನಕ್ಕೆ ಮರಳಿದಂತಿತ್ತು. ಮೊದಲಿಗೆ, ನಾನು 'ತಾಯಿಯ ಪಾತ್ರವನ್ನು ಹೇಗೆ ನಿರ್ವಹಿಸುವುದು? ನಾನು ಈ ಮಗುವನ್ನು ಪ್ರೀತಿಸುತ್ತೇನೆ ಎಂದು ಹೇಗೆ ತೋರಿಸುವುದು?' ಎಂದು ಭಾವಿಸಿದೆ. 'ದಿ ರೂಮರ್' ನಲ್ಲಿ, 'ನನ್ನ ಆನ್‌ ಸ್ಕೀನ್ ಮಗ ಲಿಯಾಮ್ ತುಂಬಾ ಮುದ್ದಾಗಿದ್ದನು.

ಅವನನ್ನು ಶಾಲೆಗೆ ಕಳುಹಿಸುವುದು, ಅವನ ಬ್ಯಾಗ್ ಹಾಕುವುದು ಮತ್ತು ಅವನ ಕೋಟ್ ಸರಿಪಡಿಸುವುದು ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಸಹ ನಾನು ಸಂಪೂರ್ಣ ಹೃದಯದಿಂದ ಮಾಡಿದೆ. ಏಕೆಂದರೆ ಈಗ ನನಗೆ ನನ್ನ ಸ್ವಂತ ಮಗನಿದ್ದಾನೆ, ಎಲ್ಲವೂ ನಿಜವಾಗಿಯೂ ಮುಖ್ಯವಾಗಿದೆ" ಎಂದು ಎಮಿಲಿ ತಿಳಿಸಿದ್ದಾರೆ.

ಆತ್ಮ*ಹ*ತ್ಯೆಗೆ ಯತ್ನಿಸಿದ್ದಾಗಿಯೂ ರಿವೀಲ್ ಮಾಡಿದ ಎಮಿಲಿ
ನಟಿ ಎಮಿಲಿ ಅಟಾಕ್ ಇತ್ತೀಚೆಗೆ 15 ನೇ ವಯಸ್ಸಿನಲ್ಲಿ ಆತ್ಮ*ಹ*ತ್ಯೆಗೆ ಯತ್ನಿಸಿದ್ದಾಗಿಯೂ ರಿವೀಲ್ ಮಾಡಿದ್ದಾರೆ. ದಿ ಸಂಡೇ ಪೀಪಲ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ತನ್ನ ಗೆಳೆಯ ತನ್ನನ್ನು ಸೈಕೋ ಎಂದು ಕರೆಯುತ್ತಿದ್ದನೆಂದು ಬಹಿರಂಗಪಡಿಸಿದ್ದಾರೆ. ನಂತರ ಅವರು ಬ್ರೇಕಪ್ ಮಾಡಿಕೊಂಡರಂತೆ. ಆ ನೋವನ್ನು ಸಹಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಎಮಿಲಿ, ಒಂದು ದಿನ ಬಹಳಷ್ಟು ಕುಡಿದು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡರಂತೆ. ಇದಾದ ನಂತರ ಸಹಾಯ ಪಡೆಯಲು ತುಂಬಾ ಅತ್ತರಂತೆ. ಪುಣ್ಯಕ್ಕೆ ವೈದ್ಯರು ತನ್ನನ್ನು ರಕ್ಷಿಸಿದರು ಎಂದು ಎಮಿಲಿ ತಿಳಿಸಿದ್ದಾರೆ. ಆದರೆ ಎಮಿಲಿ ತನ್ನ ಕುಟುಂಬದಿಂದ, ವಿಶೇಷವಾಗಿ ತಾಯಿ ಕೇಟ್ ರಾಬಿನ್ಸ್‌ನಿಂದ ಆ ಘಟನೆಯನ್ನು ಮರೆಮಾಡಬೇಕಾಯಿತಂತೆ. ಎಮಿಲಿ ತನ್ನ ಬ್ರೇಕಪ್ ನಂತರ ಶಾಲೆಗೆ ರಜೆ ಹಾಕಲು ಪ್ರಾರಂಭಿಸಿದೆ ಎಂದು ಹೇಳಿದ್ದು, ತನ್ನ ಹೆತ್ತವರು ಮನೆಯಲ್ಲಿ ಇಲ್ಲದಿದ್ದಾಗ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರಂತೆ.