Water based cremation : ನೀರಿನಲ್ಲಿ ದೇಹ ದಹನ ಅಥವಾ ಅಕ್ವಾಮೇಷನ್. ಇದು ಹೊಸ ರೀತಿಯ ಅಂತ್ಯಕ್ರಿಯೆಯಾಗಿದೆ. ಪರಿಸರ ಸ್ನೇಹಿ ಆಗಿರುವ ಈ ಅಂತ್ಯಕ್ರಿಯೆ ಹೇಗೆ ನಡೆಯುತ್ತೆ? ದೇಹ ಕರಗೋದು ಹೇಗೆ? ಮಾಹಿತಿ ಇಲ್ಲಿದೆ. 

ಅಂತ್ಯಸಂಸ್ಕಾರ (Funeral)ದ ಸಂಪ್ರದಾಯ ಶತಶತಮಾನಗಳಿಂದ ಜಾರಿಯಲ್ಲಿದೆ. ಎಲ್ಲ ಕಡೆ ಮನುಷ್ಯನ ಸಾವಿನ ನಂತ್ರ ಶವವನ್ನು ಹೂಳಲಾಗುತ್ತದೆ ಇಲ್ಲವೆ ಸುಡಲಾಗುತ್ತದೆ. ಹಿಂದೆ ಕಟ್ಟಿಗೆಗಳನ್ನು ಬಳಸಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗ್ತಾಯಿತ್ತು. ಈಗ ಮಿಶನ್ ಬಳಕೆ ಮಾಡಲಾಗ್ತಿದೆ. ಕರೆಂಟ್ ಬಳಸಿ ಅಂತ್ಯಸಂಸ್ಕಾರ ಮಾಡಲಾಗ್ತಿದೆ. ಪರಿಸರ ರಕ್ಷಣೆ ಬಗ್ಗೆ ಜನರ ಚಿಂತನೆ ಈಗ ಗಂಭೀರವಾಗಿದೆ. ದಿನ ದಿನಕ್ಕೂ ಪರಿಸರ ಮಾಲಿನ್ಯ ಹೆಚ್ಚಾಗ್ತಿದೆ. ಹವಾಮಾನ ಬದಲಾವಣೆ ಬಿಕ್ಕಟ್ಟಿನಿಂದ ಜಗತ್ತು ನಾನಾ ಸಮಸ್ಯೆ ಎದುರಿಸುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಈಗ ಅಂತ್ಯಸಂಸ್ಕಾರದ ಸಂಪ್ರದಾಯ ಕೂಡ ಬದಲಾಗ್ತಿದೆ. ಪರಿಸರ ರಕ್ಷಣೆ ಬಗ್ಗೆ ಆಲೋಚನೆ ಮಾಡ್ತಿರುವ ಜನರು, ನೀರಿನ ದಹನಕ್ಕೆ ಮುಂದಾಗ್ತಿದ್ದಾರೆ. ಇದನ್ನು ಕ್ಷಾರೀಯ ಜಲವಿಚ್ಛೇದನೆ ಎಂದೂ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಇದಕ್ಕೆ ಅಕ್ವಾಮೇಷನ್ ಎಂದು ಹೆಸರಿದೆ.

ಅಕ್ವಾಮೇಷನ್ (Aquamation) ಅಂತ್ಯಸಂಸ್ಕಾರ ಅಂದ್ರೇನು? : 

ಸಾಂಪ್ರದಾಯಿಕ ದಹನಕ್ಕೆ ಪರಿಸರ ಸ್ನೇಹಿ ಪರ್ಯಾಯವಾಗಿ ಇದು ಹೊರಹೊಮ್ಮುತ್ತಿದೆ. ಈ ಪ್ರಕ್ರಿಯೆಯಲ್ಲಿ ಬಿಸಿನೀರು ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಮಿಶ್ರಣ ಬಳಸಲಾಗುತ್ತದೆ. ಇದರಲ್ಲಿ ದೇಹವನ್ನು ಕರಗಿಸಲಾಗುತ್ತದೆ. ದೇಹವನ್ನು ಶೇಕಡಾ 95 ರಷ್ಟು ನೀರು ಮತ್ತು ಶೇಕಡಾ 5 ರಷ್ಟು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಹೊಂದಿರುವ ಉಕ್ಕಿನ ತೊಟ್ಟಿಗೆ ಹಾಕಲಾಗುತ್ತದೆ. ಸರಿಯಾದ ತಾಪಮಾನ ಬಳಕೆ ಇಲ್ಲಿ ಬಹಳ ಮುಖ್ಯ. ಸುಮಾರು150 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದಕ್ಕೆ ಅಗತ್ಯವಿದೆ. ಒತ್ತಡವನ್ನು 10–20 ವಾತಾವರಣದಲ್ಲಿ ನಿರ್ವಹಿಸಲಾಗುತ್ತದೆ. ದೇಹ ಕರಗಲು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 3 ರಿಂದ 16 ಗಂಟೆಯೊಳಗೆ ದೇಹದ ಮೃದು ಅಂಗಗಳು ಕರಗುತ್ತವೆ. ದೇಹದ ಅಂಗಗಳು, ಅಮೈನೋ ಆಮ್ಲಗಳು, ಸಕ್ಕರೆಗಳು ಮತ್ತು ಲವಣಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ದ್ರವ ತುಂಬಾ ಸ್ವಚ್ಛವಾಗಿದ್ದು, ಅದನ್ನು ಒಳಚರಂಡಿ ಇದನ್ನು ಹಾಕ್ಬಹುದು. ಇದರಲ್ಲಿ ಯಾವುದೇ ಡಿಎನ್ಎ ಅಥವಾ ಅಂಗಾಂಶ ಇರುವುದಿಲ್ಲ. ಉಳಿದ ಮೂಳೆಗಳನ್ನು ಒಣಗಿಸಿ, 800-1000 ಡಿಗ್ರಿಗಳಲ್ಲಿ ಹುರಿಯಲಾಗುತ್ತದೆ ಮತ್ತು ಪುಡಿಮಾಡಲಾಗುತ್ತದೆ.

