ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಗೌರಿಶಂಕರ್ ಅಗ್ರಹಾರಿ ಅವರದ್ದು ಎನ್ನಲಾದ ಖಾಸಗಿ ವಿಡಿಯೋವೊಂದು ವೈರಲ್ ಆಗಿದೆ. ಇದು ತನ್ನನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ಎಂದು ಅಗ್ರಹಾರಿ ಆರೋಪಿಸಿದ್ದಾರೆ.
ಸಿದ್ಧಾರ್ಥ ನಗರ: ಉತ್ತರ ಪ್ರದೇಶದದಲ್ಲಿ ಬಿಜೆಪಿ ನಾಯಕರೊಬ್ಬರ ಖಾಸಗಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಉತ್ತರ ಪ್ರದೇಶ ರಾಜಕೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ಧಾರ್ಥ ನಗರದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಗೌರಿಶಂಕರ್ ಅಗ್ರಹಾರಿ ಅವರದ್ದು ಎನ್ನಲಾದ ವಿಡಿಯೋ ಹರಿದಾಡುತ್ತಿದೆ. ಮಗಳ ವಯಸ್ಸಿನ ಯುವತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವಿಡಿಯೋ ಇದಾಗಿದೆ. ಇದೊಂದು ಎಡಿಟೆಡ್ ವಿಡಿಯೋ ಎಂದು ಗೌರಿಶಂಕರ್ ಹೇಳಿದ್ದಾರೆ.
ರಾಜಕಾರಣದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ರಾಜಕೀಯವಾಗಿ ನನ್ನನ್ನು ಕುಗ್ಗಿಸುವ ಪ್ರಯತ್ನ ಇದಾಗಿದೆ. ನನ್ನ ಗೌರವಕ್ಕೆ ಧಕ್ಕೆಯನ್ನುಂಟು ಮಾಡಲು ಇಂತಹ ಎಡಿಟೆಡ್ ಅಥವಾ ಮಾರ್ಫ್ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಇದೆಲ್ಲವನ್ನು ಎದುರಿಸುವ ಧೈರ್ಯ ನನಗಿದೆ ಎಂದು ಗೌರಿಶಂಕರ್ ಹೇಳಿದ್ದಾರೆ.
ವಿಡಿಯೋ ಬಗ್ಗೆ ಬಿಜೆಪಿ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, 2023ರಿಂದ ಗೌರಿಶಂಕರ್ ಪಕ್ಷದ ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿಲ್ಲ ಎಂದು ಹೇಳುವ ಮೂಲಕ ಈ ಪ್ರಕರಣದಿಂದ ಕಮಲ ಪಕ್ಷ ಅಂತರ ಕಾಯ್ದುಕೊಂಡಿದೆ. ಆದ್ರೆ ಗೌರಿಶಂಕರ್ ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸಿದ್ಧಾರ್ಥ ನಗರದ ಬಿಜೆಪಿ ಜಿಲ್ಲಾಧ್ಯಕ್ಷ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತ್ರಿವಳಿಗೆ ಜನ್ಮ ನೀಡಿದ 5 ವರ್ಷದ ನಂತರ 4 ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಗಾರೆ ಕೆಲಸ ಮಾಡ್ತಿದ್ದ ತಾಯಿ
ಬಿಜೆಪಿ ನಾಯಕರೊಬ್ಬರು, ಈ ಪ್ರಕರಣ ಸಂಬಂಧ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ. ವೈರಲ್ ಆಗುತ್ತಿರುವ ವಿಡಿಯೋ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆ ಸೊಂಟಕ್ಕೆ ಕೈ ಹಾಕಿ ಬಾ ಕುಳಿತುಕೋ ಎಂದ ಪ್ರಯಾಣಿಕ: ವಿಡಿಯೋ ವೈರಲ್
