ಭಾರತದಲ್ಲಿ ಒಂದು ಚಹಾಗೆ ಒಂದು ಸಾವಿರ ರೂಪಾಯಿ. ಭಾರತದಲ್ಲಿ ವಸ್ತುಗಳು ಅಗ್ಗದಲ್ಲಿ ಸಿಗುತ್ತದೆ ಎಂದು ಬಂದರೆ ಇಲ್ಲಿ ನಾನು ಬಡವನಾಗಿದ್ದೇನೆ ಎಂದು ಭಾರತೀಯ ಮೂಲದ ದುಬೈ ವ್ಲಾಗರ್ ವಿಡಿಯೋ ಮೂಲಕ ಹೇಳಿದ್ದಾರೆ.

ಮುಂಬೈ (ಆ.16) ಭಾರತದ ಹಿಂದಿನಂತೆ ಅಗ್ಗವಾಗಿಲ್ಲ. ಇಲ್ಲಿ ಪ್ರತಿ ವಸ್ತುಗಳ ಬೆಲೆ ದುಬಾರಿಯಾಗಿದೆ. ಇಲ್ಲಿನ ಜನ ಅಷ್ಟೊಂದು ಶ್ರೀಮಂತರಾ? ಒಂದು ಚಹಾಗೆ ಒಂದು ಸಾವಿರ ರೂಪಾಯಿ ಪಾವತಿ ಮಾಡಿದೆ. ಪ್ರವಾಸಕ್ಕೆ ಲಕ್ಷ ಲಕ್ಷ ರೂಪಾಯಿ ತಂದರೂ ಭಾರತದಲ್ಲಿ ನಾನು ಬಡವನಾದೆ ಎಂದು ಭಾರತೀಯ ಮೂಲದ ದುಬೈ ವ್ಲಾಗರ್ ಪರೀಕ್ಷಿತ್ ಬಲೂಚ್ ಹೇಳಿದ್ದಾನೆ. ಭಾರತದಲ್ಲಿ ಜೀವನ ನಿರ್ವಹಣೆ ಬಲು ದುಬಾರಿ, ಲೀವಿಂಗ್ ಕಾಸ್ಟ್ ಈ ರೀತಿ ಏರಿಕೆಯಾದರೆ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅರಬ್ ದೇಶಗಳಲ್ಲಿ ಧಿರಾಮ್ ಕರೆನ್ಸಿ ಗಳಿಸುತ್ತಿದ್ದರೂ, ಭಾರತಕ್ಕೆ ಬಂದಾಗ ಖಾಲಿ ಖಾಲಿ ಎಂದೆನಿಸುತ್ತಿದೆ ಎಂದು ವ್ಲಾಗರ್ ಹೇಳಿದ್ದಾನೆ. ಅಷ್ಟಕ್ಕೂ ಈತನಿಗೆ ಭಾರತ ದುಬಾರಿ ಅನಿಸಿದ್ದು ಯಾಕೆ?

ಮುಂಬೈನ ಒಂದು ಚಾಯ್ ಕತೆ

ಭಾರತದ ಬಹುತೇಕ ಎಲ್ಲಾ ಕಡೆ ಚಹಾ ಅತ್ಯಂತ ಜನಪ್ರಿಯ ಪಾನಿಯ. ವಿವಿಧ ಬಗೆಯ ಚಹಾಗಳು ಲಭ್ಯವಿದೆ. ಈ ಪೈಕಿ ಮುಂಬೈನಲ್ಲಿ ಚಹಾ ಹಾಟ್ ಕೇಕ್ ರೀತಿಯಲ್ಲಿ ಮಾರಾಟವಾಗುತ್ತದೆ. ಜನರು ಕೂಡ ಚಹಾ ಕುಡಿಯದೇ ಮುಂದೆ ಸಾಗುವುದೇ ಇಲ್ಲ. ವ್ಲಾಗರ್ ಪರೀಕ್ಷಿತ್ ಬಲೂಚ್ ಭಾರತ ಪ್ರವಾಸಕ್ಕೆ ಆಗಮಿಸಿದ್ದಾನೆ. ಸೋಶಿಯಲ್ ಮೀಡಿಯಾ ಮೂಲಕ ಹಲವು ದೇಶಗಳಿಗೆ ತೆರಳಿ ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಪ್ರದೇಶಗಳ ಕುರಿತು ಬೆಳಕು ಚೆಲ್ಲುವ ವ್ಲಾಗರ್, ಮುಂಬೈಗೆ ಆಗಮಿಸಿದ್ದಾನೆ. ಬಳಿಕ ಪ್ರತಿಷ್ಠಿತ ಹೊಟೆಲ್‌ನಲ್ಲಿ ಚಹಾ ಕುಡಿಯಲು ತೆರಳಿದ್ದಾನೆ. ಚಹಾ ಕುಡಿದ ಬಳಿಕ ಬಿಲ್ ನೋಡಿದಾಗ ಅಚ್ಚರಿಯಾಗಿದೆ. ಕಾರಣ ಒಂದು ಚಹಾಗೆ 1,000 ರೂಪಾಯಿ ಬಿಲ್ ಮಾಡಲಾಗಿದೆ. ಭಾತೀಯರು 1,000 ರೂಪಾಯಿ ನೀಡಿ ಚಹಾ ಕುಡಿಯುತ್ತಿದ್ದಾರೆ. ಇಲ್ಲಿನವರು ತುಂಬಾ ಶ್ರೀಮಂತರು ಎಂದಿದ್ದಾನೆ.

ನಾನು ನಾನ್ ಇಂಡಿಯನ್ ರೆಸಿಡೆಂಟ್, ಆದರೆ ಈ ಬೆಲೆ ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ. ಒಂದು ಧಿರಾಮ್ ಭಾರತದಲ್ಲಿ ಸರಿಸುಮಾರು 22. 83 ರೂಪಾಯಿ. ಆದರೂ ನನಗೆ ದುಬಾರಿ ಎನಿಸುತ್ತಿದೆ ಎಂದು ವಿಡಿಯೋ ಮೂಲಕ ಹೇಳಿದ್ದಾನೆ. ನಾನೊಬ್ಬ ಎನ್ಆರ್‌ಐ ಆಗಿ ಭಾರತದಲ್ಲಿ ನಾನು ಬಡವಾನದ ಫೀಲ್ ಇದೆ ಎಂದು ಪರೀಕ್ಷಿತ್ ಹೇಳಿದ್ದಾರೆ.

ಪರೀಕ್ಷಿತ್ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಭಾರತದ ಹಲವು ಸಂದರ್ಭದಲ್ಲಿ ದುಬೈಗಿಂತಲೂ ದುಬಾರಿ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂಬೈನಲ್ಲಿ ಚಹಾ ಮಾತ್ರವಲ್ಲ ಎಲ್ಲವೂ ದುಬಾರಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಪಡಿಸಿದ್ದಾರೆ. ದುಬೈನಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಸಿಗಬಹುದು, ಆದರೆ ಮುಂಬೈನಲ್ಲಿ ಸಿಗುವುದು ಕಷ್ಟ ಎಂದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

View post on Instagram