ಅಕ್ಟೋಬರ್ 3ರ ಭಾರತ್ ಬಂದ್ ಮುಂದೂಡಿದ ಆಲ್ ಇಂಡಿಯಾ ಮುಸ್ಲಿಂ ಲಾ ಬೋರ್ಡ್ , ವಕ್ಫ್ ತಿದ್ದುಪಡಿ ವಿರೋಧಿಸಿ ನಡೆಯಬೇಕಿದ್ದ ಭಾರತ್ ಬಂದ್ ಇದೀಗ ಹೊಸ ದಿನಾಂಕದಲ್ಲಿ ನಡೆಯಲಿದೆ. ಯಾವ ದಿನ ಭಾರತ್ ಬಂದ್ ನಡೆಯಲಿದೆ.

ನವದೆಹಲಿ (ಅ.01) ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಭಾರತ್ ಬಂದ್ ಬಿಸಿ ಆತಂಕ ಎದುರಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಲನಲ್ ಲಾ ಬೋರ್ಡ್ (AIMPLB ) ಭಾರತ್ ಬಂದ್ ದಿನಾಂಕ ಮುಂದೂಡಿದೆ. ಅಕ್ಟೋಬರ್ 3ರಂದು ನಡೆಯಬೇಕಿದ್ದ ಭಾರತ್ ಬಂದ್ ಮುಂದೂಡಲಾಗಿದೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸುವುದಾಗಿ ಹೇಳಿದೆ. ವಕ್ಫ್ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು AIMPLB ಕರೆ ಕೊಟ್ಟಿತ್ತು.

AIMPLB ಅಧ್ಯಕ್ಷರಿಂದ ತುರ್ತು ಸಭೆ

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲನಾ ಖಾಲೀದ್ ಸೈಫುಲ್ಲಾ ರಹಮಾನಿ ತುರ್ತು ಸಭೆ ನಡೆಸಿದ್ದಾರೆ. ಮುಸ್ಲಿಂ ಬೋರ್ಡ್ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು. ಅಕ್ಟೋಬರ್ 3ರಂದು ಭಾರತ್ ಬಂದ್‌ಗೆ ತಯಾರಿ ಮಾಡಿಕೊಂಡಿದ್ದ ಲಾ ಬೋರ್ಡ್ ಕೊನೆಗೆ ಈ ಭಾರತ್ ಬಂದ್ ಮುಂದೂಡಲು ಒಪ್ಪಿಗೆ ಸೂಚಿಸಿದ್ದಾರೆ.

ಹಬ್ಬಗಳ ಕಾರಣದಿಂದ ಭಾರತ್ ಬಂದ್ ಮುಂದೂಡಿಕೆ

ಸಾಲು ಸಾಲು ಹಬ್ಬಗಳ ಸಂಭ್ರಮ ನಡೆಯುತ್ತಿದೆ. ಅಕ್ಟೋಬರ್ 2ರಂದು ವಿಜಯದಶಮಿ ನಡೆಯಲಿದೆ. ಮರು ದಿನವೇ ಭಾರತ್ ಬಂದ್ ನಡೆಸಿದರೆ ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಕಠಿಣ ಕ್ರಮಕೊಳ್ಳಬುಹುದು ಎಂದು ಪರ್ಲನಲ್ ಲಾ ಬೋರ್ಡ್ ದೇಶಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ದಿನಾಂಕ ಮುಂದೂಡಿದೆ.

ವಕ್ಫ್ ತಿದ್ದುಪಡಿ ವಿರೋಧಿಸಿ ಭಾರತ್ ಬಂದ್

ಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲು ಎಲ್ಲಾ ತಯಾರಿ ಮಾಡಿಕೊಂಡಿದೆ. ತಿದ್ದುಪಡಿಗಳ ಕುರಿತು ಸದನದ ಜಂಟಿ ಸಮಿತಿಗೆ ಕಳುಹಿಸಲಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಪ್ರಮುಖ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಕ್ಫ್ ತಿದ್ದುಪಡಿ ವಿರೋಧಿಸಿ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಇದೀಗ ವಕ್ಫ್ ತಿದ್ದುಪಡಿ ಕುರಿತು ಗಂಭೀರ ಪ್ರಶ್ನೆಗಳಮುಂದಿಟ್ಟು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಸದ್ಯ ದಿನಾಂಕ ಅಕ್ಟೋಬರ್ 3ರಿಂದ ಬೇರೆ ದಿನಾಂಕಕ್ಕೆ ಬದಲಾಗಿದೆ. ಹೊಸ ದಿನಾ ಮುಸ್ಲಿಂ ಲಾ ಬೋರ್ಡ್ ಸಭೆ ಸೇರಿ ನಿರ್ಧರಿಸಲಿದೆ.