ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ.
ಬೆಂಗಳೂರು: ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಪೂರ್ವ ಮಧ್ಯ ರೈಲ್ವೆಯು ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಾನಾಪುರ - ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು (03261) ಅಕ್ಟೋಬರ್ 11 ರಿಂದ ಡಿಸೆಂಬರ್ 27, 2025 ರವರೆಗೆ ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಗೆ ದಾನಾಪುರದಿಂದ ಹೊರಡುತ್ತದೆ ಮತ್ತು ಮಂಗಳವಾರ ರಾತ್ರಿ 9.30 ಗಂಟೆಗೆ ಯಶವಂತಪುರ ತಲುಪುತ್ತದೆ.
ಮರಳಿ ಬರುವಾಗ, ಈ ರೈಲು (03262) ಅಕ್ಟೋಬರ್ 14 ರಿಂದ ಡಿಸೆಂಬರ್ 30 ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ ಮತ್ತು ಗುರುವಾರ ಮಧ್ಯಾಹ್ನ 12 ಗಂಟೆಗೆ ದಾನಾಪುರ ತಲುಪುತ್ತದೆ. ಈ ರೈಲು ಪ್ರತಿ ದಿಕ್ಕಿನಲ್ಲಿಯೂ ಒಟ್ಟು ಹನ್ನೆರಡು ಟ್ರಿಪ್‌ಗಳು ಇರಲಿವೆ ಎಂದು ಪ್ರಕಟಣೆ ತಿಳಿಸಿದೆ.


