ಗಲಭೆಗೆ ಒಳಗಾದ ನಂತರ ಮೊದಲ ಬಾರಿ ಮಣಿಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಲಭೆಪೀಡಿತ ಸ್ಥಳಗಳಲ್ಲಿ ಹೆಲಿಕಾಪ್ಟರ್‌ ಬದಲು ರಸ್ತೆ ಮಾರ್ಗದಲ್ಲೇ ಸಾಗಿದ್ದು ವಿಶಷವಾಗಿತ್ತು.

ಇಂಫಾಲ: ಗಲಭೆಗೆ ಒಳಗಾದ ನಂತರ ಮೊದಲ ಬಾರಿ ಮಣಿಪುರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಗಲಭೆಪೀಡಿತ ಸ್ಥಳಗಳಲ್ಲಿ ಹೆಲಿಕಾಪ್ಟರ್‌ ಬದಲು ರಸ್ತೆ ಮಾರ್ಗದಲ್ಲೇ ಸಾಗಿದ್ದು ವಿಶಷವಾಗಿತ್ತು.

ಇಂಫಾಲಕ್ಕೆ ಮೋದಿ ವಿಮಾನದಲ್ಲಿ ಬಂದ ನಂತರ ಹೆಲಿಕಾಪ್ಟರಲ್ಲಿ ಅವರು ಚುರಾಚಾಂದ್‌ಪುರಕ್ಕೆ ತೆರಳಬೇಕಿತ್ತು. ಆದರೆ ಭಾರಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸದಂತೆ ಅಧಿಕಾರಿಗಳು ಪ್ರಧಾನಿ ಮೋದಿಗೆ ಸಲಹೆ ನೀಡಿದರು. ಆಗ ಮೋದಿ ರಸ್ತೆ ಮೂಲಕ ತಲುಪಲು ನಿರ್ಧರಿಸಿ ಸುಮಾರು 1.5 ತಾಸು ಕಾಲ ಕಾರಲ್ಲೇ ಸಾಗಿದರು.

ಬಳಿಕ ಚುರಾಚಾಂದ್‌ಪುರಕ್ಕೆ ಬಂದ ಅವರು, ‘ಮಣಿಪುರದ ಜನರ ಮನೋಭಾವಕ್ಕೆ ನಾನು ನಮಸ್ಕರಿಸುತ್ತೇನೆ. ಇಷ್ಟು ಭಾರೀ ಮಳೆಯಲ್ಲೂ ನೀವು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ. ನನ್ನ ಹೆಲಿಕಾಪ್ಟರ್ ಹಾರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಬಂದೆ. ದಾರಿಯುದ್ದಕ್ಕೂ ನಾನು ಕಂಡ ಪ್ರೀತಿ ಮತ್ತು ವಾತ್ಸಲ್ಯ, ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದ ಜನರು ಹಾಗೂ ಈ ಕ್ಷಣವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ’ ಎಂದು ಮಳೆಯನ್ನೂ ಲೆಕ್ಕಿಸದೆ ನೆರೆದಿದ್ದ ಸಾವಿರಾರು ಜನಸಮೂಹವನ್ನು ಉದ್ದೇಶಿಸಿ ಹೇಳಿದರು.

 ರಸ್ತೆ ಮೂಲಕ ಮಣಿಪುರದ ಚುರಚಂದಾಪುರಕ್ಕೆ ಮೋದಿ

ಇಂಫಾಲ  ಹಿಂಸಾಚಾರ ಘಟನೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ.ಮಣಿಪುರದ ಚುರಚಂದಾಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಶಾಂತಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ನಿಮ್ಮ ಜೊತೆಗೆ ನಾನಿದ್ದೇನೆ. ಜೊತೆಯಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ ಎಂದಿದ್ದಾರೆ. 

ವಿಶೇಷ ಅಂದರೆ ಮೋದಿ ಮಣಿಪುರ ಭೇಟಿ ಭಾರಿ ಚರ್ಚೆಯಾಗಿತ್ತು. ಜೊತೆಗೆ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಇಂದು ಬೆಳಗ್ಗೆ ಅಧಿಕಾರಿಗಳ ತಂಡ, ಮಣಿಪುರದ ಚುರಚಂದಾಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಅಸಾಧ್ಯ ಎಂದಿದೆ. ಇಷ್ಟೇ ರಸ್ತೆ ಮಾರ್ಗ ಮೂಲಕ ಸುದೀರ್ಘ ಪ್ರಯಾಣ ಮಾಡಬೇಕು ಎಂದು ಮಾಹಿತಿ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ರಸ್ತೆ ಮಾರ್ಗ ಮೂಲಕ ಪ್ರಯಾಣಿಸಿದ್ದಾರೆ.