ಬೆಂಗಳೂರು (ಡಿ.7): ಬೆಂಗಳೂರಿನಲ್ಲಿ ಟ್ರಾಫಿಕ್‌ ಮುಕ್ತ ಸಂಚಾರಕ್ಕೆ ಅನುಕೂಲ ಆಗಿರುವ ಮೆಟ್ರೋ ರೈಲು ಸೇವೆಯು ಈಗ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಮತ್ತಷ್ಟು ಹತ್ತಿರವಾಗಲಿದೆ. ನೇರವಾಗಿ ಮೆಟ್ರೋ ಪೀಡರ್‌ ಬಸ್‌ಗಳು ಅಪಾರ್ಟಮೆಂಟ್‌ಗಳ ಬಾಗಿಲ ಬಳಿಯೇ ಬರಲಿದ್ದು, ಸುಲಭವಾಗಿ ಮೆಟ್ರೋದಿಂದ ಪ್ರಯಾಣ ಮಾಡಲು ಅನುಕೂಲ ಆಗಲಿದೆ. ಈ ಬಗ್ಗೆ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್‌ ಸಂಸ್ಥೆಗಳಿ ಮಾತುಕತೆ ನಡೆಸಿದ್ದು, ಶೀಘ್ರವಾಗಿ ಅಪಾರ್ಟ್​ಮೆಂಟ್​ ಬಾಗಿಲಿನಿಂದಲೇ ಮೆಟ್ರೋ ಸೇವೆ ಆರಂಭವಾಗಲಿದೆ.

ನಗರದ ಹೊರ ವರ್ತುಲ ರಸ್ತೆ (Outer Ring Road) ಸುತ್ತಮುತ್ತ ಅಪಾರ್ಟ್​ಮೆಂಟ್ (Apartments) ಹೆಚ್ಚಿರುವ ಭಾಗಕ್ಕೆ ಸೇವೆ ಸಲ್ಲಿಸಲಿದ್ದಾರೆ. BMRCL, BMTC ಅಧಿಕಾರಿಗಳ ತಂಡ ಸರ್ವೆ ಕಾರ್ಯ ಆರಂಭ ಮಾಡಿದೆ. ವೈಟ್ ಫೀಲ್ಡ್ ಸೇರಿ ಹಲವು ಭಾಗಗಳ ಅಪಾರ್ಟ್ಮೆಂಟ್​ಗಳಿಗೆ ಸೇವೆ ಸಲ್ಲಿಸಲಿದೆ. ಅಪಾರ್ಟ್ಮೆಂಟ್ ಅಸೋಸಿಯೇಷನ್ ಹಾಗೂ ಐಟಿ ಪಾರ್ಕ್ (IT Parks) ಜೊತೆ ಮಾತುಕತೆ ನಡೆದಿದೆ. ನಿಗಮಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರೆ. ಇಲ್ಲಿವರೆಗೂ 90ಕ್ಕೂ ಹೆಚ್ಚು ಮೆಟ್ರೋ ಫೀಡರ್ ಬಸ್​ ಸಂಚಾರವಾಗಿದೆ. ಮೆಟ್ರೋ ಸ್ಟೇಷನ್ ಸುತ್ತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚಾರವಾಗಲಿದೆ. ಅಪಾರ್ಟ್ಮೆಂಟ್​ಗಳಿಗೆ ಬಸ್ ವ್ಯವಸ್ಥೆ ವಿಸ್ತಾರ ಮಾಡಲು ಪ್ಲಾನ್​​​ ಮಾಡಿದ್ದಾರೆ. ಬಿಎಂಟಿಸಿ ಆದಾಯ ವೃದ್ಧಿ, ಮೆಟ್ರೋ ರೈಡರ್ ಶಿಫ್ ಹೆಚ್ಚಿಸಲು ಪ್ಲಾನ್​​ ಮಾಡಿದ್ದಾರೆ.

Bengaluru : ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಕೇಂದ್ರ ಆರಂಭ

ಮೆಟ್ರೋ ಫೀಡರ್ ಬಸ್: ನಗರದಲ್ಲಿ ಮೆಟ್ರೋ ಸೇವೆ ಆರಂಭವಾಗಿ 11 ವರ್ಷಗಳು ಕಳೆಯುತ್ತಾ ಬಂದಿವೆ. ಮೆಟ್ರೋ ನಿಲ್ದಾಣಗಳು ಇರುವ ಸ್ಥಳದಿಂದ ಲಾಸ್ಟ್‌ ಮೈಲ್ ಕನೆಕ್ಟಿವಿಟಿ (Last Mile Connectivity) ಉದ್ದೇಶದಿಂದ ಬಿಎಂಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿತ್ತು. ಈ ಬಗ್ಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (DULT), ಬಿಎಂಆರ್‌ಸಿಎಲ್‌ ಮತ್ತು ಬಿಎಂಟಿಸಿ ಸಂಸ್ಥೆಗಳೊಂದಿಗೆ ಚರ್ಚಿಸಿ ಸೇವೆಯನ್ನು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಸೇವೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಈವರೆಗೆ ಮೆಟ್ರೋ ನಿಲ್ದಾಣಗಳು ಇರುವ ಪ್ರಮುಖ ಸ್ಥಳಗಳಿಂದ ಸಾಮಾನ್ಯ ಬಿಎಂಟಿಸಿ ಬಸ್‌ ನಿಲ್ದಾಣಗಳು ಇರುವ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು. ಇದರಿಂದಾಗಿ ಮೆಟ್ರೋ ರೈಲು ಇಳಿದ ಪ್ರಯಾಣಿಕರಿಗೆ ತಮ್ಮ ಸ್ಥಳಗಳಿಗೆ ಹೋಗಲು ಬಿಎಂಟಿಸಿ ಬಸ್‌ ನಿಲ್ದಾಣಗಳನ್ನು ಹುಡುಕಿಕೊಂಡು ಹೋಗುವ ಅಗತ್ಯ ಇರುವುದಿಲ್ಲ.

