ಮೈಸೂರು ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಆನೆಗಳು ನಾಡಿಗೆ ಬಂದಿದೆ. ಜಂಬೂ ಸವಾರಿ ಸೇರಿದಂತೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ತೂಕ ಎಷ್ಟಿದೆ?

ಮೈಸೂರು (ಆ.26) ಮೈಸೂರು ದಸರಾ ಹಬ್ಬದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಈ ಬಾರಿ ಅದ್ಧೂರಿಯಾಗಿ ಮೈಸೂರು ದಸರಾ ಹಬ್ಬದ ಆಚರಣೆ ನಡೆಯಲಿದೆ. ಮೈಸೂರು ದಸರಾ ಹಬ್ಬಕ್ಕಾಗಿ ಆನೆಗಳನ್ನು ಕಾಡಿನಿಂದ ನಾಡಿಗೆ ಕರೆ ತರಲಾಗಿದೆ. ಕಾಡಿನಿಂದ ಅರಮನೆಗೆ ಆಗಮಿಸಿದ ಆನೆಗಳ ತೂಕ ಪರಿಶೀಲನೆ ಮಾಡಲಾಗಿದೆ. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಲಾಗಿದೆ. ತೂಕ ಹಾಗೂ ಆರೋಗ್ಯಕ್ಕೆ ಅನುಗುವಣವಾಗಿ ಆನೆಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಮೈಸೂರು ದಸರಾ ಹಾಗೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳು ಆನೆಗಳ ತೂಕದ ಮಾಹಿತಿ ಇಲ್ಲಿದೆ.

ಮೊದಲ ಹಂತದ ಆನೆಗಳ ತೂಕದ ವಿವರ (ಕೆಜಿ ಲೆಕ್ಕದಲ್ಲಿ)

ಅಭಿಮನ್ಯು - 5,360

ಧನಂಜಯ - 5,310

ಕಾವೇರಿ - 3,010

ಲಕ್ಷ್ಮೀ - 3,730

ಭೀಮ - 5,465

ಏಕಲವ್ಯ - 5,305

ಮಹೇಂದ್ರ - 5,120

ಕಂಜನ್ - 4,880

ಪ್ರಶಾಂತ - 5,110

ಎರಡನೇ ತಂಡದ ಆನೆಗಳ ತೂಕದ ವಿವರ.

ಹೇಮಾವತಿ 2440

ಶ್ರೀಕಂಠ 5540

ಸುಗ್ರೀವ 5545

ರೂಪ 3320

ಗೋಪಿ 4990

ತೂಕದಲ್ಲಿ ಮೊದಲ ಸ್ಥಾನ ಪಡೆದ ಸುಗ್ರೀವ ಆನೆ

ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ತೂಕ ಮುಗಿದಿದೆ. ಈ ಪಕಿ ಸುಗ್ರೀವ ಆನೆ ತೂಕದಲ್ಲಿ ಮೊದಲ ಸ್ಥಾನ ಪಡೆದಿದೆ. ಕೇವಲ ಐದು ಕೆಜಿ ತೂಕದ ಅಂತರದಲ್ಲಿ ಶ್ರೀಕಂಠ ಆನೆ ಎರಡನೇ ಸ್ಥಾನ ಪಡೆದಿದೆ. ಇನ್ನು ಮೂರನೇ ಸ್ಥಾನದಲ್ಲಿ ಭೀಮಾ ಹಾಗೂ ಅಭಿಮಮನ್ಯೂ ನಾಲ್ಕನೇ ಸ್ಥಾನದಲ್ಲಿದೆ. ತೂಕದಲ್ಲಿ ಅಂಬಾರಿ ಹೊರುವ ಆನೆಯನ್ನೇ ಮೂರು ಆನೆಗಳು ಹಿಂದಿಕ್ಕಿದೆ.

ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು

ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಜಂಬು ಸವಾರಿ ಸೇರಿದಂತೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಅರಮನೆಯಂದ ಬನ್ನಿ ಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದು ಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಒಟ್ಟು 14 ಆನೆಗಳು ತಾಲೀಮಿನಲ್ಲಿ ಭಾಗಿಯಾಗುತ್ತಿದೆ.

ರಾಜಬೀದಿಯಲ್ಲಿ ಗಜಗಾಂಭಿರ್ಯದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ ಹೆಜ್ಜೆ ಹಾಕಿದೆ. ಮೊದಲ ತಂಡದಲ್ಲಿ ಅಭಿಮನ್ಯು, ಏಕಲವ್ಯ, ಲಕ್ಷ್ಮಿ , ಮಹೇಂದ್ರ, ಭೀಮ ಕಂಜನ್, ಕಾವೇರಿ, ಧನಂಜಯ, ಪ್ರಶಾಂತ ಆನೆಗಳಿದ್ದರೆ, ಎರಡನೇ ತಂಡದಲ್ಲಿ ಶ್ರೀಕಂಠ, ಸುಗ್ರೀವ, ಗೋಪಿ, ಹೇಮಾವತಿ, ರೂಪ ಆನೆಗಳು ಬಂದಿದೆ. ಇತ್ತ ರಸ್ತೆಯಲ್ಲಿ ಆನೆಗಳನ್ನು ಕಂಡು ಮಕ್ಕಳು ಖುಷಿಪಟ್ಟಿದ್ದಾರೆ. ಆನೆಗಳ ಮುಂದೆ ಸೆಲ್ಫಿ, ಪೋಟೋ, ವೀಡಿಯೋ ಸೆರೆ ಹಿಡಿದು ಜನರು ಸಂಭ್ರಮಿಸಿದ್ದಾರೆ. ಇತ್ತ ರಸ್ತೆ ಬದಿಯಲ್ಲಿ ನಿಂತ ಹಲವರು ಆನೆಗಳ ಫೋಟೊ ವಿಡಿಯೋ ತೆಗೆದಿದ್ದಾರೆ.