ದೆಹಲಿಯಲ್ಲಿ ಬೀದಿ ನಾಯಿಗಳನ್ನು ಊರ ಹೊರಗಿನ ಶೆಡ್‌ಗಳಿಗೆ ಸ್ಥಳಾಂತರದ ಬಗ್ಗೆ ಆ.11 ರಂದು ದ್ವಿಸದಸ್ಯ ಪೀಠ ನೀಡಿದ್ದ ಆದೇಶ ತಡೆ ಹಿಡಿಯಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.

ನವದೆಹಲಿ: ದೆಹಲಿಯಲ್ಲಿ ಬೀದಿ ನಾಯಿಗಳನ್ನು ಊರ ಹೊರಗಿನ ಶೆಡ್‌ಗಳಿಗೆ ಸ್ಥಳಾಂತರದ ಬಗ್ಗೆ ಆ.11 ರಂದು ದ್ವಿಸದಸ್ಯ ಪೀಠ ನೀಡಿದ್ದ ಆದೇಶ ತಡೆ ಹಿಡಿಯಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಪ್ರಕಟಿಸಲಿದೆ.

ಅ.11ರಂದು ದ್ವಿಸದಸ್ಯ ಪೀಠ ನೀಡಿದ್ದ ತೀರ್ಪಿಗೆ ವಕೀಲರ ಆಕ್ಷೇಪ ಹಿನ್ನೆಲೆ ಆ.13ರಂದು ಸುಪ್ರೀಂನ ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾವಾಗಿತ್ತು. ಆ.14 ರಂದು ನ್ಯಾ। ವಿಕ್ರಮ್ ನಾಥ್‌ ನೇತೃತ್ವದ ಪೀಠ ತೀರ್ಪು ಆ.11ರ ಆದೇಶಕ್ಕೆ ತಡೆ ನೀಡಬೇಕೇ? ಬೇಡವೇ? ಎನ್ನುವ ಕುರಿತು ವಾದ ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಹೀಗಾಗಿ ಶುಕ್ರವಾರ ಬೀದಿ ನಾಯಿಗಳ ಭವಿಷ್ಯದ ತೀರ್ಪು ಹೊರ ಬೀಳಲಿದೆ.

ನಟ- ನಟಿಯರು ಆಕ್ಷೇಪ

ದೆಹಲಿಯ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಕಾಂಗ್ರೆಸ್ ರಾಹುಲ್ గాంಧಿ, ಪ್ರಿಯಾಂಕಾ ಗಾಂಧಿ, ನಟ- ನಟಿಯರು ಹಾಗೂ ಆಕ್ಷೇಪಿಸಿದ್ದಾರೆ. ದಿಲ್ಲಿಯ ಇಂಡಿಯಾ ಗೇಟಲ್ಲಿ ಜನರು ಪ್ರತಿಭಟಿಸಿದ್ದು, ಅವರ ಮೇಲೆ ಎಫ್‌ಐಆ‌ರ್ ದಾಖಲಾಗಿದೆ.

ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, 'ಈ ತೀರ್ಪಿ ನಿಂದಾಗಿ ಸುಪ್ರೀಂ ದಶಕಗಳ ಮಾನವೀಯ ನೀತಿಯಿಂದ ಹಿಂದಕ್ಕೆ ಸರಿದಿದೆ. ಈ ಧ್ವನಿರಹಿತ ಆತ್ಮ ಅಳಿಸಲು ಅವು ಸಮಸ್ಯೆ ಅಲ್ಲ, ಆಶ್ರಯಗಳು, ಸಂತಾನಶಕ್ತಿಹರಣ, ಲಸಿಕೆ, ಆರೈಕೆಯು ಯಾವುದೇ ಕ್ರೌರ್ಯವಿಲ್ಲದೆ ಬೀದಿಗಳನ್ನು ರಕ್ಷಿಸಬಹುದು. ಇವುಗಳನ್ನು ಇತರೆಡೆಗೆ ಕಳುಹಿಸು ವುದು ಕ್ರೂರ' ಎಂದಿದ್ದಾರೆ.

ಪ್ರಿಯಾಂಕಾ ಅಪಸ್ವರ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಆಕ್ಷೇಪಿಸಿದ್ದು, 'ಕೆಲವೇ ವಾರಗಳಲ್ಲಿ ನಗರದಲ್ಲಿನ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸುವುದು ಭಯಾನಕ ಅಮಾನವೀಯ ವರ್ತನೆ. ಅವುಗಳಿಗೆ ಬೇಕಾದಷ್ಟು ಆಶ್ರಯ ತಾಣಗಳು ಅಸ್ತಿತ್ವದಲ್ಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಖಂಡಿತವಾಗಿಯೂ ಬೇರೆ ವಿಧಾನಗಳಿರುತ್ತವೆ. ನಾಯಿಗಳು ಅತ್ಯಂತ ಸೌಮ್ಯ ಜೀವಿಗಳು, ಈ ರೀತಿಯ ಕ್ರೌರ್ಯಕ್ಕೆ ಅರ್ಹವಲ್ಲ' ಎಂದಿದ್ದಾರೆ.