ಕೋವಿಡ್‌ ನಂತರದ ಅವಧಿಯಲ್ಲಿ ತಿಕ್ಕಾಟ: ಮೆಟ್ರೋ ನೀಲ್ದಾಣಗಳಿಂದ ಇತರೆ ಸ್ಥಳಗಳಿಗೆ ಹೋಗಲು ವ್ಯವಸ್ಥೆ ಮಾಡಲಾಗಿದ್ದ ಮಿನಿ ಬಸ್‌ಗಳು 10 ವರ್ಷ ಸೇವೆ ಪೂರೈಸಿದ್ದು, ಅವುಗಳ ನಿರ್ವಹಣೆ ಕಷ್ಟವಾಗುತ್ತಿತ್ತು. ಜೊತೆಗೆ, ಕೋವಿಡ್‌ (Covid-19) ಸಂದರ್ಭದಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಿದ್ದ ಹಿನ್ನೆಲೆಯಲ್ಲಿ (ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ, ಸ್ಮಾರ್ಟ ಟಿಕೆಟ್ ಮಾತ್ರ ಅವಕಾಶ ಇತ್ಯಾದಿ) ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿತ್ತು. ಜೊತೆಗೆ ಕೋವಿಡ್‌ ಇಳಿಮುಖವಾಗಿದ್ದರೂ ಮೆಟ್ರೋ ರೈಲು (Metro Rail) ಸಂಚಾರದ ಸಮಯದಲ್ಲಿ ಆಗಿಂದಾಗ್ಗೆ ಬದಲಾವಣೆ ಮಾಡುತ್ತಿದ್ದ ಕಾರಣ ಫೀಡರ್‌ ಬಸ್‌ (Feeder Bus) ಸೇವೆ ನೀಡುವಲ್ಲಿ ಸಮಸ್ಯೆ ಉಂಟಾಗಿತ್ತು. ಈ ಎಲ್ಲ ಕಾರಣಗಳಿಂದ ಬಿಎಂಟಿಸಿಗೆ ಆದಾಯ ಕಡಿಮೆ ಬರುತ್ತಿತ್ತು. ಹೀಗಾಗಿ, ಪಕ್ಕದ ಮಾರ್ಗಗಳಲ್ಲಿ ಚಲಿಸುತ್ತಿದ್ದ ಸಾಮಾನ್ಯ ಬಸ್‌ಗಳನ್ನು ಫೀಡರ್‌ ಬಸ್‌ ರೀತಿಯಲ್ಲಿ ಸೇವೆಗೆ ಬಳಸುತ್ತಿತ್ತು. ಇದರಿಂದ ಏಪ್ರಿಲ್‌ನಿಂದ ಜೂನ್‌ ತಿಂಗಳ ನಡುವೆ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್‌ ನಡುವೆ ತಿಕ್ಕಾಟ (friction) ಶುರುವಾಗಿತ್ತು. ನಂತರ ಕೋವಿಡ್‌ ತಹಬದಿಗೆ ಬಂದು ಸಾಮಾನ್ಯ ಜನಸಂಚಾರ ಆರಂಭವಾದ ನಂತರ, ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿದ್ದರಿಂದ ಎಲ್ಲ ತಿಕ್ಕಾಟಗಳು ತಿಳಿಯಾಗಿದ್ದವು.

Bengaluru: ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಸಾರಿಗೆ ಪ್ರಾಧಿಕಾರದಿಂದ ಅನುಮತಿ

ಅಪಾರ್ಟಮೆಂಟ್‌ ಸೇವೆಯಿಂದ ಅನುಕೂಲ: ವೈಟ್‌ಫೀಲ್ಡ್‌-ಕೆ.ಆರ್‌.ಪುರ (Whitefield-KR Pura) ಮಧ್ಯೆಯ 13 ಕಿಮೀ ಮಾರ್ಗದಲ್ಲಿನ 'ನಮ್ಮ ಮೆಟ್ರೋ'ದ ವಾಣಿಜ್ಯ ಸಂಚಾರ ಮುಂದಿನ ವರ್ಷದ ಮಾರ್ಚ್‌ ತಿಂಗಳಾಂತ್ಯದೊಳಗೆ ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಆದರೆ, ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ತನಕದ 15.5 ಕಿ.ಮೀ. ಮಾರ್ಗವನ್ನು ಒಂದೇ ಹಂತದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಮೆಟ್ರೋ ನಿಗಮದ ಗುರಿ ಸಾಕಾರವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಈ ಮಾರ್ಗ ಎರಡು ಹಂತದಲ್ಲಿ ಸಂಚಾರಕ್ಕೆ ತೆರವಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಮೆಟ್ರೋ ಫೀಡರ್‌ ಬಸ್‌ ಸೇವೆಗಳನ್ನು ಅಪಾರ್ಟಮೆಂಟ್‌ಗಳ ಬಳಿ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಇನ್ನು ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರ ಮಾರ್ಗದಲ್ಲಿ ಬಹಳಷ್ಟು ಅಪಾರ್ಟಮೆಂಟ್‌ಗಳು ಇದ್ದು ಇಲ್ಲಿನ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ.