ಹದಿಹರೆಯದ ಹುಡುಗರು ಇತ್ತೀಚೆಗೆ ಹೆಚ್ಚು ಕುಡಿತದ ಚಟಕ್ಕೆ ಮೋರೆಹೋಗಲು ಕಾರಣ ಹಲವು. ಹುಡುಗರು ಮಾತ್ರವಲ್ಲ, ಹುಡುಗಿಯರೂ ಕೂಡ ಈ ಗೀಳಿಗೆ ಒಳಗಾಗಿದ್ದಾರೆ. ಅವುಗಳಲ್ಲಿ ಕೆಲವೇ ಕೆಲವು ಮುಖ್ಯವಾದ ಕಾರಣಗಳನ್ನು ಸಮೀಕ್ಷೆ ಪಟ್ಟಿಮಾಡಿದೆ. ಅದೇನು ನೋಡಿ..
ಟೀನೇಜ್ ಹುಡುಗರು 'ಡ್ರಿಂಕ್ಸ್' ಚಟಕ್ಕೆ ದಾಸರಾಗ್ತಿರೋದು ಯಾಕೆ?
ಇತ್ತೀಚೆಗೆ ಭಾರತದಲ್ಲಿ ಟೀನೇಜ್ ಹುಡುಗರು ಹೆಚ್ಚುಹೆಚ್ಚಾಗಿ ಕುಡಿತದ ಚಟಕ್ಕೆ (Drinks Obsession) ದಾಸರಾಗುತ್ತಿದ್ದಾರೆ. ಈ ಮೊದಲೆಲ್ಲಾ ಕಾರ್ಮಿಕ ವರ್ಗ, ಎಂದರೆ ಶ್ರಮದ ಕೆಲಸ ಮಾಡುವ ವರ್ಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪುರುಷರು ಕುಡಿತದ ಚಟಕ್ಕೆ ಅಂಟಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಈ ವಿಷಯ ಹಾಗಿಲ್ಲ. ಶ್ರೀಮಂತ-ಬಡವ ಬೇಧವಿಲ್ಲದೇ ಬಹಳಷ್ಟು ಜನರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಅಚ್ಚರಿ ಹಾಗೂ ಶಾಕಿಂಗ್ ಸಂಗತಿ ಎಂದರೆ, ಯುವಜನತೆ ಅದರಲ್ಲೂ ಟೀನೇಜ್ (13-19) ಹುಡುಗರು ಇಂಥ ಚಟಕ್ಕೆ ಹೆಚ್ಚುಹೆಚ್ಚಾಗಿ ಮೊರೆಹೋಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸಮೀಕ್ಷೆ ತಿಳಿಸಿದೆ.
ಯುವಜನತೆ, ಹದಿಹರೆಯದ ಹುಡುಗರು ಇತ್ತೀಚೆಗೆ ಕುಡಿತದ ಚಟಕ್ಕೆ ಮೋರೆಹೋಗಲು ಮುಖ್ಯ ಕಾರಣ, ನಮ್ಮ ಭಾರತದ ಬದಲಾದ ಸಾಮಾಜಿಕ ಪರಸ್ಥಿತಿ ಎನ್ನಬಹುದು. ವಿದೇಶಿ ಸಂಸ್ಕೃತಿಯ ಮೊರೆ ಹೋಗುತ್ತಿರುವ ಟೀನೇಜ್ ಹುಡುಗರು ಅದರ ಕೆಟ್ಟಪರಿಣಾಮಗಳ ಬಗ್ಗೆ ಯೋಚಿಸುತ್ತಲೇ ಇಲ್ಲ. ಅವರಿಗೆ ಸೂಕ್ತ ತಿಳುವಳಿಕೆಯನ್ನು ನೀಡಲು ಫ್ಯಾಮಿಲಿ ಹಾಗೂ ಸೊಸಾಯ್ಟಿ ಕೂಡ ಪ್ರಯತ್ನಿಸುತ್ತಿಲ್ಲ ಎನ್ನಬಹುದು. ಅಲ್ಪಸ್ವಲ್ಪ ಈ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಕೂಡ ಟೀನೇಜ್ ಬಾಯ್ಸ್ ಅದನ್ನು ಕಿವಿಗೇ ಹಾಕಿಕೊಳ್ಳೋದಿಲ್ಲ ಎಂಬುದು ರಿಯಾಲಿಟಿಯಾ?
ಈ ಪ್ರಾಕ್ಟೀಸ್ ಇತ್ತೀಚೆಗೆ ಹೆಚ್ಚಾಗಲು ಕಾರಣ?
ಈ ಪ್ರಾಕ್ಟೀಸ್ ಇತ್ತೀಚೆಗೆ ಹೆಚ್ಚಾಗಲು ಕಾರಣ ಸಮಾಜದ ಹಾಗೂ ವಿದೇಶಿ ಲೈಫ್‌ಸ್ಟೈಲ್ ಅನುಕರಣೆ ಎನ್ನಬಹುದು. ಹುಡುಗರು ಮಾತ್ರವಲ್ಲ, ಹುಡುಗಿಯರೂ ಕೂಡ ಈ ಗೀಳಿಗೆ ಒಳಗಾಗಿದ್ದಾರೆ. ಆದರೆ, ಇಲ್ಲಿ ಈ ಚಟ ಶುರುವಾಗಲು ಹಾಗೂ ಈ ಅಭ್ಯಾಸ ಮೊದಲಿನಿಂದಲೂ ಬೆಳೆದುಬಂದಿರಲು ಕಾರಣ ಹಲವು. ಅವುಗಳಲ್ಲಿ ಕೆಲವೇ ಕೆಲವು ಮುಖ್ಯವಾದ ಕಾರಣಗಳನ್ನು ಸಮೀಕ್ಷೆ ಪಟ್ಟಿಮಾಡಿದೆ. ಅವುಗಳಲ್ಲಿ ಮುಖ್ಯವಾದ ಕೆಲವು ಪಾಯಿಂಟ್‌ಗಳು ಇಲ್ಲಿವೆ ನೋಡಿ..
ಕೆಲವು ಮುಖ್ಯ ಪಾಯಿಂಟ್‌ಗಳು:-
1. ಗಂಡುಮಕ್ಕಳು ಅಳಬಾರದು, ಗಂಡಸರು ಯಾವತ್ತೂ ಸಮಸ್ಯೆಯನ್ನು ಸಮಸ್ಯೆ ಎಂದು ಪರಿಗಣಿಸಬಾರದು, ಗಂಡಸರು ಎಂತಹ ಸಮಸ್ಯೆಗೂ ಭಯಬೀಳಬಾರದು, ಹುಡುಗರು ಹೆಚ್ಚಾಗಿ ಮನೆಯಲ್ಲಿ ಇರಬಾರದು, ಸಮಾಜಕ್ಕೆ ಹೊಂದಿಕೊಳ್ಳಬೇಕು ಹೀಗೆ ಹತ್ತುಹಲವು ಅಲಿಖಿತ ನಿಯಮಗಳು ನಮ್ಮ ಸಮಾಜದಲ್ಲಿ ಬೇರೂರಿವೆ. ಅದೇ ರೀತಿ ಬದುಕಲು ಕಲಿತ ಹುಡುಗರು, ತಮಗೆ ದೈಹಿಕ ಅಥವಾ ಮಾನಸಿಕ ನೋವು ಆದಾಗ ಅಳುವದೇ ಇಲ್ಲ. ಆದರೆ, ಆಗಿರುವ ನೋವು ಹೊರಹೋಗಲು ಬೇರೆ ದಾರಿಯನ್ನು ಸಮಾಜ ನಿರ್ಮಿಸಿಲ್ಲ. ಆದ್ದರಿಂದ, ಹುಡುಗರು ಹೆಚ್ಚಾಗಿ ಇಂಥ ಸಮಯಗಳಲ್ಲಿ ಬಾರ್ ಬಾಗಿಲಿಗೆ ಹೋಗಿ ನಿಲ್ಲುತ್ತಾರೆ. ಅಲ್ಲಿ ತಮ್ಮಂತೆಯೇ ನೋವು ಅನುಭವಿಸುತ್ತಿರುವ ಸ್ನೇಹಿತರ ಜೊತೆಗೆ ಡ್ರಿಂಕ್ಸ್ ಮಾಡುತ್ತ ಅದನ್ನು ಹಂಚಿಕೊಂಡು ಮರೆಯಲು ಪ್ರಯತ್ನಿಸುತ್ತಾರೆ. ಇದು ಹಲವು ಕಾಲಗಳಿಂದ ಭಾರತದಲ್ಲಿ ಮನೆಮಾಡಿರುವ ಸತ್ಯ ಸಂಗತಿ.
