ತಿರುಪತಿ ವೆಂಕಟೇಶ್ವರ ದೇವಸ್ಥಾನ ಭಕ್ತರೇ ಗಮನಿಸಿ. ಈ ದಿನ ಬರೋಬ್ಬರಿ 12 ಗಂಟೆ ತಿರುಮಲ ವೆಂಕಟೇಶ್ವರ ದೇವಸ್ಥಾನ ಬಾಗಿಲು ಮುಚ್ಚಲಿದೆ. ಯಾರಿಗೂ ಪ್ರವೇಶವಿಲ್ಲ. ಯಾವ ದಿನ, ಕಾರಣವೇನು?
ತಿರುಪತಿ (ಆ.28) ತಿರುಪತಿ ತಿರುಮಲ ದೇವಸ್ಥಾನಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ದೇಶದ ವಿದೇಶಗಳಿಂದ ಭಕ್ತರು ಆಗಮಿಸಿ ಪ್ರಸಾದ ಪಡೆದು ಧನ್ಯರಾಗುತ್ತಾರೆ. ಮುಂಜಾನೆಯಿಂದ ರಾತ್ರಿವರೆಗೂ ತಿರುಮಲ ವೆಂಕಟೇಶ್ವರ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಾನೆ. ಆದರೆ ಸೆಪ್ಟೆಂಬರ್ 7 ರಂದು ಬರೋಬ್ಬರಿ 12 ಗಂಟೆ ಕಾಲ ತಿರುಮಲ ವೆಂಕಟೇಶ್ವರ ದೇವಸ್ಥಾನ ಸಂಪೂರ್ಣ ಮುಚ್ಚಲಾಗುತ್ತದೆ. 12 ಗಂಟೆಗಳ ಯಾರಿಗೂ ಪ್ರವೇಶವಿಲ್ಲ. ಭಕ್ತರಿಗೆ ಸೆಪ್ಟೆಂಬರ್ 8 ರಿಂದ ತಿರುಮಲ ದೇವಸ್ಥಾನ ಪ್ರವೇಶ ಮುಕ್ತವಾಗಲಿದೆ.
ತಿರುಮಲ ದೇವಸ್ಥಾನ ಬಂದ್ ಮಾಡಲು ಕಾರಣವೇನು?
ಸೆಪ್ಟೆಂಬರ್ 7 ರಂದು ಚಂದ್ರ ಗ್ರಹಣ ಘಟಿಸಲಿದೆ. ರಾತ್ರಿ 9.30 ರಿಂದ ಮಧ್ಯರಾತ್ರಿ 1.31ರ ವರಗೆ ಚಂದ್ರಗ್ರಹಣ ಇರಲಿದೆ. ಚಂದ್ರಗ್ರಹಣ ಕಾರಣದಿಂದ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನು ಮುಚ್ಚಲಾಗುತ್ತಿದೆ. ಭಕ್ತರು ಸೇರಿದಂತೆ ಯಾರಿಗೂ ಪ್ರವೇಶ ಇರುವುದಿಲ್ಲ. 12 ಗಂಟೆ ಕಾಲ ದೇವಸ್ಥಾನ ಬಂದ್ ಆಗಲಿದೆ.
ಎಷ್ಟು ಗಂಟೆಯಿಂದ ಬಂದ್, ಯಾವಾಗ ಭಕ್ತರ ಪ್ರವೇಶಕ್ಕೆ ಅವಕಾಶ?
ಸೆಪ್ಟೆಂಬರ್ 7ರ ಮಧ್ಯಾಹ್ನ 3.30 ರಿಂದ ತಿರುಮಲ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಇನ್ನು ಸೆಪ್ಟೆಂಬರ್ 8ರ ಮುಂಜಾನೆ 3 ಗಂಟೆಗೆ ದೇವಸ್ಥಾನದ ಬಾಗಿಲು ತರೆಯಲಾಗುತ್ತದೆ. ಆದರೆ ಭಕ್ತರ ಪ್ರವೇಶಕ್ಕೆ ಸೆಪ್ಟೆಂಬರ್ 8ರ ಬೆಳಗ್ಗೆ 6 ಗಂಟೆಯಿಂದ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಈಗಾಗಲೇ ಬುಕಿಂಗ್ ಮಾಡಿರುವ ಸೇವೆಗಳನ್ನೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ರದ್ದು ಮಾಡಿದೆ.
ವರ್ಷದ ಕೊನೆಯ ಚಂದ್ರಗ್ರಹಣ ಶನಿಯ ರಾಶಿಯಲ್ಲಿ, ಈ 3 ರಾಶಿಗೆ ಸಂಕಷ್ಟ, ಕಂಟಕ
ಅನ್ನದಾನ ಕೂಡ ಬಂದ್
ತಿರುಮಲ ದೇವಸ್ಥಾನ ಮಾತ್ರವಲ್ಲ ಅನ್ನದಾನವೂ ನಿಲ್ಲಿಸಲಾಗುತ್ತದೆ. ಚಂದ್ರಗ್ರಹಣ ಕಾರಣದಿಂದ ಸೆಪ್ಟೆಂಬರ್ 7 ರ ಮಧ್ಯಾಹ್ನ 3 ಗಂಟೆಯಿಂದ ಸೆಪ್ಟೆಂಬರ್ 8ರ ಬೆಳಗ್ಗೆ 8 ಗಂಟೆ ವರೆಗೆ ಅನ್ನಧಾನ ಪ್ರಸಾದ ವಿತರಣೆ ನಿಲ್ಲಿಸಲಾಗುತ್ತದೆ. ಹೀಗಾಗಿ ಭಕ್ತರು ಸಹಕರಿಸಬೇಕಾಗಿ ಟಿಟಿಡಿ ಮನವಿ ಮಾಡಿದೆ. ಆದರೆ ಇದೇ ವೇಳೆ ಯಾರೇ ಭಕ್ತರು ಹಸಿವಿನಿಂದ ಬಳಲಬಾರದು ಅನ್ನೋ ಕಾರಣಕ್ಕೆ ಟಿಟಿಡಿ 30,000ಕ್ಕೂ ಹೆಚ್ಚು ಪ್ಯಾಕೆಟ್ ಆಹಾರವನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಿದೆ.
ಶುದ್ಧೀಕರಣದ ಬಳಿಕ ದೇವಸ್ಥಾನ ಬಾಗಿಲು ಓಪನ್
ಚಂದ್ರ ಗ್ರಹಣ ರಾತ್ರಿ 1.31ಕ್ಕೆ ಅಂತ್ಯಗೊಳ್ಳಲಿದೆ. ಬಳಿಕ ತಿರುಮಲ ದೇವಸ್ಥಾನದ ಶುದ್ಧೀಕರಣ ನಡೆಯಲಿದೆ. ಪುಣ್ಯವಚನ ಕಾರ್ಯಗಳ ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.
