ಈ ವಿಡಿಯೋದಲ್ಲಿ ನೀವು ಎಂದಿಗೂ ಊಹಿಸದ ಹಾವಿನ ರೂಪವನ್ನು ಕಾಣಬಹುದಾಗಿದ್ದು, ಇದು  ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. 

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಷಯ ಯಾವ ಟೈಂನಲ್ಲಾದರೂ ವೈರಲ್ ಆಗಬಹುದು. ಇದಕ್ಕೆ ಯಾವುದೇ ಸಮಯದ ಮಿತಿ ಅಥವಾ ಮಾನದಂಡವಿಲ್ಲ. ಜನಕ್ಕೆ ಇಷ್ಟವಾದರೆ ಅಥವಾ ಅವರಿಗೆ ಶಾಕಿಂಗ್ ಎನಿಸುವಂತಹ ಯಾವುದಾದರೂ ಅಂಶ ಕಂಡುಬಂದರೆ ಅಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತವೆ. ಕೆಲವೊಮ್ಮೆ ಫೋಟೋ, ಅದಕ್ಕೆ ಕೊಡುವ ಕ್ಯಾಪ್ಷನ್ ಸಹ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸುವಂತೆ ಮಾಡುತ್ತದೆ. ಇದೀಗ ಅಂತಹುದೆ ವಿಡಿಯೋ ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೀವು ಎಂದಿಗೂ ಊಹಿಸದ ಹಾವಿನ ರೂಪವನ್ನು ಕಾಣಬಹುದು.

ಕೆಲವರು ಹಾವನ್ನು ನೋಡುವುದಿರಲಿ ಹೆಸರು ಕೇಳಿಯೇ ಭಯಪಡುತ್ತಾರೆ. ಏಕೆಂದರೆ ಹಾವು ವಿಷಕಾರಿ ಜೀವಿಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲಿಯೂ ಕಾಳಿಂಗ ಸರ್ಪವನ್ನು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದೆಂದು ಹೇಳಲಾಗಿದೆ. ಆದರೆ ನಾವಿಂದು ಮಾತನಾಡುತ್ತಿರುವ ಹಾವು ಇವೆಲ್ಲವುಗಳಿಗಿಂತ ಭಿನ್ನವಾಗಿದೆ. ಹೇಗೆ ಅನ್ನೋದು ನಿಮಗಿಗಾಲೇ ಹೆಡ್‌ಲೈನ್ ನೋಡಿಯೇ ಗೊತ್ತಾಗಿರುತ್ತದೆ.

ಹೌದು, ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಹಾವು ನೂಡಲ್ಸ್ ತಿನ್ನುವುದನ್ನು ಕಾಣಬಹುದು. ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಮೇಲೆ ಬಾಣಲೆ ಇದೆ. ಬಾಣಲೆಯಲ್ಲಿ ಬೇಯಿಸಿದ ನೂಡಲ್ಸ್ ಇಡಲಾಗಿದೆ. ಆದರೆ ಈ ಹಾವು ಸಾಮಾನ್ಯ ಹಾವಲ್ಲ. ಏಕೆಂದರೆ ಇದು ನೂಡಲ್ಸ್ ತಿನ್ನಲು ಇಷ್ಟಪಡುತ್ತದೆ. ಹೌದು, ಈ ಹಾವು ಬುಸ್ ಬುಸ್ ಶಬ್ದ ಮಾಡುವ ಮೂಲಕ ನೂಡಲ್ಸ್ ತಿನ್ನುವುದನ್ನು ಕಾಣಬಹುದು.

ವಿಡಿಯೋ ನೋಡಿ ಸರ್‌ಪ್ರೈಸ್ ಆದ ಜನರು
ಈ ವಿಡಿಯೋ ನೋಡುತ್ತಿರುವ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಏಕೆಂದರೆ ಕಚ್ಚುವ ಈ ಜೀವಿ ಹೇಗೆ ಇಷ್ಟೊಂದು ಶಾಂತಿಯುತವಾಗಿ ನೂಡಲ್ಸ್ ತಿನ್ನುತ್ತಿದೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಕೆಲವರು ಇದು ಹಿಂದಿನ ಜನ್ಮದಲ್ಲಿ ಚೈನೀಸ್ ಆಗಿತ್ತೇನೋ ಎಂದು ಹೇಳುತ್ತಿದ್ದಾರೆ. ಅಂದಹಾಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ Instagramನಲ್ಲಿ ayub_rider28_official.follow ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ಅಕೌಂಟ್ ಅರ್ಷದ್ ಅಲಿ ಎಂಬುವವರ ಹೆಸರಿನಲ್ಲಿದೆ. 