2. ಇತ್ತೀಚೆಗೆ ವಿದ್ಯಾಭ್ಯಾಸ ಹಾಗೂ ಕೆಲಸಗಳ ಸಲುವಾಗಿ ಹೆಚ್ಚಾಗಿ ಟೀನೇಜ್ ಹುಡುಗರು ಮನೆಯಿಂದ ಹೊರಗಡೆ ಇರುತ್ತಾರೆ. ಅವರು ತಮ್ಮ ಊರು ಹಾಗೂ ಕುಟುಂಬದ ಕಣ್ಗಾವಲಿನಲ್ಲಿ ಇರೋದಿಲ್ಲ. ಹೀಗಾಗಿ ಅವರು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ತಮಗೆ ಅರಿವಿಲ್ಲದೇ ತಮ್ಮದೇ ವಯಸ್ಸಿನ ಹುಡುಗರ ಜೊತೆ ಸೇರಿ ಮೊದಮೊದಲು ಹವ್ಯಾಸಕ್ಕಾಗಿ ಡ್ರಿಂಕ್ಸ್ ಶುರುಮಾಡುತ್ತಾರೆ. ಬಳಿಕ ಅದು ಚಟವಾಗಿ ಬದಲಾಗುತ್ತದೆ. ಕೊನೆಗೆ ಅದರಿಂದ ಹೊರಬರಲಾಗದೇ ಒದ್ದಾಡುತ್ತಾರೆ. ಮಾನಸಿಕ ಒತ್ತಡ, ಫ್ಯಾಷನ್, ಸಮಾಜದ ಅಂಧಾನುಕರಣೆ ಹಾಗೂ ವಿದೇಶಿ ಕಲ್ಚರ್ ವ್ಯಾಮೋಹ ಹೀಗೆ ಹತ್ತು-ಹಲವು ಕಾರಣಗಳು ಈ ಪಟ್ಟಿಯಲ್ಲಿವೆ.
3. ಟೀನೇಜ್ ಹುಡುಗರು ತಮಗಿಂತ ಹಿರಿಯರನ್ನು ನೋಡಿ ಕಲಿಯುತ್ತಾರೆ. ತಮ್ಮ ಮನೆಯಲ್ಲಿರುವ ಅಪ್ಪ-ತಾತ ಇರಬಹುದು, ಸ್ಕೂಲು, ಕಾಲೇಜುಗಳಲ್ಲಿನ ಟೀಚರ್-ಲೆಕ್ಚರ್ ಇರಬಹುದು, ಅವರನ್ನೆಲ್ಲಾ ದಿನನಿತ್ಯ ನೋಡುವ ಹುಡುಗರು ನಾವೂ ಹೀಗೇ ಇರಬೇಕೇನೋ ಅಂದುಕೊಳ್ಳುವುದು ಸಹಜ. ಇಂದಿನ ಸಮಾಜದಲ್ಲಿ ಹಾಗಿದ್ದರೆ ಮಾತ್ರ ಗಂಡಸರು, ಪುರುಷರು ಎಂಬ ಭಾವನೆ ಹುಡುಗರಲ್ಲಿ ಬೆಳೆಯುತ್ತಿದೆ. ಇದು ಅಚ್ಚರಿಯೇನೂ ಅಲ್ಲ. ಏಕೆಂದರೆ, ಮಕ್ಕಳು ಹಾಗೂ ಯುವಕರು ಯಾವಾಗಲೂ ತಮ್ಮ ಸುತ್ತಮುತ್ತಲಿನವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಒಮ್ಮೆ ಕಲಿತ ಮೇಲೆ ಅದು ಅಭ್ಯಾಸ ಹಾಗೂ ಚಟವಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗದು. ಒಮ್ಮೆ ಚಟ ಶುರುವಾದ ಮೇಲೆ ಬಿಡಲಾಗದು. ಹೀಗೆ ಟೀನೇಜ್ ಹುಡುಗರು ಈ ಸರ್ಕಲ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆಮೇಲೆ ಕಥೆ ಮುಗಿದಂತೆಯೇ..!
