spicejet flight loses wheel lands safelyಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದ ಚಕ್ರಗಳು ಟೇಕ್‌ಆಫ್‌ ವೇಳೆ ಬಿದ್ದುಹೋಗಿದ್ದವು. ಚಕ್ರಗಳು ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇನಲ್ಲಿ ಪತ್ತೆಯಾದ ನಂತರ ಮುಂಬೈ ಏರ್‌ಪೋರ್ಟ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿತ್ತು. 

ಮುಂಬೈ (ಸೆ.12): ವಿಮಾನ ಟೇಕ್‌ಆಫ್‌ ಆದ ಬಳಿಕ ಅದರ ಚಕ್ರಗಳು ರನ್‌ವೇನಲ್ಲಿ ಪತ್ತೆಯಾಗಿದ್ದ ಕಾರಣದಿಂದ ಮುಂಬೈ ಏರ್‌ಪೋರ್ಟ್‌ನಲ್ಲಿ ಪೂರ್ಣ ಪ್ರಮಾಣದ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಕಾಂಗ್ಲಾ ಹಾಗೂ ಮುಂಬೈ ನಡುವೆ ಸಂಚಾರ ಮಾಡುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನದ ಚಕ್ರಗಳು ಟೇಕ್‌ಆಫ್‌ ಆಗುವ ವೇಳೆ ಬಿದ್ದು ಹೋಗಿದ್ದವು. ಕಾಂಡ್ಲಾದಿಂದ ವಿಮಾನ ಮುಂಬೈಗೆ ಹೊರಟಿತ್ತು. ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಚಕ್ರಗಳು ಪತ್ತೆಯಾಗಿದ್ದರಿಂದ ಮುಂಬೈ ಏರ್‌ಪೋರ್ಟ್‌ಗೆ ಅಲರ್ಟ್‌ ನೀಡಲಾಗಿತ್ತು. ಇದರಿಂದಾಗಿ ಮುಂಬೈ ಏರ್‌ಪೋರ್ಟ್‌ ಸಂಜೆ 5 ಗಂಟೆಯ ವರೆಗೆ ತುರ್ತುಪರಿಸ್ಥಿತಿ ಘೋಷಣೆ ಮಾಡಿತ್ತು. ಆದರೆ, ಅದೃಷ್ಟವಶಾಪ್‌ ಸ್ಪೈಸ್‌ ಜೆಟ್‌ ವಿಮಾನ ಸೇಫ್‌ ಆಗಿ ಲ್ಯಾಂಡ್‌ ಆಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್‌ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಟ್ ವಿಮಾನ ಲ್ಯಾಂಡ್‌ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.