ಹೊಸ ಐಫೋನ್ 17 ಬಿಡುಗಡೆಯಾಗಿದೆ. ಕಡಿಮೆ ಬೆಲೆಗೆ ಐಫೋನ್ 17 ಖರೀದಿಸಲು ಒಂದು ಉಪಾಯವಿದೆ. ಭಾರತದಿಂದ ವಿಮಾನ ಹತ್ತಿ ದುಬೈಗೆ ತೆರಳಿ ಐಫೋನ್ ಖರೀದಿಸಿ ಭಾರತಕ್ಕೆ ಮರಳಿದರೂ ಹಣ ಉಳಿತಾಯ ಮಾಡಲು ಸಾಧ್ಯವಿದೆ.

ನವದೆಹಲಿ (ಸೆ.09) ಆ್ಯಪಲ್ ತನ್ನ ಹೊಚ್ಚ ಹೊಸ ಸಿರೀಸ್ ಐಫೋನ್ ಬಿಡುಗಡೆ ಮಾಡಿದೆ. ಐಫೋನ 17 ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ. 1,19,900 ರೂಪಾಯಿಯಿಂದ ಐಫೋನ್ 17 ಬೆಲೆ ಆರಂಭಗೊಳ್ಳುತ್ತಿದೆ. ಹಲವು ಐಫೋನ್ ಗ್ರಾಹಕರು ತಮ್ಮ ಫೋನ್ ಅಪ್‌ಗ್ರೇಡ್ ಮಾಡಲು ಬಯಸಿದ್ದರೆ,ಮತ್ತೆ ಹಲವರು ಐಫೋನ್ ಮಾಲೀಕರಾಗಲು ಬಯಸಿದ್ದಾರೆ. ಪ್ರತಿ ವರ್ಷ ಹೊಸ ಐಫೋನ್ ಸೀರಿಸ್‌ಗೆ ಭಾರತದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತದೆ. ಇದೀಗ ಐಫೋನ್ 17ಕೂಡ ಹೊರತಾಗಿಲ್ಲ. ಭಾರತ ಸೇರಿದಂತೆ ಇತರ ದೇಶಗಳಲ್ಲಿ ಐಫೋನ್ ಫೋನ್ ಬೆಲೆಯಲ್ಲಿ ಭಾರಿ ವ್ಯತ್ಯಸವಾಗಿದೆ. ಆಯಾ ದೇಶದ ತೆರಿಗೆ ಸೇರಿದಂತೆ ಇತರ ಪಾವತಿಗಳಿಂದ ಫೋನ್ ಬೆಲೆಯಲ್ಲಿ ವ್ಯತ್ಯಸವಾಗುತ್ತದೆ. ವಿಶೇಷ ಅಂದರೆ ಐಫೋನ್ 17 ಪ್ರೋ ಮ್ಯಾಕ್ಸ್ ಖರೀದಿಸಲು ಪ್ಲಾನ್ ಮಾಡಿದ್ದರೆ, ದುಬೈಗೆ ತೆರಳಿ ಖರೀದಿಸಿದರೆ ಹಣ ಉಳಿತಾಯ ಮಾಡಬಹುದು.

ಐಫೋನ್ 17 ಫೋನ್ ಬೆಲೆ

  • ಐಫೋನ್ ಏರ್ ಬೆಲೆ: 1,19,900 (256pGB ಸ್ಟೋರೇಜ್)
  • 512GB ಹಾಗೂ 1ಟಿಬಿ ಸ್ಟೋರೇಜ್ ಫೋನ್: 1,39,900 ರೂಪಾಯಿಯಿಂದ 1,59,900 ರೂಪಾಯಿ
  • ಐಫೋನ್ 17 ಪ್ರೋ ಬೆಲೆ :1,34,900 ರೂಪಾಯಿ (256GB ಸ್ಟೋರೇಜ್)
  • 512GB ಹಾಗೂ 1ಟಿಬಿ ಸ್ಟೋರೇಜ್ ಫೋನ್ : 1,54,900 ರೂಪಾಯಿಯಿಂದ 1,74,900 ರೂಪಾಯಿ
  • ಐಫೋನ್ 17 ಪ್ರೋ ಮ್ಯಾಕ್ಸ್ ಬೆಲೆ ದುಬೈನಲ್ಲಿ ಎಷ್ಟಿದೆ?

ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?

ಹೊಸದಾಗಿ ಬಿಡುಗಡೆಯಾಗಿರುವ ಐಫೋನ್ 17 ಸೀರಿಸ್ ಪೈಕಿ ಪ್ರೋ ಮ್ಯಾಕ್ಸ್ ಖರೀದಿಸುವ ಪ್ಲಾನ್ ಇದ್ದರೆ ದುಬೈನಲ್ಲಿ ಖರೀದಿಸುವುದು ಉತ್ತಮ. ಯುಎಐನಲ್ಲಿ ಐಫೋನ್ 17 ಪ್ರೋ ಮ್ಯಾಕ್ಸ್ ಬೆಲೆ 5,099 AED. ಭಾರತೀಯ ರೂಪಾಯಿಗಳಲ್ಲಿ 1,22,500 ರೂಪಾಯಿ. ಭಾರತಕ್ಕಿಂತ 17,400 ರೂಪಾಯಿ ಕಡಿಮೆ ಬೆಲೆಯಲ್ಲಿ ಐಫೋನ್ 17 ಪ್ರೋ ಮ್ಯಾಕ್ಸ್ ಲಭ್ಯವಿದೆ. ಭಾರತದಿಂದ ವಿಮಾನ ಟಿಕೆಟ್ ಬುಕ್ ಮಾಡಿ ದುಬೈನಲ್ಲಿ ಐಫೋನ್ ಖರೀದಿಸಿ ಬಳಿಕ ಭಾರತಕ್ಕೆ ಮರಳಿದರೂ ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು ಎಂದು ಹಲವು ವಿಶ್ಲೇಷಿಸುತ್ತಿದ್ದಾರೆ.

ಸ್ಕೈಸ್ಕಾನರ್ ಪ್ರಕಾರ ದೆಹಲಿಯಿಂದ ದುಬೈ ಹಾಗೂ ದುಬೈನಿಂದ ದೆಹಲಿ ರೌಂಡ್ ಟ್ರಿಪ್ ಬೆಲೆ 22,619 ರೂಪಾಯಿ. ವಿಮಾನ ಟಿಕೆಟ್ ಬುಕ್ ಮಾಡಿ ದುಬೈನಲ್ಲಿ ಐಫೋನ್ 17 ಪ್ರಾ ಮ್ಯಾಕ್ಸ್ ಖರೀದಿಸಿ ಮರಳಿದರೂ ಹಣ ಉಳಿತಾಯ ಮಾಡಲು ಸಾಧ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ತೆರಳಿ ಐಫೋನ್ ಪ್ರೋ ಮ್ಯಾಕ್ಸ್ ಖರೀದಿಸಿ ಭಾರತಕ್ಕೆ ಮರಳಿದರೂ ಸರಿಸುಮಾರು 4,800 ರೂಪಾಯಿ ಉಳಿತಾಯ ಮಾಡಬಹುದು.

ಸೆಪ್ಟೆಂಬರ್ 22ರ ಬಳಿಕ ಜಿಎಸ್‌ಟಿ ಕಡಿತ

ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಕಡಿತಗೊಳ್ಳುತ್ತಿದೆ. ಶೇಕಡಾ 28 ರಿಂದ 18 ಹಾಗೂ ಶೇಕಡಾ 5ಕ್ಕೆ ಜಿಎಸ್‌ಟಿ ಇಳಿಕೆ ಮಾಡಲಾಗುತ್ತದೆ. ಈ ವೇಳೆ ಭಾರತದಲ್ಲೂ ಐಫೋನ್ ಬೆಲೆ ಭಾರಿ ಕಡಿತಗೊಳ್ಳಲಿದೆ. ಸಾಮಾನ್ಯವಾಗಿ ಒಂದು ಐಫೋನ್ ಖರೀದಿಸಲು ಇಲ್ಲಿಂದ ದುಬೈಗೆ ತೆರಳಿ ಬಳಿಕ ಭಾರತಕ್ಕೆ ಮರಳುವುದು ದುಸ್ಸಾಹಸ.