ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಗೆ, ರಿತೇಶ್ ಎಂಬಾತನೇ ವಿಜಯ್ ಎಂಬ ಇನ್ನೊಂದು ಪಾತ್ರ ಸೃಷ್ಟಿಸಿ ಪ್ರೀತಿಯ ನಾಟಕವಾಡಿದ್ದಾನೆ. ಹಂತ ಹಂತವಾಗಿ ಯುವತಿಯಿಂದ ₹7 ಲಕ್ಷ ಹಣ ದೋಚಿ, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಈತನ ಡಬಲ್ ರೋಲ್ ಆಟ ರಕ್ಷಾ ಬಂಧನದ ದಿನ ಬಯಲಾಗಿದೆ.

ಬೆಂಗಳೂರಿನಲ್ಲೊಬ್ಬ ಭಯಂಕರ ಅಸಾಮಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಸ್ನೇಹಿತ ಮತ್ತು ಪ್ರೇಮಿಯಾಗಿ ಅವನೇ ಡಬಲ್ ರೋಲ್ ಮಾಡುತ್ತಾ ವಂಚನೆ ಮಾಡಿದ್ದಾನೆ. ಉಂಡೂ ಹೋದ, ಕೊಂಡೂ ಹೋದ ಎನ್ನುವಂತೆ ಯುವತಿಯಿಂದ ಲಕ್ಷಾಂತರ ರೂ. ಹಣ ಪಡೆದು, ಆಕೆಯೊಂದಿಗೆ ಮದುವೆಯಾಗುವುದಾಗಿ ಲೈಂಗಿಕವಾಗಿಯೂ ಬಳಕೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ರಿತೇಶ್@ಧನುಷ್ ಎಂಬಾತನ ವಿರುದ್ಧ ಡಬಲ್ ರೋಲ್ ನಟನೆ ಮಾಡಿದ್ದಾನೆ. ಈ ಹಿಂದೆ ಬ್ಯಾಂಕ್ ಎಂಪ್ಲಾಯ್ ಆಗಿದ್ದ ಯುವತಿಗೆ ರಿತೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಾನೆ. ಇಬ್ಬರೂ ಚಾಟಿಂಗ್ ಮಾಡುತ್ತಾ ಸ್ನೇಹಿತರಾಗಿದ್ದು, ಕೊನೆಗೆ ಪರಸ್ಪರ ಫೋನ್ ನಂಬರ್ ಕೂಡ ಶೇರ್ ಮಾಡಿಕೊಂಡಿದ್ದರು. ಆದರೆ ಇಬ್ಬರೂ ಒಂದು ಸಲ ಕೂಡ ಭೇಟಿಯಾಗಿರಲಿಲ್ಲ. ದಿನ ಕಳೆದಂತೆ ತಮ್ಮಿಬ್ಬರ ಸ್ನೇಹ ಗಟ್ಟಿಯಯಾಗಿದ್ದು, ಇಬ್ಬರೂ ತಮ್ಮ ಕಷ್ಟ-ಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಈ ವೇಳೆ ಯುವತಿಗೆ ವಂಚನೆ ಮಾಡಲು ಯೋಜನೆ ರೂಪಿಸಿದ ರಿತೇಶ್ ಯುವತಿ ಬಳಿ ಕಷ್ಟ ಹೇಳಿಕೊಂಡಿದ್ದಾನೆ.

ಮಗನಿಗೆ ಹುಷಾರಿಲ್ಲವೆಂದು ಹಣ ಕೇಳಿದ

ತನ್ನ ಪುತ್ರನಿಗೆ ಹುಷಾರಿಲ್ಲ ಹಣ ಬೇಕಿದೆ ಎಂದು ಯುವತಿಗೆ ಹೇಳಿದ್ದನು. ಇದಾದ ಬಳಿಕ ನೀನು ಹಣ ಕೊಡುವುದಿದ್ದರೆ ನನ್ನ ಸ್ನೇಹಿತ ವಿಜಯ್ ಎಂಬಾತ ನಿನ್ನ ಬಳಿ ಬರ್ತಾನೆ, ಆತನಿಗೆ ನೀನು ಹಣ ಕೊಟ್ಟು ಕಳುಹಿಸು ಎಂದು ಹೇಳಿದ್ದನು. ಇದೇ ರೀತಿ ಬಂದಿದ್ದ ವಿಜಯ್‌ಗೆ ಯುವತಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾಂಪ್ಲೆಕ್ಸ್ ಬಳಿ ₹1.5 ಲಕ್ಷದಷ್ಟು ಹಣ ನೀಡಿ ಸಹಾಯ ಮಾಡಿದ್ದಳು. ಇನ್ನು ರಿತೇಶ್ ತನ್ನ ಸ್ನೇಹಿತನೆಂದು ವಿಜಯ್ ನಂಬರ್ ಅನ್ನು ಯುವತಿಗೆ ಕೊಟ್ಟಿದ್ದನು. ಇನ್ನು ಯುವತಿ ಬಳಿ ವಿಜಯ್ ನಂಬರ್ ಇದ್ದ ಕಾರಣ, ಇಬ್ಬರೂ ಮಾತನಾಡುತ್ತಾ, ಚಾಟಿಂಗ್ ಮಾಡುತ್ತಾ ಸಲುಗೆ ಬೆಳೆಸಿಕೊಂಡಿದ್ದಾರೆ. ಇದಾದ ನಂತರ ವಿಜಯ್ ನೋಡಲು ಚೆನ್ನಾಗಿದ್ದಾನೆ ಎಂದು ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಕ್ಕೂ ಮುಂದಾಗಿದ್ದರು.

ವಿಜಯ್ ಜೊತೆಗೆ ಸಲುಗೆ ಬೆಳೆಸಿಕೊಂಡ ಯುವತಿ

ವಿಜಯ್ ಎಂಬ ಹೆಸರಲ್ಲಿ ಯುವತಿಯೊಂದಿಗೆ ಸಲುಗೆಯಿಂದ ಇದ್ದ ಆರೋಪಿ ರಿತೇಶ್, ಹೇಗೋ ಮದುವೆ ಮಾಡಿಕೊಳ್ತೀವಿ ಅಲ್ವಾ ಎಂದು ಯುವತಿಯನ್ನು ಖಾಸಗಿ ರೂಮಿಗೆ ಕರೆಸಿಕೊಂಡು ಆಕೆಯೊಂದಿಗೆ ದೈಹಿಕವಾಗಿ ಸಂಬಂಧ ಬೆಳೆಸಲು (ಲೈಂಗಿಕ ಸಂಪರ್ಕಕ್ಕೂ) ಮುಂದಾಗಿದ್ದನು. ಆದರೆ, ಇದಕ್ಕೆ ಯುವತಿ ಸಮ್ಮತಿ ಕೊಡದ ಹಿನ್ನೆಲೆಯಲ್ಲಿ ಆಕೆಯ ಮುಂದೆ ಕ್ಷಮೆಯನ್ನೂ ಕೇಳಿ ಅಲ್ಲಿಂದ ಹೋಗಿದ್ದನು. ಇದಾದ ಬಳಿಕ, ಪುನಃ ರಿತೇಶ್‌ಗೆ ಕಷ್ಟ ಇದೆ ನಾನು ಹಣ ಕೊಟ್ಟಿದ್ದೇನೆ. ನೀನು ಆತನಿಗೆ ಸಾಧ್ಯವಾದರೆ ಹಣಕಾಸಿನ ಸಹಾಯ ಮಾಡು ಎಂದು ಯುವತಿಗೆ ಹೇಳಿದ್ದಾನೆ.

ಇನ್ನು ತಾನು ಮದುವೆ ಮಾಡಿಕೊಳ್ಳುವ ಹುಡುಗನ ಸ್ನೇಹಿತ ಕಷ್ಟದಲ್ಲಿದ್ದಾನೆ ಎಂದು ಯುವತಿ ತನ್ನ ಚಿನ್ನಾಭರಣ ಅಡವಿಟ್ಟು ರಿತೇಶ್‌ಗೆ ಆನ್ ಲೈನ್ ಪೇಮೆಂಟ್ ಮಾಡಿದ್ದಳು. ಇದಾದ ನಂತರ ರಿತೇಶ್ ತನಗೆ ಅಣ್ಣನಿದ್ದಂತೆ ಎಂದು ರಕ್ಷಾ ಬಂಧನ ಶುಭಾಷಯ ಹೇಳಲು ಕರೆ ಮಾಡಿದ್ದಾಳೆ. ಆಗಲೇ ರಿತೇಶ್ ಸಿಕ್ಕಿಬಿದ್ದಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ರಿತೇಶ್‌ಗೆ ರಕ್ಷಾ ಬಂಧನ ವಿಶ್ ಮೆಸೇಜ್ ಮಾಡಿದ್ದಳು. ಈ ವೇಳೆ ನೀನು ಯಾರು ಗೊತ್ತಿಲ್ಲ ಎಂದಿದ್ದ ರಿತೇಶ್ ಹೇಳಿದ್ದಾನೆ. ಈ ವೇಳೆ ಕಾಲ್ ಮಾಡಿದಾಗ ಧ್ವನಿಯ ಮೂಲಕ ವಿಚಾರ ಬೆಳಕಿಗೆ ಬಂದಿದೆ.

ರಿತೇಶನೇ, ವಿಜಯ್‌ನ ರೀತಿ ನಟಿಸಿದ

ಆಗ ತನ್ನ ಮದುವೆಯಾಗುವ ಹುಡುಗ ವಿಜಯ್ ಹಾಗು ರಿತೇಶ್ ಒಬ್ಬನೆ ಎಂದು ಖಾತರಿಯಾಗಿದೆ. ರಿತೇಷ್, ವಿಜಯ್‌ನ ರೀತಿ ನಟಿಸಿ ಯುವತಿಯ ಜೊತೆ ಹಣ ದೋಚಿದ್ದನು. ಡಬಲ್ ರೋಲ್ ಮಾಡಿ ತಾನು ಮದ್ವೆಯಾಗುವ ಯುವತಿಯಿಂದಲೇ ಹಣ ದೋಚಿದ್ದನು. ಹಂತ ಹಂತವಾಗಿ ₹7 ಲಕ್ಷ ಹಣ ದೋಚಿದ್ದನು. ಸದ್ಯ ರಿತೇಶ್ @ ಧನುಷ್ @ ವಿಜಯ್ ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.