ಆಂಡ್ರಾಯ್ಡ್ ಫೋನ್ ಗ್ರಾಹಕರಿಗೆ ಶಾಕ್ ಆಗಿದೆ. ಅಚಾನಕ್ ಫೋನ್ ಕಾಲ್ ಸ್ಕ್ರೀನ್ ಬದಲಾಗಿದೆ. ಅಪ್ಡೇಟ್ ಮಾಡ್ದೆ ಹೇಗೆ ಹೀಗಾಯ್ತು ಅಂದ್ಕೊಳ್ತಿದ್ದವರಿಗೆ ಉತ್ತರ ಇಲ್ಲಿದೆ. 

ಕಳೆದ ಮೂರು ದಿನಗಳಿಂದ ಆಂಡ್ರಾಯ್ಡ್ ಕಾಲಿಂಗ್ ಸ್ಕ್ರೀನ್ (Android Calling Screen) ಬದಲಾಗಿದೆ. ಮೊದಲಿನಂತೆ ಕಾಲ್ ರಿಸೀವ್ ಮಾಡೋ ಆಯ್ಕೆ ನಿಮಗೆ ಕಾಣ್ತಿಲ್ಲ. ಅರೇ ಇದೇನಾಯ್ತು? ನಾವೇನು ಮಾಡಿಲ್ವಲ್ಲ ಅಂತ ಅನೇಕರು ಆಲೋಚನೆ ಮಾಡ್ತಿದ್ದಾರೆ. ಮತ್ತೆ ಕೆಲವರು ಇದನ್ನು ಸರಿ ಮಾಡ್ಕೊಳ್ಳೋದು ಹೇಗೆ ಅಂತ ಸರ್ಚ್ ಮಾಡಿ, ಮತ್ತೆ ನಾರ್ಮಲ್ ಸ್ಕ್ರೀನ್ ಗೆ ವಾಪಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕಾಲ್ ಸ್ಕ್ರೀನ್ ಬದಲಾದ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಅಷ್ಟಕ್ಕೂ ಆಂಡ್ರಾಯ್ಡ್ ಕಾಲ್ ಸ್ಕ್ರೀನ್ ಬದಲಾಗಿದ್ದು ಹೇಗೆ ಮತ್ತೆ ಅದನ್ನು ನೀವು ಹೇಗೆ ಸರಿ ಮಾಡ್ಕೊಳ್ಬಹುದು ಎಂಬ ಮಾಹಿತಿ ಇಲ್ಲಿದೆ.

ಫೋನ್ ಕಾಲಿಂಗ್ ಸ್ಕ್ರೀನ್ ಬದಲಾಗಲು ಕಾರಣ ಏನು? : ಗೂಗಲ್ (Google) ತನ್ನ ಫೋನ್ ಅಪ್ಲಿಕೇಶನ್ನಲ್ಲಿ Material 3 Expressive ಮರುವಿನ್ಯಾಸವನ್ನು ಜಾರಿಗೆ ತಂದಿದೆ. ಅದು ಈಗ ಬಳಕೆದಾರರನ್ನು ತಲುಪಲು ಶುರುವಾಗಿದೆ. ಈ ಹೊಸ ವಿನ್ಯಾಸವನ್ನು ಹೆಚ್ಚು ಆಧುನಿಕ, ಸರಳ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ದೊಡ್ಡ ಬದಲಾವಣೆಯು ಅಪ್ಲಿಕೇಶನ್ನ ನ್ಯಾವಿಗೇಷನ್ ಶೈಲಿಯಲ್ಲಿದೆ.

ಗೂಗಲ್ ಫೋನ್ ಆಪ್ ನಲ್ಲಿ ಕಾಲ್ ಲಾಗ್ ಈಗ ಮೊದಲಿನಂತೆ ಕಾಣಿಸೋದಿಲ್ಲ. ಕರೆಯನ್ನು ಬೇರೆ ಬೇರೆಯಾಗಿ ಲೀಸ್ಟ್ ಮಾಡಲಾಗಿದೆ. ಅಲ್ದೆ ಕಾಲ್ ಹಿಸ್ಟ್ರಿ ಮತ್ತೆ ಫೆವರೆಟ್ ನಂಬರನ್ನು ಹೋಮ್ ನಲ್ಲಿ ಇಡಲಾಗಿದೆ. ನೀವು ಫೋನ್ ಮಾಡಲು ಪದೇ ಪದೇ ನಂಬರ್ ಹುಡುಕ್ಬೇಕಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಇದು ನಿಮಗೆ ಅನುಕೂಲವಾಗಲಿದೆ.