ರೆಕ್ಕೆ ಇಲ್ದಿರೋ ಹಾವು ನಿಜವಾಗ್ಲೂ ಗಾಳಿಯಲ್ಲಿ ಹಾರುತ್ತಾ?

ಇದು ಏಕೆ ಪರಿಸರ ಸ್ನೇಹಿ? : 

ಸಾಂಪ್ರದಾಯಿಕ ದಹನದಲ್ಲಿ ದೇಹಗಳನ್ನು ಸುಟ್ಟು ಬೂದಿ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ವಿಷಕಾರಿ ಅನಿಲಗಳನ್ನು ಗಾಳಿಯಲ್ಲಿ ಬಿಡುಗಡೆಯಾಗುತ್ತದೆ. ಒಂದು ಅಂತ್ಯಕ್ರಿಯೆಗೆ 400 ಲೀಟರ್ ಇಂಧನವನ್ನು ಸುಡಬೇಕು. ಹಾಗೆಯೇ 1.5 ಟನ್ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ದೇಹವನ್ನು ನೆಲದಲ್ಲಿ ಹೂಳಿದಾಗ, ನೀರಿನ ಮಾಲಿನ್ಯದ ಸಾಧ್ಯತೆಯಿದೆ. ನೀರಿನ ದಹನಕ್ಕೆ ಯಾವುದೇ ಸ್ಥಳ ಅಥವಾ ಶವಪೆಟ್ಟಿಗೆಯ ಅಗತ್ಯವಿಲ್ಲ. ಈ ಕ್ಷಾರೀಯ ಜಲವಿಚ್ಛೇದನೆ ಪರಿಸರ ಸ್ನೇಹಿಯಾಗಿದೆ. ಇದು ಗಾಳಿಯನ್ನು ಕಲುಷಿತಗೊಳಿಸುವುದಿಲ್ಲ. ನೀರನ್ನು ಕಲುಷಿತಗೊಳಿಸುವುದಿಲ್ಲ. ಅಕ್ವಾಮೇಷನ್ ಗೆ ಕೇವಲ 100 ಲೀಟರ್ ನೀರು ಸಾಕು. ಇದಕ್ಕೆ ಕಡಿಮೆ ವಿದ್ಯುತ್ ಬಳಸಲಾಗುತ್ತದೆ. ಇದು ಶೇಕಡಾ 90ರವರೆಗೆ ಇಂಧನ ಉಳಿಸುತ್ತದೆ.

Deep Water Bridge Building: ನೀರಿದ್ದರೂ ನದಿಗೆ ಎಂಜಿನೀಯರ್ಸ್ ಬ್ರಿಡ್ಜ್ ಹೇಗೆ ಕಟ್ತಾರೆ?

ವಿದೇಶದಲ್ಲಿ ಈ ಪ್ರಕ್ರಿಯೆ ಹೆಚ್ಚು ಜನಪ್ರಿಯವಾಗ್ತಿದೆ. 28 ಯುಎಸ್ ರಾಜ್ಯಗಳಲ್ಲಿ ಕಾನೂನುಬದ್ಧವಾಗಿ ಇದನ್ನು ಗುರುತಿಸಲ್ಪಟ್ಟಿದೆ. ಅಂತ್ಯಕ್ರಿಯೆ ವೇಳೆ ಆಯ್ಕೆ ನೀಡಲಾಗುತ್ತದೆ. ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿಯೂ ಇದು ಹೆಚ್ಚು ಜನಪ್ರಿಯವಾಗುತ್ತಿದೆ. ಸಾಕುಪ್ರಾಣಿ ಅಕ್ವಾಮೇಷನ್ ಪ್ರಸಿದ್ಧಿ ಪಡೆದಿದ್ದು, ಇದ್ರ ಮಾರುಕಟ್ಟೆ 845 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ.