ಬೆಂಗಳೂರು (ಮಾ.15): ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮತ (ಕೆಪಿಟಿಸಿಎಲ್‌) ಹಾಗೂ ಎಲ್ಲ ಎಸ್ಕಾಂ ನೌಕರರು, ಶೇ.20 ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆಯಿಂದ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಹೋರಾಟಕ್ಕೂ ಮೊದಲೇ ಸರ್ಕಾರ ಶೇ.20 ವೇತನವನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದೆ.

ರಾಜ್ಯದಲ್ಲಿ ಈಗಾಗಲೇ ಸುಮಾರು 10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಕೆಲಸ ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗುವುದನ್ನು ಮನಗಂಡಿದ್ದ ಸರ್ಕಾರ ಎಲ್ಲ ನೌಕರರಿಗೆ 7ನೇ ವೇತನ ಆಯೋಗ ಜಾರಿಯೊಂದಿಗೆ ಶೇ.17 ವೇತನವನ್ನು ಹೆಚ್ಚಳ ಮಾಡಿತ್ತು. ಈ ಬಗ್ಗೆ ವೇತನ ಪರಿಷ್ಕರಣೆ ಮಾಡಿ ಜಾರಿ ಮಾಡುವುದಾಗಿ ಆದೇಶವನ್ನೂ ಹೊರಡಿಸಿತ್ತು. ಆದರೆ, ಈಗ ಅದೇ ಮಾದರಿಯಲ್ಲಿ ಕೆಪಿಟಿಸಿಎಲ್‌ ನೌಕರರು ಕೂಡ ಶೇ.20 ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದರು.

ಯುಗಾದಿಗೆ KSRTC ಬಸ್‌ ಡೌಟ್‌,ಮಾರ್ಚ್‌ 21ರಿಂದ ಸಾರಿಗೆ ನೌಕರರ ಮುಷ್ಕರ

ಹೋರಾಟಕ್ಕೂ ಮುನ್ನವೇ ಮಣಿದ ಸರ್ಕಾರ: ಈಗ ನೌಕರರು ಮುಷ್ಕರ ಆರಂಭಿಸುವ ಮುನ್ನವೇ ಸರ್ಕಾರ ಬೇಡಿಕೆಯನ್ನು ಈಡೇರಿಸಿದ್ದು, ಶೇ.20 ವೇತನ ಪರಿಷ್ಕರಣೆ ಮಾಡಿ ನೀಡುವುದಾಗಿ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಆರಂಭಕ್ಕೂ ಮುನ್ನವೇ ನೌಕರರಿಗೆ ಜಯ ಲಭಿಸಿದ್ದು, ರಾಜ್ಯದ್ಯಂತ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನೌಕರರು ವಾಪಸ್‌ ಪಡೆದುಕೊಂಡಿದ್ದಾರೆ.

ಇನ್ನು ವಿದ್ಯುತ್‌ ಪೂರೈಕೆಯಲ್ಲಿ ಸಮಸ್ಯೆಯಿಲ್ಲ: ಕೆಪಿಟಿಸಿಎಲ್‌ನ ಎಲ್ಲ ಸಿಬ್ಬಂದಿ ಮತ್ತು ನೌಕರರು ಅನಿರ್ಧಿಷ್ಠಾವಧಿ ಮುಷ್ಕರ ಮಾಡಲು ಮುಮದಾಗಿದ್ದರಿಂದ ರಾಜ್ಯದ್ಯಂತ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಎಲ್ಲ ಸಾಧ್ಯತೆಗಳಿದ್ದವು. ಯಾವುದೇ ತಾಂತ್ಇಕ ತೊಂದರೆಗಳು ಕಂಡುಬಂದರೂ, ತಮ್ಮ ಬೇಡಿಕೆ ಈಡೇರುವವರೆಗೂ ತಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದರು. ಆದರೆ, ಈಗ ವೇತನ ಪರಿಷ್ಕರಣೆಯಲ್ಲಿ ನಾಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಭೀತಿಯಿತ್ತು. ಆದರೆ, ಈಗ ಸರ್ಕಾರವೇ ಪರಿಷ್ಕೃತ ವೇತನ ಜಾರಿ ಮಾಡುವುದಾಗಿ ಒಪ್ಪಿಕೊಂಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿದೆ. ಇದರಿಂದ ವಿದ್ಯುತ್‌ ಪೂರೈಕೆ ವ್ಯತ್ಯಯದ ಆತಂಕವೂ ದೂರವಾಗಿದೆ.

ಸಿಎಂ ಸೂಚನೆ ಮೇರೆಗೆ ಪರಿಷ್ಕರಣೆ: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ ಅಥವಾ ಕೆಪಿಟಿಸಿಎಲ್‌) ಮತ್ತು ರಾಜ್ಯದ ಎಲ್ಲ ಎಸ್ಕಾಂ ನೌಕರರ ವೇತನ ಪರಿಷ್ಕರಣೆಯ ಕುರಿತು ಆರ್ಥಿಕ ಇಲಾಖೆ ನೀಡಿದ ಟಿಪ್ಪಣಿಯನ್ನು ಅವಗಾಹಿಸಿದೆ. ಮಾ.14ರಂದು ಕವಿಪ್ರನಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಯಿತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡಲಾಯಿತು. ಮುಖ್ಯಮಂತ್ರಿ ಅವರ ಮಾರ್ಗದರ್ಶನದೊಂದಿಗೆ ವೇತನ ಪರಿಷ್ಕರಣೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. 

ಮಾ.16ರಿಂದ ಕೆಪಿಟಿಸಿಎಲ್‌, ಎಸ್ಕಾಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಸರ್ಕಾರದ ಟಿಪ್ಪಣಿಯಲ್ಲೇನಿದೆ: ಇದರಿಂದ ಕವಿಪ್ರನಿನಿ ಹಾಗೂ ಎಲ್ಲ ಎಸ್ಕಾಂಗಳಲ್ಲಿ ಈಗಿರುವ ವೇತನದ ಮೇಲೆ ಏ.2022ರಿಂದ ಪೂರ್ವಾನ್ವಯ ಆಗುವಂತೆ ಶೇ.20 ವೇತನ ಹೆಚ್ಚಿಸಿ ಪರಿಷ್ಕರಿಸಲು ಸೂಚಿಸಲಾಗಿದೆ. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು ಕವಿಪ್ರನಿನಿ ಅವರಿಗೆ ಸೂಚಿಸುವಂತೆ ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಟಿಪ್ಪಣಿ ಕಳಿಸಿದ್ದಾರೆ.