ಕೀಪ್ಯಾಡ್ ಸೆಕ್ಷನ್ ಕೂಡ ಬದಲಾಗಿದೆ. ಮೊದಲು ಫ್ಲೋಟಿಂಗ್ ಆಕ್ಷನ್ ಬಟನ್ (FAB) ನಿಂದ ಎಕ್ಸೆಸ್ ಆಗ್ತಿತ್ತು. ಈಗ ಅದು ಆಪ್ ನ ಎರಡನೇ ಟ್ಯಾಬ್ ಆಗಿ ಬದಲಾಗಿದೆ. ನಂಬರ್ ಪ್ಯಾಡ್ ಶೀಟ್ ಈಗ ರೌಂಡ್ ಶೇಪ್ ನಲ್ಲಿ ನಿಮಗೆ ಕಾಣಲಿದೆ. ಆದ್ರೆ ವಾಯ್ಸ್ಮೇಲ್ ವಿಭಾಗಕ್ಕೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.

ಗೂಗಲ್ ಈಗ ಕಾಂಟೆಕ್ಟನ್ನು ಹೊಸ ನ್ಯಾವಿಗೇಷನ್ ಡ್ರಾಯರ್ಗೆ ಬದಲಾಯಿಸಿದೆ. ಇದನ್ನು ಅಪ್ಲಿಕೇಶನ್ನ ಸರ್ಚಿಂಗ್ ಪ್ಲೇಸ್ ನಿಂದ ಎಕ್ಸೆಸ್ ಮಾಡ್ಬಹುದು. ಕಾಂಟೆಕ್ಟ್ ಹೊರತಾಗಿ, ಸೆಟ್ಟಿಂಗ್ಗಳು, ಕ್ಲಿಯರ್ ಕಾಲ್ ಹಿಸ್ಟ್ರಿ ಮತ್ತು ಹೆಲ್ಪ್ ಆಂಡಯ್ ಫೀಡ್ಬ್ಯಾಕ್ (Help & feedback ) ನಂತಹ ಆಯ್ಕೆಗಳು ಈ ಡ್ರಾಯರ್ನಲ್ಲಿ ಸಿಗಲಿವೆ. ಸೆಟ್ಟಿಂಗ್ ಪೇಜ್ ನಲ್ಲಿ ನಿಮಗೆ M3 ಎಕ್ಸ್ಪ್ರೆಸಿವ್ ಡಿಸೈನ್ ಪರಿಣಾಮ ಸ್ಪಷ್ಟವಾಗಿ ಕಾಣಲಿದೆ.

ಇನ್ಕಮಿಂಗ್ ಕಾಲ್ (Incoming call) ಸ್ಕ್ರೀನ್ ಗೂ ಹೊಸ ರೂಪ ನೀಡಲಾಗಿದೆ. ಕಾಲ್ ರಿಸೀವ್ ಮಾಡಲು ಇಲ್ಲ ರಿಜೆಕ್ಟ್ ಮಾಡಲು ನಿಮಗೆ ಹಾರಿಜಾಂಟಲ್ ಆಕಾರದ ಸಿಂಗಲ್ ಟ್ಯಾಪ್ ಮಾಡುವ ಆಯ್ಕೆ ಸಿಗಲಿದೆ. ನೀವು ಇದನ್ನು Settings > Incoming call gesture ನಿಂದ ಸೆಟ್ ಮಾಡ್ಬಹುದು. ಇದನ್ನು ಉದ್ದೇಶಪೂರ್ವಕವಾಗಿ ನೀಡಿದ್ದೇವೆ ಎಂದು ಗೂಗಲ್ ಹೇಳಿದೆ. ಜೇಬಿನಿಂದ ಫೋನ್ ತೆಗೆಯುವ ಸಮಯದಲ್ಲಿ ಆಕಸ್ಮಿಕವಾಗಿ ಕಾಲ್ ರಿಸೀವ್ ಅಥವಾ ರಿಜೆಕ್ಟ್ ಆಗೋದನ್ನು ತಪ್ಪಿಸಲು ಮಾಡಲಾಗಿದೆ.

ಗೂಗಲ್ ಮಾಡಿದ ಈ ಬದಲಾವಣೆಯನ್ನು ಹೇಗೆ ಬದಲಿಸ್ಬಹುದು? : ನಿಮಗೆ ಹೊಸ ಫೀಚರ್ ಇಷ್ಟವಿಲ್ಲ ಎಂದಾದ್ರೆ ನೀವು ಅದನ್ನು ಹಳೆ ಫೀಚರ್ ಗೆ ಬದಲಿಸಿಕೊಳ್ಬಹುದು. ಮೊದಲು ನೀವು ಗೂಗಲ್ ಸ್ಟೋರ್ ಗೆ ಹೋಗಿ. ಅಲ್ಲಿ ನಿಮ್ಮ ಅಕೌಂಟ್ ಆಯ್ಕೆ ಮಾಡಿದಾಗ ನಿಮಗೆ ಮ್ಯಾನೇಜ್ ಎನ್ನುವ ಆಯ್ಕೆ ಸಿಗುತ್ತದೆ. ಅಲ್ಲಿ ಫೋನ್ ಅಪ್ಲಿಕೇಷನ್ ಡಿಲಿಟ್ ಮಾಡಿದ್ರೆ ಹಳೆ ಸಿಸ್ಟಂಗೆ ನಿಮ್ಮ ಫೋನ್ ವಾಪಸ್ ಆಗಲಿದೆ.