View post on Instagram

ಇದು ಸಿಂಹದ ಕಥೆ…
ಈಗ ವಿಡಿಯೋದಲ್ಲಿ ಹಾವಿನ ಕಥೆ ಓದಿದ್ದಾಯ್ತು, ಇನ್ನು ಸಿಂಹ ಕಥೆ ನೋಡುವುದಾದರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮನುಷ್ಯ ಮತ್ತು ಸಿಂಹದ ನಡುವಿನ ಮುಖಾಮುಖಿ ಯಾವಾಗಲೂ ರೋಮಾಂಚನ ಮತ್ತು ಭಯದಿಂದ ಕೂಡಿರುತ್ತದೆ. ಆದರೆ ಈ ಬಾರಿ ಭಯಕ್ಕೆ ನಗುವಿನ ಛಾಯೆಯನ್ನು ಸೇರಿಸುವ ವಿಡಿಯೋವೊಂದು ಕೆಲವು ದಿನಗಳ ಹಿಂದೆ ಕಾಣಿಸಿಕೊಂಡಿದೆ. ಅಂದಹಾಗೆ ಘಟನೆಯು ತಡರಾತ್ರಿಯಲ್ಲಿ ಸಂಭವಿಸಿದೆ. ಸುತ್ತಲೂ ಮೌನವಿತ್ತು. ಬಹುಶಃ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಸ್ವಲ್ಪ ಸಮಯದವರೆಗೆ ಹೊರಗೆ ಹೋಗಿದ್ದ. ನಂತರ ಅವನಿಗೆ ಲಕ್ಷಾಂತರ ಜನರು ನೋಡುವ ಅಂತಹ ಕ್ಷಣದಲ್ಲಿ ತಾನು ಭಾಗಿಯಾಗುತ್ತೇನೆಂದು ತಿಳಿದಿರಲಿಲ್ಲ. ಆದ್ದರಿಂದ ಇಂದಿನ ಸುದ್ದಿಯಲ್ಲಿ ಈ ವಿಡಿಯೋದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

View post on Instagram

ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲಿ ತಡರಾತ್ರಿಯಾಗಿದೆ. ಕತ್ತಲೆ ಆವರಿಸಿದೆ ಮತ್ತು ದೂರದಿಂದ ನಾಯಿಗಳು ಬೊಗಳುವ ಶಬ್ದ ಕೇಳಿಬರುತ್ತಿದೆ. ಸೆಕ್ಯೂರಿಟಿ ನಿಧಾನವಾಗಿ ನಡೆದು ಒಂದು ಓಣಿಯ ಬಳಿ ಬರುತ್ತಾನೆ. ಎಲ್ಲವೂ ಸಾಮಾನ್ಯ ಎಂಬಂತೆ ಅವನು ಸಂಪೂರ್ಣವಾಗಿ ನಿರಾಳವಾಗಿರುತ್ತಾನೆ. ಆದರೆ ಅದೇ ಸಮಯದಲ್ಲಿ ಕಾಡಿನ ರಾಜ ಸಿಂಹ ನಿಧಾನವಾಗಿ ಓಣಿಯ ಹಿಂದಿನಿಂದ ಹೊರಬರುತ್ತದೆ.

ಸಿಂಹದ ಮೃದು ಘರ್ಜನೆ ನಾಯಿಗಳ ಬೊಗಳುವ ಶಬ್ದದಲ್ಲಿ ಕೇಳಿಸಲಿಲ್ಲ. ಹಾಗಾಗಿ ಸೆಕ್ಯೂರಿಟಿಗೆ ಇದರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಸೆಕ್ಯೂರಿಟಿ ಓಣಿಯ ಮೂಲೆಯಲ್ಲಿ ನಿಂತು ತನ್ನ ಜಿಪ್ ತೆರೆಯಲು ಸಿದ್ಧವಾದ ತಕ್ಷಣ ಇದ್ದಕ್ಕಿದ್ದಂತೆ ತನ್ನ ಮುಂದೆ ಸಿಂಹವೊಂದು ನಿಂತಿರುವುದನ್ನು ಕಂಡನು. ಈ ದೃಶ್ಯವು ತುಂಬಾ ಅಪಾಯಕಾರಿಯಾಗಿತ್ತು, ಸೆಕ್ಯೂರಿಟಿ ತಕ್ಷಣ ಭಯಭೀತನಾಗಿ ಜೋರಾಗಿ ಕಿರುಚುತ್ತಾ ಓಡಲು ಪ್ರಾರಂಭಿಸಿದನು. ಆದರೆ ಈ ಕಥೆಯಲ್ಲಿನ ದೊಡ್ಡ ತಿರುವು ಏನೆಂದರೆ ಸಿಂಹವೂ ಅದೇ ವೇಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಿಹೋಯಿತು. ಈ ದೃಶ್ಯವು ಆ ಸಮಯದಲ್ಲಿ ಭಯಾನಕ ಮತ್ತು ತಮಾಷೆಯಾಗಿತ್ತು. ಏಕೆಂದರೆ ನಾವು ಶಕ್ತಿ ಮತ್ತು ನಿರ್ಭಯತೆಯ ಸಂಕೇತವೆಂದು ಪರಿಗಣಿಸುವ ಸಿಂಹ ಮನುಷ್ಯನಂತೆಯೇ ಭಯಭೀತವಾಗಿತ್ತು.